ಅಮೃತ ಮಹೋತ್ಸವದ ಪ್ರಯುಕ್ತ ಸತ್ಯನಾಥ್ ಸ್ಟೋರ್ಸ್ನಲ್ಲಿ ವಿಶೇಷ ಕೊಡುಗೆ
ಉಡುಪಿ, ಜು.18: ರಾಜ್ಯದ ಜನರ ಅಚ್ಚುಮೆಚ್ಚಿನ ಸತ್ಯನಾಥ್ ಸ್ಟೋರ್ಸ್ ನಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಒಂದು ಸೀರೆ ಖರೀದಿಸಿದಲ್ಲಿ ಇನ್ನೊಂದು ಸೀರೆಗೆ ಕೇವಲ ರೂ. 75 ಮಾತ್ರ, ಒಂದು ಶರ್ಟ್ ಖರೀದಿಸಿದಲ್ಲಿ ಇನ್ನೊಂದು ಶರ್ಟ್ ಗೆ ಕೇವಲ ರೂ. 75 ಮಾತ್ರ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೇರೂರು ಉಗ್ಗೇಲುಬೆಟ್ಟು ಕಿಂಡಿ ಅಣೆಕಟ್ಟಿಗೆ ಸಿಲುಕಿದ ಮರ ದಿಮ್ಮಿಗಳ ತೆರವು
ಉಡುಪಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೀತಾನದಿ ಉಕ್ಕಿಹರಿಯುತ್ತಿದ್ದು, ರಭಸವಾಗಿ ಹರಿದು ಬರುವ ನೀರಿನ ಜೊತೆ ಕಸ, ತ್ಯಾಜ್ಯ, ಮರದ ದಿಮ್ಮಿಗಳು ತೇಲಿ ಬರುತ್ತಿವೆ.ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಬಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿತ್ತು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ […]
ಜು.20ರಂದು ಮಣಿಪಾಲ MSDCಯಲ್ಲಿ “ಮಣಿ ನೇಯ್ಗೆ” ಕಾರ್ಯಗಾರ.
ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಡ್ರೀಮ್ ಜೋನ್ ನಲ್ಲಿ “ಮಣಿ ನೇಯ್ಗೆ” ಕಾರ್ಯಗಾರ ಜು.20ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯಲಿದೆ. ಈ ಕಾರ್ಯಗಾರದಲ್ಲಿ ತಜ್ಞರ ಮಾರ್ಗದರ್ಶನದಿಂದ ಅತ್ಯಾಕರ್ಷಕ ಮಣಿ ನೇಯ್ಗೆ ಮತ್ತು ಆಭರಣಗಳನ್ನು ರಚಿಸಲು ಕಲಿಯಿರಿ. ಹಾಗೂ ಈ ಕೌಶಲ್ಯ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ. ನೋಂದಣಿ ಮಾಡಿ, ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡ್ರೀಮ್ ಜೋನ್, msdc ಕಟ್ಟಡ, 2 […]
ಜುಲೈ 28ರಂದು ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಉಡುಪಿ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೇ ಜುಲೈ 28ರಂದು ಬ್ರಹ್ಮಾವರದ ಸಿಟಿ ಸೆಂಟರ್ ಕುಂಕುಮ ಸಭಾಂಗಣ ದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 11ಗಂಟೆಗೆ ವಾರ್ಷಿಕ ಮಹಾಸಭೆ ಹಾಗೂ ಬೆಳಿಗ್ಗೆ 11.30ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಬೆಂಗಳೂರು ಮಯೂರ್ ಗ್ರೂಪ್ ಹಾಗೂ ಕುಂದಾಪುರ ಕೇಕ್ ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಚೇರ್ ಮೆನ್ ಆ್ಯಂಡ್ ಮ್ಯಾನೇಜಿಂಗ್ ಡೈರೆಕ್ಟರ್ […]
ಉಡುಪಿ: ತಲೆ ಛಿದ್ರಗೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಆತ್ಮಹತ್ಯೆ ಶಂಕೆ
ಉಡುಪಿ: ಸಗ್ರಿ ರೈಲು ಸೇತುವೆ ಸಮೀಪದ ರೈಲು ಹಳಿಯ ಬಳಿ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ತಡರಾತ್ರಿ ಪತ್ತೆಯಾಗಿದೆ.ಮೃತವ್ಯಕ್ತಿಯನ್ನು ಉಡುಪಿ ಮೂಡಬೆಟ್ಟು ನಿವಾಸಿ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ. ವ್ಯಕ್ತಿಯ ತಲೆ ಭಾಗ ಛಿದ್ರಗೊಂಡಿದ್ದು, ರೈಲು ಬಡಿದು ಅಥವಾ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಆಧಾರ್ ಚೀಟಿ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿ ಬಂದ ಮಣಿಪಾಲ ಠಾಣೆಯ ಎಸ್ ಐ ರಾಘವೇಂದ್ರ ಸಿ ಮತ್ತು ಅವರ ತಂಡ ಮಹಜರು ಪ್ರಕ್ರಿಯೆ ನಡೆಸಿದರು. ಬಳಿಕ ಸಮಾಜಸೇವಕ […]