ಕುಂದಾಪುರ: ದಂಪತಿ ಜಗಳ ಠಾಣೆಯಲ್ಲಿ ಇತ್ಯರ್ಥ: ವಾಪಾಸ್ ಬರುವಾಗ ಹೊಳೆಗೆ ಹಾರಿದ ಪತಿ

ಉಡುಪಿ: ಕುಂದಾಪುರ ತಾಲೂಕಿನ ಕಂಡೂರಿನಲ್ಲಿ ಗಂಡ ಹೆಂಡತಿ ಪರಸ್ಪರ ಜಗಳ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಪತಿ ಹೊಳೆಗೆ ಹಾರಿ ಆತ್ಮಹತ್ಯೆ ಯತ್ನಿಸಿ ನಾಪತ್ತೆಯಲ್ಲಿ ಅಂತ್ಯಗೊಂಡಿದೆ. ಹೊಳೆಗೆ ಹಾರಿದ ವ್ಯಕ್ತಿಯನ್ನು ಕಾಳಾವರ ಗ್ರಾಮದ ಅಂಗನವಾಡಿ ಸಮೀಪ ನಿವಾಸಿ ಹರೀಶ್ ಭೋವಿ (40) ಎಂದು ಗುರುತಿಸಲಾಗಿದೆ. ಹರೀಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರು. ಆಗಾಗ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಜಗಳ ತಾರಕಕ್ಕೇರಿ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪತ್ನಿ ಕಂಡೂರು […]
ಭಾರೀ ವರ್ಷಧಾರೆಗೆ ಬೈಂದೂರು ತಾಲೂಕಿನ ಗದ್ದೆ, ತಗ್ಗುಪ್ರದೇಶ ಜಲಾವೃತ; ಮುಳುಗಡೆಗೊಂಡ ಪ್ರದೇಶಗಳ ದೃಶ್ಯಾವಳಿ ಡ್ರೋನ್ ಕ್ಯಾಮರಾದಲ್ಲಿ ಸೆರೆ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಭಾರೀ ವರ್ಷಧಾರೆ ಆಗುತ್ತಿದ್ದು, ಗದ್ದೆ, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಜಲಾವೃತಗೊಂಡ ಪ್ರದೇಶಗಳು ದೃಶ್ಯಾವಳಿ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.ತಾಲೂಕಿನ ಸೌಪರ್ಣಿಕಾ, ಶಾಂಭವಿ, ಚಕ್ರ, ಪಂಚಗಂಗಾವಳಿ, ಎಡಮಾವಿನಹೊಳೆ ಹಾಗೂ ಕುಜ್ಜ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕಾಲುಸಂಕಗಳಲ್ಲಿ ನೀರು ಮೇಲೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.ಮಳೆ ನೀರು ರಸ್ತೆಯ ಮೇಲೆಯಿಂದಲೇ ಹರಿಯುತ್ತಿದ್ದು, ಅನೇಕ ಗ್ರಾಮದ ಸಂಪರ್ಕ ಕೊಂಡಿ ಕಡಿತಗೊಂಡಿದೆ.
ಉಡುಪಿ: ಅಗ್ನಿ ದುರಂತ; ಚಿಕಿತ್ಸೆ ಫಲಿಸದೆ ಉದ್ಯಮಿ ರಮಾನಂದ ಶೆಟ್ಟಿ ಪತ್ನಿ ನಿಧನ

ಉಡುಪಿ: ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ (43) ಅವರು ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿತ್ತು. ಮನೆಯಲ್ಲಿ ಆವರಿಸಿದ್ದ ದಟ್ಟಹೊಗೆಯಿಂದ ಉಸಿರುಗಟ್ಟಿ ರಮಾನಂದ ಶೆಟ್ಟಿ ಅವರು ನಿನ್ನೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ಅಶ್ವಿನಿ ಅವರು ಮಣಿಪಾಲ […]
ಶಿಲ್ಪಿ ಶಿವರಾಜ್ ಕುಮಾರ್ ಅವರಿಗೆ ಗೌರವ ಸನ್ಮಾನ

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಯ ಸಾನಿಧ್ಯದಲ್ಲಿ ಪರಿವಾರ ಶಕ್ತಿಯಾಗಿ ಪ್ರತಿಷ್ಠಾಪನೆಗೊಂಡ ಶ್ರೀ ಪ್ರಸನ್ನಕ್ಷೆಯ ಶಿಲಾಬಿಂಬ ರಚಿಸಿ ಕೊಟ್ಟ ಮೈಸೂರಿನ ಕಲಾ ಕೃತಿ ಸಂಸ್ಥೆಯ ಶಿಲ್ಪಿ ಶಿವರಾಜ್ ಕುಮಾರ್ ಇವರನ್ನು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಗೌರವಿಸಿ ಸನ್ಮಾನಿಸಿದರು.. ಪ್ರತಿಷ್ಠೆಯ ನೇತೃತ್ವ ವಹಿಸಿದ ಶ್ರೀಯುತ ಗಣೇಶ್ ಸರಳಾಯ ಇವರನ್ನು ಗೌರವಿಸಲಾಯಿತು.. ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕ್ಷೇತ್ರ […]
ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ನಾಪತ್ತೆ – ನೀರಿನಲ್ಲಿ ಕೊಚ್ಚಿ ಹೋದ ಟ್ಯಾಂಕರ್.!

ಉಡುಪಿ: ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡವೊಂದು ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಹೆದ್ದಾರಿ ಪಕ್ಕದಲ್ಲಿಯೇ ಚಹಾ ಅಂಗಡಿಯ ಬದಿಯಲ್ಲಿ ಇದ್ದ ಮನೆ ಸಂಪೂರ್ಣ ಕೊಚ್ಚಿ ಹೋಗಿದೆ. ಧರೆ ಕುಸಿದ ರಭಸಕ್ಕೆ ಪಕ್ಕದಲ್ಲಿಯೇ ನಿಂತಿದ ಲಾರಿ ಗಂಗಾವಳಿ ನದಿಯಲ್ಲಿ ತೇಲಿ ಬಂದಿದೆ. ಈ ಘಟನೆ ಕಂಡ ಜನರು ಭಯ ಭೀತರಾಗಿದ್ದಾರೆ.ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ […]