ಕಾರ್ಕಳ: ಭಾರೀ ಗಾಳಿಮಳೆಗೆ ರಿಕ್ಷಾದ ಮೇಲೆ ಉರುಳಿಬಿದ್ದ ಮರ; ಪವಾಡ ಸದೃಶ ರೀತಿಯಲ್ಲಿ ಆಟೊ ಚಾಲಕ ಪಾರು
ಉಡುಪಿ: ಕಾರ್ಕಳದಲ್ಲಿ ಸುರಿದ ಭಾರಿ ಗಾಳಿಮಳೆಗೆ ಹಲವಾರು ಕಡೆಗಳಲ್ಲಿ ಮರ ಉರುಳಿ ಅನಾಹುತ ಸಂಭವಿಸಿದೆ.ಕಾರ್ಕಳ ಬಸ್ ನಿಲ್ದಾಣದ ಬಳಿ ಬೃಹತ್ ಗಾತ್ರದ ಆಲದ ಮರವೊಂದು ರಿಕ್ಷಾದ ಮೇಲೆ ಬಿದ್ದು ರಿಕ್ಷಾ ಜಖಂಗೊಂಡಿದೆ. ಆಟೊ ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಲ್ಲದೇ ವಿದ್ಯುತ್ ಕಂಬವೊಂದು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ದ್ವಿಚಕ್ರ ವಾಹನ ಪೂರ್ತಿ ಜಖಂಗೊಂಡಿದೆ. ಮರದ ಜೊತೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಯಿತು. ಹಲವು ವಿದ್ಯುತ್ […]
ಜುಲೈ 25ರಿಂದ ಉಡುಪಿಯಲ್ಲಿ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರ 45ನೇ ಚಾರ್ತುಮಾಸ್ಯ ವೃತ
ಉಡುಪಿ: ಉಡುಪಿಯ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರು ಜುಲೈ 25ರಿಂದ ಸೆಪ್ಟೆಂಬರ್ 18ರ ವರೆಗೆ ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ 45ನೇ ಚಾರ್ತುಮಾಸ್ಯ ವೃತವನ್ನು ಕೈಗೊಳ್ಳಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ತಿಳಿಸಿದರು. ಉಡುಪಿ ಕೃಷ್ಣಮಠದ ಕನಕ ಮಂಟಪದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈ ಅವಧಿಯಲ್ಲಿ ಶ್ರೀಗಳಿಂದ ಮಠದಲ್ಲಿ ದಿನನಿತ್ಯ ಪಟ್ಟದ ದೇವರ ಪೂಜೆ, ಧಾರ್ಮಿಕ ವಾಠ-ಪ್ರವಚನ, ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ. ಹಾಗೆ, ಉಡುಪಿ ಸುತ್ತಮುತ್ತಲಿನ ಭಕ್ತರ ಮನೆಗಳಲ್ಲಿ […]
ಉಡುಪಿ: ಭಾರತ್ ಮಾರ್ಕೆಟಿಂಗ್ ಮತ್ತು ಹ್ಯಾವೆಲ್ಸ್ ಇಂಡಿಯಾ ಕಂಪನಿಯ ವತಿಯಿಂದ ಎಲೆಕ್ಟ್ರಿಷಿಯನ್’ಗಳಿಗೆ ಕಾರ್ಯಾಗಾರ.
