ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಸಂಭ್ರಮದ ಗುರುಪೂರ್ಣಿಮೆ ಆಚರಣೆ
ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗುರು ಹುಣ್ಣಿಮೆ ಕಾರ್ಯಕ್ರಮ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶಿಷ್ಯ ವರ್ಗದ ಸಹಕಾರದೊಂದಿಗೆ ಸಂಭ್ರಮದೊಂದಿಗೆ ಆಚರಿಸಲಾಯಿತು.. ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮನ್ಯು ನಾಮಕ ಲಕ್ಷ್ಮಿ ನರಸಿಂಹ ಯಾಗವು ಪೆರಡೂರಿನ ದಿನೇಶ್ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು.ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತ ಸಮೂಹ ಶ್ರೀ ಗುರೂಜಿಯವರನ್ನು […]
ಮಳೆ, ನೆರೆ; ಜಿಲ್ಲಾಡಳಿತದಿಂದ ಸಮರ್ಥ ನಿರ್ವಹಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ: ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಉಡುಪಿ ಜಿಲ್ಲಾಡಳಿತ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಅಧಿಕಾರಗಳೊಂದಿಗೆ ಭಾನುವಾರ ಭೇಟಿ ನೀಡಿದ ಸಚಿವರು, ಮಳೆ ಹಾನಿಯಿಂದ ಆದ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಧಾನ ಮಂಡಲ ಅಧಿವೇಶನ ನಡೀತಾ ಇದೆ. ಮಳೆ ಪರಿಸ್ಥಿತಿ ಕುರಿತು […]
ಶಿರೂರು ಗುಡ್ಡ ಕುಸಿತ: ನೀರುಪಾಲಾಗಿದ್ದ ಟ್ಯಾಂಕರ್ ಗ್ಯಾಸ್ ಖಾಲಿ ಮಾಡುವಲ್ಲಿ ಸುರತ್ಕಲ್ ಯುವಕರು ಯಶ್ವಸಿ
ಸುರತ್ಕಲ್: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿ ನದಿ ಪಾಲಾಗಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್‌ನ ಅನಿಲ ಸೋರಿಕೆಯನ್ನು ಸುರತ್ಕಲ್ ಎಚ್‌ಪಿಸಿಎಲ್ ಸ್ಥಾವರದ ಗುತ್ತಿಗೆ ಸಿಬಂದಿಗಳು ಜೀವ ಪಣಕ್ಕಿಟ್ಟು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಎಚ್‌ಪಿಸಿಎಲ್ ಕಂಪೆನಿಯ ಗುತ್ತಿಗೆಯ ಎಸ್ ಪಿ ಎಂಜಿನಿಯರಿಂಗ್ ವರ್ಕ್ಸ್ ನ ಕಾರ್ಮಿಕರು ಎನ್‌ಡಿಆರ್‌ಎಫ್, ನೌಕಾ ದಳ ಹಾಗೂ ಅಗ್ನಿಶಾಮಕ ಸಿಬಂದಿ ಜತೆ ಸೇರಿ ಅನಿಲವನ್ನು ಖಾಲಿ ಮಾಡಿದ್ದಾರೆ. ಬಾಳ ಗ್ರಾಮದ ಸಂಕೇತ ಪೂಜಾರಿ, ಕುಳಾಯಿಗುಡ್ಡೆ ನಿವಾಸಿ ಮನೋಜ್, ಜನತಾ ಕಾಲನಿಯ ರತನ್, ಕಾವೂರಿನ […]
ಉಡುಪಿ: ಉಚಿತ ವೀಲ್ ಚೇರ್ ಹಸ್ತಾಂತರ
ಉಡುಪಿ: ಯುವ ಸೇವಾ ಸಂಘ (ರಿ ), ಟೀಮ್ ಯುವ ಟೈಗರ್ಸ್ ದುಗ್ಲಿ ಪದವು ಮಂಚಿ ಹಾಗೂ ದಾನಿಗಳಾದ ನಿವೃತ ಸೇನಾನಿ ಅಶೋಕ್ ಕೋಟ್ಯಾನ್, ಸಂದ್ಯಾ ಕೋಟ್ಯಾನ್ ಹಾಗೂ ನರಸಿಂಹ ಪ್ರತಿಷ್ಠಾನ ಬೆಳ್ಳಂಪಳ್ಳಿಯ ಸ್ಥಾಪಕ ಅಧ್ಯಕ್ಷರಾದ ಉದ್ಯಮಿ ಕಾರ್ತಿಕ್ ಪ್ರಭು ಇವರ ಸಹಾಬಾಗಿತ್ವದೊಂದಿಗೆ ಉಚಿತ ವೀಲ್ ಚೇರ್ ಅನ್ನು ಕಕ್ಕುಂಜೆ ನಿವಾಸಿ ಕೃಷ್ಣ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಉದ್ಯಮಿ ಕಕ್ಕುಂಜೆ ವಾರ್ಡ್ ನ ನಗರಸಭಾ ಸದಸ್ಯರಾದ ನಿಟ್ಟೂರ್ ಬಾಲಕೃಷ್ಣ ಶೆಟ್ಟಿ,ಸಂಘದ ಅಧ್ಯಕ್ಷರಾದ ನರಸಿಂಹನಾಯ್ಕ್, ಕಾರ್ಯ […]
ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಶ್ಲಾಘನೆ
ಶಿರೂರು: ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ SDRF ಮತ್ತು NDRF ತಂಡಗಳ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ಸಿಬ್ಬಂದಿಯ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ […]