ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ.

ಕುಂದಾಪುರ : ಜುಲೈ 22 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಸಹಭಾಗಿತ್ವ ದಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಅರಿವು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತು. ಶಿರಿಯಾರ ಗೋಪಾಲ್ ಕೃಷ್ಣ ಶೆಟ್ಟಿ ಅವರು ಪ್ರಸ್ತುತ ಕಾನೂನು ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ರಾಧಾಕೃಷ್ಣ ಶೆಣೈ ವಹಿಸಿದ್ದರು.ರೋಟರಿ ಸಂಸ್ಥೆಯ ಅಧ್ಯಕ್ಷರಾದ ಲಿಯಾ ಕತ್ ಅಲಿ , ರೋಟರಿ ಸಂಸ್ಥೆಯ ಅಸಿಸ್ಟೆಂಟ್ […]

ಉಡುಪಿ: ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿದ ಇಬ್ಬರು ಚಾಲಕರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿದ ಘಟನೆ ಸಂಬಂಧಿಸಿ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಕಾಶ್ ಸಾಲಿಯಾನ್ ಅವರು ಅಂಬಲಪಾಡಿ ಗ್ರಾಮದ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ-66 ನೇ ಬಳಿ ಇರುವ ಕಾರ್ ಕೇರ್ ಸರ್ವಿಸ್ ಸೆಂಟರ್ ಸ್ವಲ್ಪ ಮುಂದೆ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಿನ್ನಿಮುಲ್ಕಿ ಸ್ವಾಗತ ಗೋಫುರದ ಕಡೆಯಿಂದ ಬಲಾಯಿಪಾದೆ ಕಡೆಗೆ ಆರೋಪಿ ಆಶ್ರಿತ್ ಎಂಬಾತನು […]

ಉಡುಪಿ: ಜುಲೈ 27, 28ರಂದು ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್

ಉಡುಪಿ: ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮಲ್ಪೆ ಇದರ ವತಿಯಿಂದ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಇದೇ ಜುಲೈ 27ಮತ್ತು 28ರಂದು ಉಡುಪಿ ಅಜ್ಜರಕಾಡಿನ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್ ಆಟಗಾರ ಪ್ರದೀಪ್ ಶೆಟ್ಟಿ ತಿಳಿಸಿದರು.ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರಾವಳಿ ಕರ್ನಾಟಕದ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಈ ಪಂದ್ಯಾಟದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ […]

ಉಡುಪಿ: ಭಾರಿ ವಾಹನಗಳ ಸಂಚಾರ ನಿಷೇಧ.

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ರ ಕಿ.ಮೀ.124.83, ಕಿ.ಮೀ.125.93, ಕಿ.ಮೀ 130.03 ಮತ್ತು ಕಿ.ಮೀ.133.30 ಗಳಲ್ಲಿ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ, ತನಿಕೋಡ್‍ನೊಂದ ಎಸ್.ಕೆ ಬಾರ್ಡರ್‍ವರೆಗೆ (ಕಿ.ಮೀ.123.80 ರಿಂದ ಕಿ.ಮೀ.141.00 ರವರೆಗೆ) ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ, ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ರಾ.ಹೆ 169 ರ 123.80 ಕಿ.ಮೀ ತನಿಕೋಡ್ ಗೇಟ್‍ನಿಂದ 141.00 ಕಿ.ಮೀ ಎಸ್.ಕೆ ಬಾರ್ಡರ್‍ವರೆಗೆ ಅಧಿಕ ಭಾರದ ಸರಕು ಸಾಗಣಿಕೆ […]

ನಿಮಗೆ ಶ್ರವಣ ಸಮಸ್ಯೆ ಇದೆಯೇ.. ಹಾಗಾದರೆ ಇಲ್ಲಿದೆ ಸೂಕ್ತ ಪರಿಹಾರ.

ಉಡುಪಿ : ಶ್ರವಣದಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದರೆ ಉಡುಪಿಯ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ನಿಮ್ಮ ಅನುಮಾನವನ್ನು ಬಗೆಹರಿಸಿಕೊಂಡು ನಿಮ್ಮ ಜೀವನವನ್ನು ಮತ್ತು ಸಂಬಂಧಗಳನ್ನು ಬಲಪಡಿಸಿಕೊಳ್ಳಿ. ◾ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುತ್ತೀರಾ?◾ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುತ್ತದೆಯೇ ?◾ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿ ಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುತ್ತದೆಯೇ ?◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?◾ನೀವು ಯಾವುದಾದರೂ […]