ಉಡುಪಿ: ಎಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ, ಹ್ಯಾವೆಲ್ಸ್ ಇಂಡಿಯಾ ಜಂಟಿಯಾಗಿ ಭಾರತ್ ಮಾರ್ಕೆಟಿಂಗ್ ಸಹಭಾಗಿತ್ವದಲ್ಲಿ ಜುಲೈ 21ರಂದು ಮಹಾರಥ ಕಿದಿಯೂರು ಹೋಟೆಲ್ ನ ‘ಅನಂತ ಶಯನ’ ಹಾಲ್ ನಲ್ಲಿ ಎಲೆಕ್ಟ್ರಿಷಿಯನ್ ಗಳಿಗೆ ಕಾರ್ಯಾಗಾರ ನಡೆಯಿತು. ಇದು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಕೌಶಲ್ಯದಿಂದ ಯಶಸ್ಸಿನವರೆಗೆ ಎಲೆಕ್ಟ್ರಿಷಿಯನ್ ಗಳನ್ನು ಕೊಂಡೊಯ್ಯಲು ಸಹಕಾರಿಯಾಗಿದೆ. ಈ ಕಾರ್ಯಾಗಾರದಲ್ಲಿ 320ಕ್ಕೂ ಮಿಕ್ಕಿ ಉಡುಪಿ ಜಿಲ್ಲೆಯ ಎಲೆಕ್ಟ್ರಿಷಿಯನ್ ಗಳು ಭಾಗಿಯಾಗಿದ್ದರು. ಕೇಂದ್ರ ಸರ್ಕಾರದ ಸಂಪನ್ಮೂಲ ವ್ಯಕ್ತಿಯಾಗಿ ಹೈದರಾಬಾದ್ ನ ಶ್ಯಾಮ್ ಪ್ರಸಾದ್ […]
ಮೊಹರಂ ಉಡುಗೊರೆ: ಆರು ವರ್ಷಗಳ ನಂತರ ಹೃದಯ ಸ್ಪರ್ಶಿಸುವ ಪುನರ್ಮಿಲನ.
ಮಂಗಳೂರು: 2024 ರಂದು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರವು ಒಂದು ಹ್ರದಯ ಸ್ಪರ್ಶಿಸುವ ಪುನರ್ಮಿಲನವನ್ನು ಜುಲೈ 18 ರಂದು ಆಚರಿಸಲಾಯಿತು. ನವೆಂಬರ್ 9 ರಂದು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಿಂದ ಮಾನಸಿಕ ಅಸ್ವಸ್ಥ ಯುವಕನನ್ನು ಕೇಂದ್ರವು ರಕ್ಷಿಸಿ ಸ್ನೇಹಾಲಯದಲ್ಲಿ ಬರ್ತಿ ಮಾಡಲಾಗಿತ್ತು. ದಾಖಲಾತಿಯ ಸಮಯದಲ್ಲಿ ಆತನ ಮಾನಸಿಕವಾಗಿ ಅತೀ ರೇಗಾಟದ ಸ್ಥಿತಿಯಲ್ಲಿ ಇದ್ದುದರಿಂದ ಅವನ ಗುರುತನ್ನು ತಿಳಿಯಲು ಸಾಧ್ಯವಾಗದೆ, ಅವನಿಗೆ ಬಬ್ಲು ಎಂದು ಹೆಸರಿಸಲಾಯಿತು ಹಾಗೂ ಸ್ನೇಹಾಲಯದಲ್ಲಿ ಆತನಿಗೆ ಉತ್ತಮ ಆರೈಕೆಯನ್ನು ನೀಡಲಾಯಿತು. ಅಧಿಕೃತ […]
ಉಡುಪಿ: ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಆರ್ ಶೆಟ್ಟಿ ದಂಪತಿಗೆ ನುಡಿನಮನ
ಉಡುಪಿ: ಅಂಬಲಪಾಡಿಯ ಮನೆಯಲ್ಲಿ ಬೆಂಕಿ ಅನಾಹುತ ಅವಗಢದಲ್ಲಿ ಮೃತ ಪಟ್ಟ ಲಯನ್ ರಮಾನಂದ ಶೆಟ್ಟಿ ಮತ್ತು ಲಯನ್ ಅಶ್ವಿನಿ ಆರ್ ಶೆಟ್ಟಿ ದಂಪತಿಗಳಿಗೆ ಜು 19 ರಂದು ಬಡಗಬೆಟ್ಟು ಸೊಸೈಟಿ ಯ ಜಗನ್ನಾಥ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಉಡುಪಿ ಚೇತನದ ವತಿಯಿಂದ ನುಡಿ ನಮನದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಲಯನ್ಸ್ ಮಾಜಿ ಗವರ್ನರ್ ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಓರ್ವ ಶ್ರೇಷ್ಠ ಉದ್ಯಮಿ, ಸಮಾಜ ಸೇವಕರಾದ ಲಯನ್ ರಮಾನಂದ ಶೆಟ್ಟಿ ದಂಪತಿಗಳ ನಿಧನ ಸಮಾಜಕ್ಕೆ ಆದ ದೊಡ್ಡ […]