ಯೋಗಾಸನ ಸ್ಪರ್ಧೆಯಲ್ಲಿ ಸುಷ್ಮಾ ತೆಂಡುಲ್ಕರ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ ಜಿ ಎಸ್ ಅಂತರಾಷ್ಟ್ರೀಯ ಯೋಗ ಸಂಸ್ಥೆ ಬೆಂಗಳೂರು ಇದರ ವತಿಯಿಂದ ನಡೆದಂತಹ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 20 ರಿಂದ 30 ವಯೋಮಿತಿಯ ವಿಭಾಗದಲ್ಲಿ ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿ ಅವರು ಭಾಗವಹಿಸಿ ಆರನೇ ಸ್ಥಾನವನ್ನು ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ನರೇಂದ್ರ ಕಾಮತ್ ಕಾರ್ಕಳ ಹಾಗೂ ಅಶೋಕ್ ಇವರು ಯೋಗ ತರಬೇತಿಯನ್ನು ನೀಡಿರುತ್ತಾರೆ

ಉಡುಪಿ: ಟೀಮ್ ನೇಷನ್ ಫಸ್ಟ್ (ರಿ) ವತಿಯಿಂದ ಆಯೋಜಿಸಿದ್ದ “ಚಿಣ್ಣರ ನಟ್ಟಿ” ಕಾರ್ಯಕ್ರಮ.

ಉಡುಪಿ: ಟೀಮ್ ನೇಷನ್ ಫಸ್ಟ್ (ರಿ) ಇದರ ವತಿಯಿಂದ ಆಯೋಜಿಸಿದ್ದ “ಚಿಣ್ಣರ ನಟ್ಟಿ” ಕಾರ್ಯಕ್ರಮವು ಆದಿತ್ಯವಾರದಂದು ಸಂಕೇಶ ಕಿದಿಯೂರು ಹೊಸ ನೀರಿನ ಟ್ಯಾಂಕ್ ಬಳಿ ಯಶಸ್ವಿಯಾಗಿ ಜರಗಿತು. ಶಾಸಕರಾದ ಯಶ್ಪಾಲ್ ಸುವರ್ಣ , ಮಾಜಿ ಶಾಸಕರಾದ ರಘುಪತಿ ಭಟ್, ಉದ್ಯಮಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗು ಮಲ್ಪೆ ಠಾಣಾಧಿಕಾರಿ ಲೋಹಿತ್ ಕುಮಾರ್ ಪಾಲ್ಗೊಂಡರು. ಟೀಮ್ ನೇಷನ್ ಫಸ್ಟ್ ಅಧ್ಯಕ್ಷರಾದ ಸೂರಜ್ ಕಿದಿಯೂರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾರು ೨೦೦ ಶಾಲಾ ಮಕ್ಕಳು, ಸುಮಾರು ೧೫೦ ಸಾರ್ವಜನಿಕರು […]

ʼಮಹಾನಟಿʼ ಸೀಸನ್‌ -1 ರ ವಿನ್ನರ್‌ ಆದ ಮೈಸೂರಿನ ಪ್ರಿಯಾಂಕ.

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ, ಡ್ರಾಮಾ, ವಿಜೇತೆ ಯಾರು ಎನ್ನುವುದರ ಕುತೂಹಲದಿಂದ ʼಮಹಾನಟಿʼ ಗ್ರ್ಯಾಂಡ್‌ ಫಿನಾಲೆ ಮುಕ್ತಾಯಗೊಂಡಿದ್ದು, ತೀರ್ಪುಗಾರರಾಗಿ ರಮೇಶ್‌ ಅರವಿಂದ್‌ , ಪ್ರೇಮಾ, ತರುಣ್‌ ಸುಧೀರ್‌ ಹಾಗೂ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಅನೇಕ ಪ್ರದರ್ಶನಗಳು ವೇದಿಕೆಯಲ್ಲಿ ತೀರ್ಪುಗಾರರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಕಡೆಯದಾಗಿ ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ, ಆರಾಧನಾ ಭಟ್ ಐವರು ಫಿನಾಲೆ ವೇದಿಕೆಗೆ ಹತ್ತಿದ್ದರು. ಈ ಐವರಲ್ಲಿ ಒಬ್ಬರಿಗೆ ʼಮಹಾನಟಿʼ ಚಿನ್ನದ ಕಿರೀಟ ಲಭಿಸಿದೆ. ಮೈಸೂರಿನ ಪ್ರಿಯಾಂಕ ʼಮಹಾನಟಿʼ ಸೀಸನ್‌ -1 ರ […]

ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಮನೆ ಗೋಡೆ ಕುಸಿತ: ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಮನೆ ಗೋಡೆ ಕುಸಿದು ಬಿದ್ದಿದೆ. ಅಡುಗೆ ತಯಾರಿಸುವ ಕೋಣೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪಾರಾಗಿದ್ದಾರೆ.ಭಾರೀ ಮಳೆ ನೀರಿಗೆ ತೇವಗೊಂಡು ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದು ಬಿದ್ದ ಪರಿಣಾಮ ಅಡುಗೆ ಪರಿಕರ, ಗ್ಯಾಸ್‌ ಸಿಲಿಂಡರ್, ಮಕ್ಕಳು ಊಟಕ್ಕೆ ಬಳಸುವ 40ಕ್ಕೂ ಹೆಚ್ಚು ಸ್ಟೀಲ್ ಬಟ್ಟಲುಗಳು ಮಣ್ಣಿನಡಿ ಸಿಲುಕಿವೆ. 1990ರ ಸುಮಾರಿಗೆ ಇಲ್ಲಿ ಅಂಗನವಾಡಿಯನ್ನು ನಿರ್ಮಾಣ ಮಾಡಲಾಗಿತ್ತು. […]

ಆಗಸ್ಟ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರಿಂದ ‘ಮುಖ್ಯಮಂತ್ರಿ ಮನೆ ಚಲೋ’ ಹೋರಾಟ

ಉಡುಪಿ: ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನಸಹಾಯ ಪಾವತಿಸಬೇಕು. ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು. ಆ ಮೂಲಕ ಮಂಡಳಿ ನಿಧಿ ಉಳಿಸಿ, ಬಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್ ಮುಖ್ಯಮಂತ್ರಿ ಮನೆ ಚಲೋ ಹೋರಾಟ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.ಉಡುಪಿಯಲ್ಲಿಂದು […]