ಇಂದು ಉಡುಪಿ, ದ.ಕ ಹಾಗೂ ಮಲೆನಾಡಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ: ಮೀನುಗಾರರು ಎಚ್ಚರಿಕೆಯಿಂದಿರಲು ಸೂಚನೆ
ಮಂಗಳೂರು: ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ ಹಾಗೂ ಚಿಕ್ಕಮಗಳೂರು, ಮಲೆನಾಡಿನಲ್ಲಿ ಜು.25ರಂದು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮೀನುಗಾರರು ಎಚ್ಚರಿಕೆಯಿಂದಿರಲು ಸೂಚಿಸಿದೆ. ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ […]
ಉಡುಪಿ ಜಿಲ್ಲೆಯ ಹಿರಿಯ ವೈದ್ಯರಿಗೆ ಮಲಬಾರ್ ವಿಶ್ವ ವೈದ್ಯ ಪುರಸ್ಕಾರ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆ ಇವರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಉಡುಪಿ ಜಿಲ್ಲೆಯ ಹಿರಿಯ ವೈದ್ಯರಿಗೆ ಜುಲೈ 24 ರಂದು ಮಲಬಾರ್ ವಿಶ್ವ ವೈದ್ಯ ಪುರಸ್ಕಾರ 2024 ನೀಡಿ ಗೌರವಿಸಲಾಯಿತು. ಹಿರಿಯ ದಂತ ವೈದ್ಯ ಡಾ। ರಮಾನಂದ ಸೂಡ, ಚರ್ಮರೋಗ ತಜ್ಞ ಡಾ। ವಾದಿರಾಜ್ ಕೋಟ, ಡಾ। ಶ್ರೀಪತಿ ಆರ್ ಹಾಗು ಡಾ। ಚಂದ್ರಶೇಖರ ಅಡಿಗ ಇವರನ್ನು ಸಂಸ್ಕೃತಿ ವಿಶ್ವ […]
ಯುವನಿಧಿ ಯೋಜನೆ: ಪ್ರತಿ ತಿಂಗಳು ಸ್ವಯಂ ಘೋಷಣೆ ಕಡ್ಡಾಯ
ಉಡುಪಿ: ರಾಜ್ಯ ಸರಕಾರದ ಯುವನಿಧಿ ಯೋಜನೆಗೆ ನೋಂದಣಿ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ನೋಂದಣಿಮಾಡಿಕೊಳ್ಳಬಹುದಾಗಿದೆ. 2022-23 ನೇ ಹಾಗೂ ಅನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೋಮಾ ಪಡೆದು ನಿರುದ್ಯೋಗಿ ಯಾಗಿರುವವರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ಪದವೀಧರ ನಿರುದ್ಯೋಗಿಗಳಿಗೆ ರೂ 3,000 ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿ ಗಳಿಗೆ ರೂ.1,500 ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಪ್ರತಿ ತಿಂಗಳು ಸ್ವಯಂ ಘೋಷಣೆ […]
ಪಿ.ಎಂ. ಸ್ವ-ನಿಧಿ ಯೋಜನೆ: ಅರ್ಜಿ ಅಹ್ವಾನ
ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿ.ಎಂ. ಸ್ವ-ನಿಧಿ) ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು, ನಗರ ಪ್ರದೇಶದಲ್ಲಿ 2020 ರ ಮಾರ್ಚ್ 24 ರ ಪೂರ್ವದಲ್ಲಿ ಬೀದಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರು ಮತ್ತು ಮನೆ ಮನೆಗೆ ದಿನಪತ್ರಿಕೆ ವಿತರಣೆ, ಹಾಲು ವಿತರಣೆ ವೃತ್ತಿಯಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯಾಪಾರ /ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿ ಹಾಗೂ ಪುನರ್ ಸ್ಥಾಪನೆಗಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ […]
ಉಡುಪಿ: ಮಾನ್ಯತೆ ಹೊಂದಿರುವ ಜಿಲ್ಲೆಯ ಅನುದಾನಿತ ಹಾಗೂ ಅನುದಾನರಹಿತ ಐ.ಟಿ.ಐ ಶಿಕ್ಷಣ ಸಂಸ್ಥೆಗಳ ವಿವರ.
ಉಡುಪಿ: ಭಾರತ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ಒಂದು ವರ್ಷ ಹಾಗೂ ಎರಡು ವರ್ಷ ಅವಧಿಯ ರಾಷ್ಟ್ರೀಯ ಮಟ್ಟದ ತರಬೇತಿಯ ಯೋಜನೆಯನ್ನು ರೂಪಿಸಿದೆ. ಇದು ಶಾಶ್ವತ ಸಂಯೋಜನೆಯನ್ನು ಹೊಂದಿ ಅದರ ನಿಯಮಾನುಸಾರ ಪ್ರವೇಶ, ತರಬೇತಿ, ಪರೀಕ್ಷೆ ಹಾಗೂ ಉದ್ಯೋಗ ಕಲ್ಪಿಸುವ ಯೋಜನೆಯಾಗಿದೆ. ತರಬೇತಿ ಅವಧಿಯಲ್ಲಿ ನಡೆಯುವ ಪ್ರತೀ ಪರೀಕ್ಷೆಗೂ ಕೇಂದ್ರ ಸರ್ಕಾರದಿಂದ ಅಂಕಪಟ್ಟಿ ಹಾಗೂ ಕೊನೆಯಲ್ಲಿ ”ರಾಷ್ಟ್ರೀಯ ವೃತ್ತ್ತಿ ಪ್ರಮಾಣ ಪತ್ರ” ನೀಡಲಾಗುತ್ತದೆ. ಅಂತಹ ಅಭ್ಯರ್ಥಿಗಳಿಗೆ ರಾಜ್ಯ, ರಾಷ್ಟ್ರ, ಹೊರ ರಾಷ್ಟ್ರಗಳಲ್ಲಿ ತಾಂತ್ರಿಕತೆ ಮೇಲೆ […]