ಕಾಪಿರೈಟ್ ಉಲ್ಲಂಘನೆ ಆರೋಪ: ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನಲ್ಲಿ ಕೇಸು ದಾಖಲು.

ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯ ಎರಡು ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ನವೀನ್ ಅವರು ಆರೋಪಿಸಿದ್ದಾರೆ. ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಿದ್ದಾಗಿ ರಕ್ಷಿತ್ ಶೆಟ್ಟಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ ರಕ್ಷಿತ್ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಆರೋಪದಡಿಯಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ದೂರವಾಣಿ ಕರೆ ಮಾಡಿ […]
ಸಿ.ಎ. ಅಂತಿಮ ಪರೀಕ್ಷಾ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ, 38 ವಿದ್ಯಾಥಿಗಳು ಉತ್ತೀರ್ಣ.

ಮೂಡುಬಿದಿರೆ: 2024 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ, ಪ್ರೀತಿಶ್ ಕುಡ್ವಾ, ಜೊನಿಟಾ ಜೋಶ್ನಿ ಸೋಜಾ ಡಿ, ಸಾಹುಲ್ ಹಮೀದ್, ಅನುಷಾ ಹೆಗ್ಡೆ, ಮೆಲ್ವಿನ್ ಜೋಸ್ವಿನ್ ಲೋಬೋ, ಪಲ್ಲವಿ ಹೆಚ್ ಆರ್, ಪ್ರಜ್ವಲ್, ವಿಲಿಟಾ ಆಲ್ವಿಶಾ ರೇಗೊ, ಆಂಚಲ್, ಸುಷ್ಮಾ ಎನ್, ಕಿರಣ್ ಚಂದ್ರಶೇಖರ್ ಶೇರಿಗಾರ್, ರೋಯ್ಡನ್, ಕೌಶಿಕ್, ಕಿರಣ್ ಭಾರಧ್ವಜ್, ರಜತ್ ಜೈನ್, ಶುಭಂಕರ್, ರಾಕೇಶ್,ಪ್ರಖ್ಯಾತ್, ಪವನ್, ನಾಗರಾಜ್ ಜಿ ಶೆಟ್ಟಿ, ಹೇಮಂತ್ […]
ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು.

ವಿನಾಯಕ್ ಕಾಮತ್ ಕೆ.:ಸಿಎ ಅಂತಿಮ ಪರೀಕ್ಷೆಯಲ್ಲಿ ವಿನಾಯಕ್ ಕಾಮತ್ ಕೆ. ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಉಡುಪಿ ಕುಂಜಿಬೆಟ್ಟು ವಿನುತಾ ಕಾಮತ್ ಮತ್ತು ಗಣೇಶ್ ಕಾಮತ್ ದಂಪತಿಯ ಪುತ್ರ. ತೇಜಸ್ವಿನಿ ಕಾಮತ್:ಸಿಎ ಪರೀಕ್ಷೆಯಲ್ಲಿ ತೇಜಸ್ವಿನಿ ಕಾಮತ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಉಡುಪಿ ದೊಡ್ಡಣಗುಡ್ಡೆಯ ವಿಜಯಶ್ರೀ ಶೆಣೈ ಮತ್ತು ಉದಯ ಕುಮಾರ್ ಕಾಮತ್ ದಂಪತಿಯ […]
ಉಡುಪಿ: ಮನೆಯಲ್ಲಿ ಅಗ್ನಿ ಅವಘಡ: ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕ ರಮಾನಂದ ಶೆಟ್ಟಿ ಮೃತ್ಯು; ಪತ್ನಿ ಗಂಭೀರ

ಉಡುಪಿ: ನಗರದ ಬಾರ್ ಮಾಲೀಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲೀಕ ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.ಉಡುಪಿ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ […]
ಉಡುಪಿ: ಎಚ್.ಕೆ. ಸುಗಂಧಿನಿ ಅವರ ಸಂಶೋಧನೆಯ ಪ್ರಬಂಧಕ್ಕೆ ಮಾಹೆ ಮಣಿಪಾಲದಿಂದ ಪಿಎಚ್‌ಡಿ ಪದವಿ

ಉಡುಪಿ: ಎಚ್.ಕೆ. ಸುಗಂಧಿನಿ ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮೇಲ್ವಿಚಾರಣೆಯಲ್ಲಿ ನಿರ್ವಹಿಸಿದ ‘ಡ್ಯುರಾಬಿಲಿಟಿ ಪ್ರಾಪರ್ಟೀಸ್ ಆಫ್ ನೋ ಅಗ್ರಿಗೇಟ್ ಕಾಂಕ್ರೀಟ್ ಸಬ್ಜೆಕ್ಟೆಡ್ ಟು ಅಗ್ರೆಸ್ಸಿವ್ ಎನ್ವಿರಾನ್ಮೆಂಟ್ಸ್’ ಎಂಬ ಪ್ರಬಂಧಕ್ಕಾಗಿ ಮಾಹೆ ಮಣಿಪಾಲದಿಂದ ಪಿಎಚ್‌ಡಿ ಪದವಿಯನ್ನು ನೀಡಿದೆ. ಈ ಸಂಶೋಧನೆಯು ಕಾಂಕ್ರೀಟ್‌ನಲ್ಲಿ ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಕ್ಲೋರೈಡ್ ಮತ್ತು ಸಲ್ಫೇಟ್ ದ್ರಾವಣಗಳ ಕಡೆಗೆ ಅದರ ನಡವಳಿಕೆಯನ್ನು ನಿರ್ಣಯಿಸುತ್ತದೆ. […]