ಹೆಬ್ರಿಯಲ್ಲಿ ಯಕ್ಷಗಾನ ಭಾಗವತಿಗೆ ತರಗತಿ ಉದ್ಘಾಟನೆ.

ಹೆಬ್ರಿ: ಭಾರತೀಯ ರಂಗಕಲೆಗಳಲ್ಲಿ ಯಕ್ಷಗಾನ ಸಮಷ್ಟಿಕಲೆ ಇದೊಂದು ಆರಾಧನಾ ಕಲೆ. ಭಾಷೆಯಲ್ಲಿ ಹಿಡಿತವಿರುವ ಯಕ್ಷಗಾನ ಕಲೆ ಉಳಿಸಿ ಬೆಳಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಚಾಣಕ್ಯಸಂಸ್ಥೆ ಕಳೆದ 10 ವರ್ಷಗಳಿಂದ ಕಲಾ ಪ್ರಕಾರಗಳೆಲ್ಲವನ್ನು ತರಬೇತಿ ನಿಡುವುದರ ಜತೆಗೆ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಯಕ್ಷಗಾನ ತರಬೇತಿಯ ಜೊತೆ ಭಾಗವತಿಗೆ ತರಗತಿ ಆರಂಭಿಸಿರುವುದು ಶ್ಲಾಘನೀಯ ಎಂದು ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಹೇಳಿದರು. ಅವರು ಹೆಬ್ರಿ ಎಸ್.ಆರ್.ಬಳಿ ಇರುವ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆರಂಭಗೊಂಡ ಯಕ್ಷಗಾನ ಭಾಗವತಿಗೆ […]

ಹೆಬ್ರಿ ಅಮೃತ ಭಾರತಿಯಲ್ಲಿ ಕನ್ನಡ ಗೀತಾ ಗಾನಯಾನ

ಹೆಬ್ರಿ: ಕನ್ನಡದ ಅಭಿಮಾನ ಕೇವಲ ದಿನಕ್ಕೆ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ವಷ೯ವಿಡಿ ಕನ್ನಡ ಗೀತೆಗಳನ್ನು ಸ್ಥಳೀಯ ಗ್ರಾಮೀಣ ಪ್ರತಿಭೆಗಳಿಂದ ಹಾಡಿಸಿ ಕನ್ನಡದ ಜಾಗೃತಿ ಮೂಡಿಸುತ್ತಿರುವುದರ ಜತೆಗೆ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಪಿ ಆರ್ ಎನ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು. ಅವರು ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ಕನಾ೯ಟಕದ ಅಂಗವಾಗಿ ಪಿ ಆರ್ ಎನ್ ಅಮೃತ […]

ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣ: ಮತ್ತೋರ್ವ ಟ್ಯಾಂಕರ್ ಚಾಲಕ ನಾಪತ್ತೆ, ನಾಪತ್ತೆಯಾದವರ ಸಂಖ್ಯೆ 12ಕ್ಕೆ ಏರಿಕೆ.

ಅಂಕೋಲಾ: ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡು ಈವರೆಗೆ 11 ಮಂದಿ ನಾಪತ್ತೆಯಾಗಿದ್ದು, 8 ಜನರ ಮೃತದೇಹ ಗುಡ್ಡ ತೆರವು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜು.24 ರಂದು ಕೇರಳ ಮೂಲದ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಇರುವುದು ಖಚಿತವಾಗಿದ್ದು, ಇದರ ನಡುವೆ ತಮಿಳುನಾಡು ಮೂಲಕ ಮತ್ತೋರ್ವ ಟ್ಯಾಂಕರ್ ಚಾಲಕನೊಬ್ಬನು ನಾಪತ್ತೆಯಾಗಿದ್ದಾರೆ ಅಂತ ಕುಟುಂಬಸ್ಥರು ದೂರು ನೀಡಿದ್ದಾರೆ. ನಾಪತ್ತೆಯಾದವರು ತಮಿಳುನಾಡು ಮೂಲದ ಲಾರಿ ಚಾಲಕ ಶವರಣ. ಶಿರೂರುನಲ್ಲಿ ಗುಡ್ಡ ಕುಸಿತವಾದ ಪಕ್ಕದಲ್ಲೆ ಈತನ ಟ್ಯಾಂಕರ್ ಇತ್ತು. ಅದನ್ನು […]

ಬೇಕಾಗಿದ್ದಾರೆ

ಉಡುಪಿ: ಉಡುಪಿಯ ಜಾಹೀರಾತು ಕಂಪೆನಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.

ಮಂಗಳೂರು: ಪತಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಪತ್ನಿ ನಾಪತ್ತೆ.

ಮಂಗಳೂರು: ಮಹಿಳೆಯೊಬ್ಬಳು ತನ್ನ ಪತಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬಳಿಕ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದವರು ಪ್ರಿಯಾ ರಂಜಿತ್ (25). ಅವರು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜು. 17ರಂದು ಬೆಳಗ್ಗೆ 7.45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಸಂಜೆ 5ಕ್ಕೆ ಪತಿಗೆ ವಾಟ್ ಆ್ಯಪ್ ಮೂಲಕ ಮೆಸೇಜ್ ಮಾಡಿ ‘ತಾನು ಅಮಿತ್ ಎಂಬವನೊಂದಿಗೆ ಹೋಗುತ್ತಿದ್ದು, ತಾಯಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ತಿಳಿಸಿದ್ದಾರೆ. […]