ಮಣಿಪಾಲ ಡಾ. ಟಿಎಂಎಪೈ ಪಾಲಿಟೆಕ್ನಿಕ್ ಹಾಗೂ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಜಂಟಿಯಾಗಿ ಆಯೋಜನೆ

ಮಣಿಪಾಲ: ಮಣಿಪಾಲ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಜಂಟಿಯಾಗಿ ಜುಲೈ 25 (ಗುರುವಾರ) ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಮಂಗಳೂರು ಡಾ ವಿನ್ಸಿ ಸೆಂಟರ್, ಸಾನು ಅರಮನೆ ಕಟ್ಟಡ, 5ನೇ ಮಹಡಿ, ಪಿವಿಎಸ್ ಸರ್ಕಲ್ ಬಳಿ ಸ್ಪಾಟ್ ಅಡ್ಮಿಷನ್ಸ್ ನಡೆಯಲಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದು. ವಿದ್ಯಾರ್ಥಿಗಳಿಗೆ ಒಂದು ಕ್ಯಾಂಪಸ್‌ನಲ್ಲಿ ಎರಡು ಡಿಪ್ಲೋಮಾಗಳು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಹಾಗೂ 100% ಉದ್ಯೋಗ, 100% ಬ್ಯಾಂಕ್ ಲೋನ್, ಹಾಸ್ಟೆಲ್ […]

ಅಂಕೋಲ ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಮೃತರ ಸಂಖ್ಯೆ 8ಕ್ಕೆ ಏರಿಕೆ.

ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದ್ದು, ಕಾರ್ಯಾಚರಣೆ ವೇಳೆ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ. ಮೃತ ಮಹಿಳೆ ಉಳವರೆ ಗ್ರಾಮದ ಸಣ್ಣಿ ಹನುಮಂತ ಗೌಡ (67). ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನು ಉಳಿದ ಮೂವರಿಗೆ ಶೋಧ ಕಾರ್ಯ […]

ಪೆರ್ಡೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ.

ಪೆರ್ಡೂರು: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ನಯನ(17) ಎಂಬುವವರು ಉಡುಪಿ ಜಿಲ್ಲೆಯ ಪೆರ್ಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದವರು. ಜುಲೈ 22 ರಂದು ಬೆಳಿಗ್ಗೆ ಯಾವುದೋ ತನ್ನ ವೈಯುಕ್ತಿಕ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಉಪ್ಪರಿಗೆ ಮಾಡಿನ ಜಂತಿಗೆ ಚೂಡಿದಾರ ಶಾಲನ್ನು ಬಿಗಿದು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ಕುಂಜಿಬೆಟ್ಟು-ದೊಡ್ಡಣ್ಣಗುಡ್ಡೆ ಕಿರು ಸೇತುವೆ ಕುಸಿಯುವ ಭೀತಿ: ಬದಲಿ ರಸ್ತೆಯನ್ನು ಬಳಸುವಂತೆ ಮನವಿ.

ಉಡುಪಿ: ಎಂಜಿಎಂ ಮತ್ತು ದೊಡ್ಡಣ್ಣಗುಡ್ಡೆಯನ್ನು ಸಂಪರ್ಕಿಸುವ ಚಕ್ರತೀರ್ಥ ಸಗ್ರಿ ರಸ್ತೆಯ ನಡುಭಾಗದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಕಿರು ಸೇತುವೆಯು ಕುಸಿಯುವ ಭೀತಿಯಲ್ಲಿದೆ. ವಿಪರೀತ ಮಳೆ ಅಬ್ಬರದಿಂದ ನೀರಿ ನ ಪ್ರಮಾಣ ಹೆಚ್ಚಾಗಿದ್ದು ಸೇತುವೆ ಕುಸಿಯುವ ಅಪಾಯದಲ್ಲಿದೆ ಸದ್ಯ ಈ ರಸ್ತೆ ಯನ್ನು ಬ್ಯಾರಿಕೆಡ್ ಇಟ್ಟು ಬಂದ್ ಮಾಡಲಾಗಿದೆ. ಸಾರ್ವಜನಿಕರು ಹಾಗೇನೆ ವಾಹನ ಚಾಲಕರು ಈ ರಸ್ತೆಯನ್ನು ಉಪಯೋಗಿಸದೆ ಬದಲಿ ರಸ್ತೆಯನ್ನು ಬಳಸಬೇಕಾಗಿ ನಗರ ಸಭಾ ಸದಸ್ಯರು ಹಾಗೂ ಸ್ಥಳೀಯರು ಸಾರ್ವಜನಿಕರು ಮನವಿ ಮಾಡಿ ಕೊಂಡಿದ್ದಾರೆ.

ಶಾಸಕ ಸುನೀಲ್ ಕುಮಾರ್ ಅವರಿಂದ ಹಿಂದೂ‌ ಭಾವನೆಗಳಿಗೆ ದಕ್ಕೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕೆ

ಬೆಂಗಳೂರು: ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್‌ ಹಿಂದೂಗಳ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ.ಸುನೀಲ್ ಕುಮಾರ್ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ […]