ಜುಲೈ 20ರಂದು ‘ಉಡುಪಿ ಪ್ರವಾಸೋದ್ಯಮ’ ವಿಚಾರ ಗೋಷ್ಠಿ

ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಆಶ್ರಯದಲ್ಲಿ‌ “ಉಡುಪಿ ಪ್ರವಾಸೋದ್ಯಮ” ಇಂದು ಮತ್ತು ನಾಳೆ ಎಂಬ ವಿಚಾರ ಗೋಷ್ಠಿಯನ್ನು ಉಡುಪಿ ಕಿದಿಯೂರು ಹೋಟೆಲ್ ನ ಮಾಧವಕೃಷ್ಣ ಸಭಾಭವನದಲ್ಲಿ ಜುಲೈ 20ರಂದು ಆಯೋಜಿಸಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಈ ವಿಚಾರಗೋಷ್ಠಿಯಲ್ಲಿ ಉಡುಪಿ ಪ್ರವಾಸೋದ್ಯಮದ ಪ್ರಸ್ತುತ ಪರಿಸ್ಥಿತಿ, ಅವಕಾಶಗಳು, ಸಮಸ್ಯೆಗಳು, ನಿರೀಕ್ಷೆಗಳು ಹಾಗೂ ಬೆಳವಣಿಗೆ […]

ಹೆಬ್ರಿ ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ.

ಹೆಬ್ರಿ: ವಿದ್ಯಾರ್ಥಿಗಳಾದ ನಿಮ್ಮಲ್ಲಿ ನಿಮ್ಮ ಅಧ್ಯಯನ ನಿಮ್ಮ ಕಲಿಕೆ ನಿಮ್ಮನ್ನು ಬೇರೆಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಹಿತ್ಯ ಪೂರಕವಾಗಿದೆ ಎಂದು ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ ಹೇಳಿದರು. ಇವರು, ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ನಾವು ನಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಸಿಕೊಂಡು ನಮ್ಮ ಜೀವನದಲ್ಲಿ ಉನ್ನತ ಮಟ್ಟಕ್ಕೆ […]

ಬ್ರಹ್ಮಗಿರಿ-ಅಜ್ಜರಕಾಡು ಕಳಪೆ ರಸ್ತೆ ಜೆಸಿಬಿ ಮೂಲಕ ತೆರವು

ಉಡುಪಿ: ಕೆಲವು ತಿಂಗಳುಗಳ ಹಿಂದೆಯಷ್ಟೆ ಡಾಂಬರೀಕರಣಗೊಂಡಿದ್ದ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ಮುಖ್ಯ ರಸ್ತೆಯಲ್ಲಿ ಹೊಂಡ ಗುಂಡಿ ಬಿದ್ದಿದ್ದು, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ನಗರಸಭೆ ಪರ್ಯಾಯ ಮಹೋತ್ಸವದ ಅನುದಾನದಿಂದ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಇತ್ತೀಚೆಗೆ ಅದರ ಮೇಲೆ ತೇಪೆ ಹಚ್ಚಿಸಿದ್ದರು.ಇದರ ವಿರುದ್ಧ ಸಮಾಜಸೇವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು. ಇಂದು ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಈ ರಸ್ತೆಯ ತೇಪೆಯನ್ನು ಜೆಸಿಬಿ […]

ಭಾರೀ ವರ್ಷಧಾರೆ- ಉಕ್ಕಿ ಹರಿಯುತ್ತಿರುವ ಪಾಪನಾಶಿನಿ ನದಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿ, ಹೊಳೆ, ತೊರೆ ಉಕ್ಕಿ‌ಹರಿಯುತ್ತಿದೆ.ಕಾಪು ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುರ್ಕಾಲು ಪರಿಸರದಲ್ಲಿ ಹಾದುಹೋಗುವ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದೆ. ಕುರ್ಕಾಲು ಕಿಂಡಿ ಅಣೆಕಟ್ಟು ಬಳಿ ನದಿ ರಭಸದಿಂದ ಹರಿಯುತ್ತಿದ್ದು, ಅಣೆಕಟ್ಟಿಗೆ ಮರಳುಗಾರಿಕೆಗೆ ಬಳಕೆಯಾಗುತ್ತಿದ್ದ ದೋಣಿಯೊಂದು ಸಿಲುಕಿಕೊಂಡಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಆತಂಕ ಶುರುವಾಗಿದೆ. ಮಳೆ ಮುಂದುವರಿದರೆ ಪಾಪನಾಶಿನಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಬರುವ ಸಾಧ್ಯತೆ […]

ಕೇರಳದ ಮೀನಾಕ್ಷಿ ಅಮ್ಮನವರಿಂದ ಕಳರಿಪಯಟ್ಟು ಸಾಹಸ ಕಲೆ ಪ್ರದರ್ಶನ

ಉಡುಪಿ: ತನ್ನ 82ರ ಇಳಿ ವಯಸ್ಸಿನಲ್ಲೂ ನವ ತರುಣಿಯಂತೆ ಮೀನಾಕ್ಷಿ ಅಮ್ಮ ಕಳರಿಪಯಟ್ಟು ಸಾಹಸ ಕಲೆಯನ್ನು ಮಾಡಿ ತೋರಿಸಿದರು. ನಗರದ ಪಿಪಿಸಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಕಳರಿ ಸಮರ ಕಲೆಯ ಪ್ರಾತ್ಯಕ್ಷಿತೆಯಲ್ಲಿ ಅವರು ನೀಡಿದ ಪ್ರದರ್ಶನ ಗಮನ ಸೆಳೆಯಿತು.ಕಳರಿಪಯಟ್ಟು ಪ್ರಾತ್ಯಕ್ಷಿಕೆ ನೀಡಿದ ಮೀನಾಕ್ಷಿ ಅಮ್ಮ, ತನ್ನ ಶಿಷ್ಯರ ಜೊತೆಗೂಡಿ ಲೀಲಾಜಾಲವಾಗಿ ಕಳರಿ ಸಮರ ಕಲೆಯ ಪಟ್ಟುಗಳನ್ನು ಪ್ರದರ್ಶಿಸಿದರು. 82 ವರ್ಷ ವಯಸ್ಸಿನ ಹಿರಿಯ ಜೀವದ ಈ ಅದ್ಭುತ ಸಾಧನೆಯನ್ನು ಕಂಡು ಪ್ರೇಕ್ಷಕರು ಬೆರಗಾದರು. ಕೇರಳದ ಮೀನಾಕ್ಷಿ ಅವರ […]