ಉಡುಪಿ: ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಮೆಕ್ಯಾನಿಕ್ಸ್, ಪ್ರಿ ಡೆಲಿವರಿ ಇನ್ಸ್ಟ್ರಕ್ಟರ್ ಹುದ್ದೆಗೆ ನೇಮಕಾತಿ.

ಉಡುಪಿ: ಹೀರೋ ಮೋಟೋಕಾರ್ಪ್, ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಮೆಕ್ಯಾನಿಕ್ಸ್, ಪ್ರಿ ಡೆಲಿವರಿ ಇನ್ಸ್ಟ್ರಕ್ಟರ್ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್ ಅನ್ನು ನಮ್ಮಲ್ಲಿ ಹಂಚಿಕೊಳ್ಳಿ.✉ [email protected]📞7996855666

ಕಾಪು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ.

ಕಾಪು: ವೈಯಕ್ತಿಕ ಕಾರಣದಿಂದ ಮನನೊಂದ ಕಾಪು ನಿವಾಸಿ ಮೀನಾಕ್ಷಿ ಎಂಬವರ ಮಗ, ಮೀನುಗಾರಿಕೆ ಕೆಲಸ ಮಾಡಿ ಕೊಂಡಿದ್ದ ನಿತೀನ್(33) ಜು.14ರಂದು ಸಂಜೆ ವೇಳೆ ಮನೆ ಒಳಗೆ ಚೀಲ ಹಾಕಿ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ MSDCಯಲ್ಲಿ “ಇಂಟರ್ ನೆಟ್ ತಂತ್ರಜ್ಞಾನ”ದ ಕುರಿತು ಒಂದು ತಿಂಗಳ ಅಲ್ಪಾವಧಿ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ದಲ್ಲಿ ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ. Embedded Systems and loT: 🔹IoT Architecture and life cycle 🔹Platforms for IoT 🔹Real time use cases of IoT […]

ಉಡುಪಿ: ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ವಿಶೇಷ ವರ್ಗದ ಮಕ್ಕಳ ಪ್ರವೇಶಾತಿ – ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 6 ನೇ ತರಗತಿಗೆವಿಶೇಷ ವರ್ಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ಪ್ರವೇಶ ಪಡೆಯಲು ಇಲಾಖೆಯ ವೆಬ್‌ಸೈಟ್ https://cetonline.karnataka.gov.in/kreis24d/Forms/onlineregister.aspx ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳು, ಚಿಂದಿ ಆಯುವವರ ಮಕ್ಕಳು, ಸ್ಮಶಾನ ಕಾರ್ಮಿಕರ ಮಕ್ಕಳು, ಬಾಲಕಾರ್ಮಿಕ ಕೆಲಸದಿಂದ ರಕ್ಷಿಸಲ್ಪಟ್ಟ ಮಕ್ಕಳು, […]

ಉಡುಪಿ: ಜು.18 ರಂದು ನೇರ ಸಂದರ್ಶನ

ಉಡುಪಿ: ನಗರದ ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ ಶೈಕ್ಷಣಿಕ ಕೇಂದ್ರದ ಮಾನಸಿಕ ವಿಭಾಗದ ಮನೋವೈದ್ಯಶಾಸ್ತ್ರ ಹಾಗೂ ಎಂ.ಬಿ.ಬಿ.ಎಸ್ ವಿಭಾಗಕ್ಕೆ ತಲಾ ಒಬ್ಬರಂತೆ ಕಿರಿಯ ಸಲಹೆಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಜುಲೈ 18 ರಂದು ಬೆಳಗ್ಗೆ 11 ಗಂಟೆಗೆ ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಗರಿಷ್ಠ 45 ವರ್ಷ ವಯೋಮಿತಿಯ, ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕನಿಷ್ಠ ಪೋಸ್ಟ್ ಪಿ.ಜಿ ಯಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಹಾಗೂ […]