ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಶ್ರೀಪಾದರಿಗೆ ಪರ್ಯಾಯ ಪುತ್ತಿಗೆ ಮಠದಿಂದ ಭವ್ಯ ಸ್ವಾಗತ

ಉಡುಪಿ: 37 ವರ್ಷಗಳ ನಂತರ ಉಡುಪಿ ರಥಭೀದಿಯ ಭಂಡಾರಿಕೇರಿ ಮಠದಲ್ಲಿ 45ನೇ ಚಾತುರ್ಮಾಸ್ಯ ವೃತ ಕೈಗೊಳ್ಳಲಿರುವ ಭಂಡಾರಿಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಸ್ವಾಮೀಜಿ ಅವರು ಇಂದು ಉಡುಪಿಗೆ ಆಗಮಿಸಿದ್ದಾರೆ. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಕೃಷ್ಣಮಠ ಹಾಗೂ ಸ್ವಾಗತ ಸೇವಾ ಸಮಿತಿ ವತಿಯಿಂದ ಮಠದ ಪಟ್ಟದ ದೇವರು ಹಾಗೂ ಶ್ರೀಪಾದರನ್ನು ಸುವರ್ಣ ಪಲ್ಲಕ್ಕಿಯೊಂದಿಗೆ ನಗರದ ಸಂಸ್ಕೃತ ಕಾಲೇಜಿನ ಬಳಿ ಭವ್ಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ದಿವಾನರಾದ ನಾಗರಾಜ ಆಚಾರ್ಯ ಕಾರ್ಯದರ್ಶಿ ಪ್ರಸನ್ನಚಾರ್ಯ,ರತೀಶ್ ತಂತ್ರಿ , ಪ್ರದೀಪ್ ಕಲ್ಕುರ್ ಸ್ವಾಗತ ಸಮಿತಿಯ […]

ಅಂಬಾಗಿಲು-ಮಣಿಪಾಲ ರಸ್ತೆ ಹೊಂಡಮಯ; ಸ್ವಲ್ಪ ಎಡವಿದ್ರೂ ಜೀವಕ್ಕೆ ಆಪತ್ತು ಗ್ಯಾರಂಟಿ.!

ಉಡುಪಿ: ಉಡುಪಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಹಲವು ರಸ್ತೆಗಳು ಹೊಂಡಗಳಿದ್ದ ತುಂಬಿಹೋಗಿವೆ. ಭಾರಿ ಮಳೆಗೆ ರಸ್ತೆ ಹೊಂಡಗಳಲ್ಲಿ ನೀರು ತುಂಬಿದ್ದು, ಸವಾರರು ತೀವ್ರ ಕಷ್ಟ ಪಡುವಂತಾಗಿದೆ.ಪೆರಂಪಳ್ಳಿಯ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಮೀಪ ರಸ್ತೆಯಲ್ಲಿ ಭಾರಿ ಹೊಂಡಗಳು ಬಿದ್ದಿವೆ.ನಿತ್ಯ ಮಣಿಪಾಲಕ್ಕೆ ಹೋಗುವವರು ಮತ್ತು ಮಣಿಪಾಲದಿಂದ ಬರುವವರಿಗೆ ಈ ರಸ್ತೆಯ ಹೊಂಡಗಳು ಸವಾಲಾಗಿ ಪರಿಣಮಿಸಿವೆ.ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಸವಾರರು ಹಿಡಿಶಾಪ ಹಾಕುತ್ತಲೇ ಸವಾರಿ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಬಳಿ ಈ ಸಮಸ್ಯೆ ಹೇಳಿಕೊಂಡರೆ ಮಳೆಗಾಲ […]

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ

ಉಡುಪಿ: ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ. ಇದರ ನೇರ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವರು ರಾಜೀನಾಮೆ ನೀಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ ಒತ್ತಾಯ ಮಾಡಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸದ ಶೇಖರ ಹಾವಂಜೆ , ಸಿದ್ದರಾಮಯ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುವ ಡಾ. ಹೆಚ್.ಸಿ. ಮಹದೇವಪ್ಪ ಎಸ್.ಸಿ./ ಎಸ್.ಟಿ ಸಮುದಾಯದ ವಿದ್ಯಾರ್ಥಿಗಳ ಹಿತ […]

ಜು.26 ರಂದು ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ.

ಉಡುಪಿ: ಉಡುಪಿ ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಗಿರಿಜ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್, ಜಯಂಟ್ಸ್ ಬ್ರಹ್ಮಾವರ, ಉಡುಪಿ ವೈದ್ಯಕೀಯ ಪ್ರತಿನಿಧಿಗಳ ಸಂಘ, ಅಜ್ಜರಕಾಡು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಿಷನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಜು.26 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ಗಂಟೆ ವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಸ್ತ್ರೀ […]

ಉಡುಪಿ: ಆತಂಕ ಸೃಷ್ಟಿಸಿದ ಯು ಟ್ಯೂಬ್ ಬ್ಲಾಗರ್ ನ ರಕ್ಷಣೆ

ಉಡುಪಿ: ಉಡುಪಿ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಯ್ಟಾಂಡ್ ನಲ್ಲಿ ಯುವಕನೊಬ್ಬ ತಾನು‌ ಯು- ಟ್ಯೂಬ್ ಬ್ಲಾಗರ್ ಎಂದು ಮೊಬೈಲ್ ನಲ್ಲಿ ಚಿತ್ರೀಕರಣ ಹಾಗೂ ರೀಲ್ ಮಾಡಿ ಆತಂಕ ಸೃಷ್ಟಿಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾನೆ.ಮೊಬೈಲ್ ಬಳಕೆಯಿಂದ ಖಿನ್ನತೆಗೋಳಗಾದ ಯುವಕನನ್ನು ವಿಶುಶೆಟ್ಟಿ ಅವರು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಕ್ಷಿಸಲ್ಪಟ್ಟ ಯುವಕನನ್ನು ಹೊರ‌ ಜಿಲ್ಲೆಯ‌ ನಂದ (18 ) ಎಂದು ಗುರುತಿಸಲಾಗಿದೆ. ತಾನು ಮನೋರೋಗಿಯಲ್ಲ ಎಂದು ಸಾಬೀತು ಮಾಡಲು ಹಾಗೂ ಯು – ಟ್ಯೂಬ್ ಬ್ಲಾಗರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ […]