ಕಂಚಿನಡ್ಕ ಟೋಲ್ ಸಂಗ್ರಹ ಆದೇಶ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ: ಕ.ರ.ವೇ. ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ

ಕಾಪು: ಹಲವು ವಿಫಲ ಪ್ರಯತ್ನಗಳ ಬಳಿಕ ಇದೀಗ ಮತ್ತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹಕ್ಕೆ ಆದೇಶ ನೀಡಿದ ಬಗ್ಗೆ ತಿಳಿದುಬಂದಿದ್ದು, ಜನವಿರೋಧಿ ಅದೇಶವನ್ನು 10 ದಿನದೊಳಗೆ ರದ್ದುಪಡಿಸದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ. ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅನ್ಸಾರ್ ಅಹಮದ್ ಮಾತನಾಡಿ ಪಡುಬಿದ್ರಿ-ಕಾರ್ಕಳ ರಾಜ್ಯ […]

ತನುಮನ ಸೆಳೆಯಿತು ಕುಮಾರಿ ವಸುಂಧರಾ ಅವರ ಅದ್ಬುತ ನಾಟ್ಯ ಪ್ರಸ್ತುತಿ!

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 55ರಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ವಿದುಷಿ ಕು| ವಸುಂಧರಾ ರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು. ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ ದೇವತೆಗಳಿಗೆ ಗುರುಗಳಿಗೆ ತಂದೆ-ತಾಯಿಯರಿಗೆ ನಮಸ್ಕರಿಸಿ ಬಂದಂತ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸುವ ಪುಷ್ಪಾಂಜಲಿ ಮೂಲಕ ನೃತ್ಯ ಪ್ರಾರಂಭಿಸಿದರು. ಪದವರ್ಣ ಪ್ರಸ್ತುತಿಯಲ್ಲಿ ವರ್ಣವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಲ್ಲಿ ರುಕ್ಮಿಣಿಯು ತನ್ನ […]

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಚಿಕಿತ್ಸೆ ಯಶಸ್ವಿ

ಮಣಿಪಾಲ: ಗಮನಾರ್ಹವಾದ ವೈದ್ಯಕೀಯ ಪ್ರಗತಿಯಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಎಂಡೋಲ್ಟ್ರಾಸೌಂಡ್-ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೊಮಿ (EUS-GJ) ಎಂದು ಕರೆಯಲ್ಪಡುವ ನವೀನ ಎಂಡೋಸ್ಕೋಪಿಕ್ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಈ ವಿಧಾನವನ್ನು ನಡೆಸಲಾಯಿತು, ಅವರು ತೀವ್ರ ತೆರನಾದ ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯಿಂದ ಬಳಲುತ್ತಿದ್ದರು, ಇದರಿಂದಾಗಿ ಅವರಿಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಪ್ರಾಧ್ಯಾಪಕರಾದ ಡಾ.ಶಿರನ್ ಶೆಟ್ಟಿ ನೇತೃತ್ವದ ವೈದ್ಯಕೀಯ ತಂಡವು ಕನಿಷ್ಟ ಅರಿವಳಿಕೆಯಲ್ಲಿ ಈ ಅತ್ಯಾಧುನಿಕ ವಿಧಾನವನ್ನು ಕೈಗೊಳ್ಳಲು ನಿರ್ಧರಿಸಿತು . ಇದು ಜಪಾನಿನ ಎಂಡೋಸ್ಕೋಪಿಸ್ಟ್‌ಗಳ […]

ಭಾರೀ ಗಾಳಿ ಮಳೆ: ಮರ ಬಿದ್ದು ಮನೆ ಸಂಪೂರ್ಣ ಹಾನಿ

ಉಡುಪಿ: ಭಾರೀ ಗಾಳಿ-ಮಳೆಯಿಂದಾಗಿ ಮನೆಯೊಂದರ ಮೇಲೆ‌ ಮರ‌ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ.ಬುಧವಾರ ರಾತ್ರಿ ಭಾರೀ‌ ಗಾಳಿ‌-ಮಳೆ ಬಂದ ಪರಿಣಾಮ ಹೆಮ್ಮಾಡಿ‌ ಗ್ರಾ.ಪಂ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ಮನೆಯ ಮಹಡಿ ಸಂಪೂರ್ಣ ಕುಸಿದ ಪರಿಣಾಮ ಮನೆಯೊಳಗೆ ಮಲಗಿದ್ದ ಸೀತಾ ದೇವಾಡಿಗ ಅವರ ಪತಿ ಶಂಕರ ದೇವಾಡಿಗ ಅವರ […]

ಪರಶುರಾಮ ಥೀಂ ಪಾರ್ಕ್ ವಿವಾದ: ನಿರ್ಮಿತಿ ಕೇಂದ್ರ ನಿರ್ದೇಶಕ ಅರುಣ್ ಕುಮಾರ್ ಅಮಾನತು

ಉಡುಪಿ: ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ನಿರ್ದೇಶಕರಾದ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ. ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ಅನುಷ್ಠಾನ ಅಧಿಕಾರಿಯಾಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ನಿರ್ಮಿಸಿದ್ದು, ಸದ್ರಿ ಕಾಮಗಾರಿಗೆ ಅಂದಾಜು ಮೊತ್ತ ರೂ. 1105 ಲಕ್ಷಕ್ಕೆ ಆಡಳಿತ್ಮಾತಕ ಮಂಜೂರಾತಿಗೊಂಡಿದೆ. ಈ ಪೈಕಿ ರೂ.672.ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿ, ಸದ್ರಿ ಕಾಮಗಾರಿ […]