ನಾಟಾದಲ್ಲಿ ಎಕ್ಸ್ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸಾಧನೆ.
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ರಾಜ್ಯಮಟ್ಟದ ಆರ್ಕಿಟೆಕ್ಟರ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 100 ರ್ಯಾಂಕ್‌ನೊಳಗಿನ ರಾಂಕ್ ಪಡೆದಿದ್ದಾರೆ. ಸಂಜನ್ ನಾಯಕ್ ಕೆ. 53, ರಿತ್ವಿಕಾ ಸುಧಾಕರ್ ರೈ 64, ಅಮೃತ್ಯ ಆರ್.ಭಟ್ 76, ಸ್ತುತಿ 88, ನಂದಿತಾ ಸಿ.ಗಡದ್ 110, ಸುರೇಖಾ ವೈ 117, ಹಾಸಿನಿ ಎಂ.ಎಸ್.142, ಎಸ್.ರಿತಿಕಾ 250ನೇ ರ್ಯಾಂಕ್ ಪಡೆದ ಎಕ್ಸ್ಪರ್ಟ್ ವಿದ್ಯಾರ್ಥಿಗಳಾಗಿದ್ದಾರೆ. ಈ ರ್ಯಾಂಕ್ ಪಟ್ಟಿಯನ್ನು ನಾಟಾ ಪರೀಕ್ಷೆಯ ಒಟ್ಟು ಅಂಕಗಳನ್ನು ಪರಿಗಣಿಸಿ ಕರ್ನಾಟಕ […]
ತನಿಷ್ಕ್’ನಲ್ಲಿ ಫೆಸ್ಟಿವಲ್ ಆಫ್ ಡೈಮಂಡ್ಸ್’ ವಿಶೇಷ ಮಾರಾಟ
ಮಂಗಳೂರು, ಜುಲೈ 18: ಟಾಟಾ ಉದ್ಯಮ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರೀಟೆಲ್ ಬ್ರ‍್ಯಾಂಡ್ ತನಿಷ್ಕ್, ವಜ್ರಗಳ ಮೋಡಿ ಮಾಡುವ ಉತ್ಸವವನ್ನು ಹಮ್ಮಿಕೊಂಡಿದೆ. ನೈಸರ್ಗಿಕ ವಜ್ರಗಳ ಮಾಂತ್ರಿಕತೆ ಮತ್ತು ಅವುಗಳ ಕಾಲಾತೀತ ಸೌಂದರ್ಯವನ್ನು ನೋಡಬಹುದಾಗಿದೆ. ತನಿಷ್ಕ್ ಅವರ ‘ಫೆಸ್ಟಿವಲ್ ಆಫ್ ಡೈಮಂಡ್ಸ್’ ನಲ್ಲಿ, ಪ್ರತಿ ಅಭಿರುಚಿ ಮತ್ತು ಸಂದರ್ಭಗಳಿಗನುಗುಣವಾಗಿ 10,000ಕ್ಕೂ ಹೆಚ್ಚು ನೈಸರ್ಗಿಕ ವಜ್ರದ ಆಭರಣ ವಿನ್ಯಾಸಗಳನ್ನು ಹೊಂದಿದೆ. ಕ್ಲಾಸಿಕ್ ಸೊಬಗಿನ ಸಾರವನ್ನು ಸೆರೆಹಿಡಿಯುವ ಅಪರಿಮಿತ ಸಾಲಿಟೇರ್‌ಗಳಿಂದ ಹಿಡಿದು ಅಸಾಧಾರಣ ಕರಕುಶಲತೆಯನ್ನು ಪ್ರದರ್ಶಿಸುವ ಸಂಕೀರ್ಣವಾದ ಬಹು-ಹರಳಿನ […]
ಉಡುಪಿ: ಮಹಾಮಳೆಗೆ ಮನೆಯ ಗೋಡೆ ಕುಸಿತ; ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡ ಮನೆಯವರು
ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಕಟ್ಟೆಗುಡ್ಡೆಯ ಕುತ್ಪಾಡಿ ಶಾರದಾ ಪೂಜಾರ್ತಿ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಹತ್ತು ನಿಮಿಷದ ಮೊದಲು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.ಸುಮಾರು 30 ವರ್ಷಗಳ ಹಿಂದಿನ ಮನೆಯಾಗಿದ್ದು, ಕುಟುಂಬಸ್ಥರು ಮಣ್ಣಿನ ಗಾರೆ ಮಾಡಿ ಮನೆ ನಿರ್ಮಾಣ ಮಾಡಿದ್ದರು. ಈ ಮನೆಯಲ್ಲಿ ಒಟ್ಟು 10 ಮಂದಿ ವಾಸ ಮಾಡುತ್ತಿದ್ದರು. ಮನೆಯೊಳಗಿದ್ದ ದಾಖಲೆ […]
ಮೈದುಂಬಿ ಹರಿಯುತ್ತಿರುವ ಉಡುಪಿ ನಗರದ ಜೀವನದಿ ಸ್ವರ್ಣೆ
ಉಡುಪಿ: ಪಶ್ಚಿಮಘಟ್ಟ ಹಾಗೂ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಉಡುಪಿ ನಗರದ ಜೀವನದಿ ಸ್ವರ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮೇ ತಿಂಗಳ ಅಂತ್ಯದಲ್ಲಿ ಬತ್ತಿಹೋಗಿದ್ದ ಸ್ವರ್ಣೆ, ಇದೀಗ ಮೈದುಂಬಿ ಹರಿಯುತ್ತಿದ್ದಾಳೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸ್ವರ್ಣಾ ನದಿ ಸಂಪೂರ್ಣ ಭರ್ತಿಯಾಗಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ಕೃಷಿಕರಲ್ಲಿ ಮಂದಹಾಸ ಮೂಡಿದರೆ, ತಗ್ಗು ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಹೊರ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಮನೆಗೆ ನೀರು ನುಗ್ಗುವ ಭೀತಿ […]
ಅಂಕೋಲ ಶಿರೂರು ಗುಡ್ಡ ಕುಸಿತ ಪ್ರಕರಣ: ಐದು ವರ್ಷದ ಬಾಲಕಿಯ ಮೃತದೇಹ ಪತ್ತೆ.
ಕಾರವಾರ: ಅಂಕೋಲ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಕ್ಯಾಂಟೀನ್ ಮಾಲೀಕನ ಐದು ವರ್ಷದ ಮಗಳ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಆವಂತಿಕ (5) ಎಂದು ಗುರುತಿಸಲಾಗಿದೆ. ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಬಳಿ ಆವಂತಿಕ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದು 20ಕ್ಕೂ ಹೆಚ್ಚು ಜನರು ಮೃತ ಆಗಿರುವ ಬಗ್ಗೆ ಶಂಕೆ ವ್ಯಕ್ತ ಆಗುವುದರ ಜೊತೆಗೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಘಟನಾ ಸ್ಥಳಕ್ಕೆ ತಜ್ಞರು […]