ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಅರುಣ್ ಕುಮಾರ್ ಎಸ್.ವಿ ಅವರಿಗೆ ಗೌರವಾಭಿನಂದನೆ.
ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಸೇವಾ ನಿವೃತ್ತಿ ಹೊಂದಿದ ಅರುಣ್ ಕುಮಾರ್ ಎಸ್.ವಿ ಇವರಿಗೆ ಗೌರವಾಭಿನಂದನೆ ಕಾರ್ಯಕ್ರಮವು ಉಡುಪಿ ಅಜ್ಜರಕಾಡು ಪುರಭವನ ಮಿನಿಹಾಲ್ನಲ್ಲಿ ಜರಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯಾರವರು, ಕೆ.ಎಂ.ಎಫ್ ನಿರ್ದೇಶಕರು ಹಾಗೂ ಸಂಘದ ಪ್ಯಾನೆಲ್ ಸದಸ್ಯರೂ ಆದ ರವಿರಾಜ್ ಹೆಗ್ಡೆಯವರು ಭಾಗಿಯಾದರು. ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿಯ ಮುಖ್ಯ […]
ತ್ರಿಶಾ ಕ್ಲಾಸಸ್: ಸಿ ಎಸ್ ಎಕ್ಸಿಕ್ಯೂಟಿವ್ ಮಾಹಿತಿ ಕಾರ್ಯಾಗಾರ.
ಉಡುಪಿ: ತ್ರಿಶಾ ಕ್ಲಾಸಸ್ ವತಿಯಿಂದ ಸಿ ಎಸ್ ಎಕ್ಸಿಕ್ಯೂಟಿವ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಜೂನ್ 22ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ವಿದ್ಯಾರ್ಥಿಗಳಿಗೆ ಸಿ ಎಸ್ ಕೋರ್ಸ್ ಹಾಗೂ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು ಮತ್ತು ತ್ರಿಶಾ ಕ್ಲಾಸಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಜ್ಞಾ […]
ಕುಂದಾಪುರ; ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್; ಹಲವು ವಿದ್ಯಾರ್ಥಿಗಳಿಗೆ ಗಾಯ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಚರಂಡಿಗಿಳಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಕೊಲ್ಲೂರು ಸಮೀಪದ ದಳಿಮುರ್ಕ್ಕು ಬಳಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಬಸ್ ಶಿವಮೊಗ್ಗ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಸ್ಸಿನಲ್ಲಿ ಕೊಲ್ಲೂರು ಮೂಕಾಂಬಿಕ ಹೈಸ್ಕೂಲ್ ನ 6 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 11 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಪೈಕಿ ಐವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ.ಘಟನಾ ಸ್ಥಳಕ್ಕೆ ಉಡುಪಿ […]
ಕುಂದಾಪುರದಲ್ಲಿ ಆಕರ್ಷಕ ಬಣ್ಣದ ಕಪ್ಪೆ ಪತ್ತೆ
ಉಡುಪಿ: ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಂಡುಬಂದಿದೆ.ಬಸ್ರೂರಿನಲ್ಲಿ ಸಂದೇಶ್ ಪುತ್ರನ್ ಎಂಬವರ ಮನೆಯಲ್ಲಿ ಈ ವಿಶಿಷ್ಟ ಕಪ್ಪೆ ಕಾಣಿಸಿಕೊಂಡಿದೆ.ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್(ವೈಜ್ಞಾನಿಕ ಹೆಸರು- ಉಪರೋಡಾನ್ ಟ್ಯಾಪ್ರೊಬಾನಿಕಸ್). ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುವ ಈ ಕಪ್ಪೆಯನ್ನು ಶ್ರೀಲಂಕಾ ಬುಲ್ಫ್ರಾಗ್ ಎಂಬುದಾಗಿಯೂ ಕರೆಯಲಾಗುತ್ತದೆ.ಮರದೊಳಗೆ ಇರುವ ಈ ಕಪ್ಪೆ ನಿಂತ ನೀರಲ್ಲಿ ಅಂದರೆ ಕೆರೆ, ಹಳ್ಳಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಕುಂದಾಪುರದಲ್ಲಿ ಕಂಡುಬಂದಿರುವ ಈ ಕಪ್ಪೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಶಿರೂರು: ಗುಡ್ಡ ಕುಸಿತದ ಸ್ಥಳ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ
ಅಂಕೋಲ: ರಣ ಭೀಕರ ಮಳೆಯಲ್ಲಿ ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಾಚರಣೆಯ ಪ್ರಗತಿ ಮತ್ತು SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು-ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿಎಂ ಸೂಚನೆ ನೀಡಿದರು.