ಅಲೆವೂರು ಮಾಧವ ಆಚಾರ್ಯರ ಸೊಬಗಿನ ಸ್ವೀಡನ್, ಬೆರಗಿನ ಪ್ರವಾಸ ಕೃತಿ ಲೋಕಾರ್ಪಣೆ
ಉಡುಪಿ: ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಡುಪಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಅವರ ಸೊಬಗಿನ ಸ್ವೀಡನ್, ಬೆರಗಿನ ಪ್ರವಾಸ ಕೃತಿ ಲೋಕಾರ್ಪಣೆ ಗೊಂಡಿತು. ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಮುಶ್ತಾಕ್ ಮುಹಮ್ಮದ್ ಅವರು, ಒತ್ತಡರಹಿತವಾಗಿ ಬದುಕನ್ನು ಅನುಭವಿಸಿ ಸಂತಸಪಡಬೇಕು. ವೃತ್ತಿ, ಹಣ, ಸಂಪತ್ತು ಕೂಡಿಡುವ ಬದುಕಿನ ನಡುವೆ ದೇಶ ಸುತ್ತಬೇಕು. ಅನ್ಯ ಜನ, ದೇಶದ ಸಂಸ್ಕೃತಿ ಅರಿತು ಗೌರವಿಸಬೇಕು ಈ ಮೂಲಕ ಜ್ಞಾನ ಗಳಿಸಬೇಕು ಎಂದರು. ಶಿಕ್ಷಣ […]
ರಾಜ್ಯಾದ್ಯಂತ ಇನ್ನೂ ಒಂದು ವಾರ ಭಾರಿ ಮಳೆ: ಕರಾವಳಿಗೆ ಆರೆಂಜ್ ಅಲರ್ಟ್
ಮಂಗಳೂರು: ರಾಜ್ಯಾದ್ಯಂತ ಇನ್ನೂ ಒಂದು ವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ನೀಡಿದ್ದು, ಜುಲೈ 15 ಮತ್ತು 16ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ , ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಜುಲೈ 14ರಂದು ಆರೆಂಜ್ ಅಲರ್ಟ್ ಹಾಗೂ ಚಾಮರಾಜನಗರ, ಹಾಸನ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಜುಲೈ 15ರಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ರೆಡ್ ಹಾಗೂ ಕೊಡಗು, ಹಾಸನ […]
ಪಾಕಿಸ್ತಾನವನ್ನು ಸೋಲಿಸಿ ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್ ಗೆದ್ದ ಭಾರತ.
2024 ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್ ಕೂಟದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ತಂಡವು ಚಾಂಪಿಯನ್ ಗೆದ್ದುಕೊಂಡಿದೆ. ಅನುರೀತ್, ರಾಯುಡು, ಯೂಸುಫ್ ಪಠಾಣ್ ಸಹಾಯದಿಂದ ಭಾರತ ತಂಡವು 5 ವಿಕೆಟ್ ಅಂತರದ ಗೆಲುವು ಸಾಧಿಸಿ ಚೊಚ್ಚಲ ಚಾಂಪಿಯನ್ ಆಗಿ ಮೂಡಿ ಬಂದಿದೆ. ಎಜ್ ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 156 ರನ್ ಗಳಿಸಿದರೆ, ಭಾರತವು 19.1 ಓವರ್ ಗಳಲ್ಲಿ ಗುರಿ ತಲುಪಿ ವಿಕ್ರಮ ಸಾಧಿಸಿತು. ಲೀಗ್ ಹಂತದಲ್ಲಿ ಭಾರತದ […]
ಬಂಟ್ವಾಳ: ಡೆಂಗ್ಯೂಗೆ ವ್ಯಕ್ತಿ ಮೃತ್ಯು.
ಬಂಟ್ವಾಳ: ವ್ಯಕ್ತಿಯೊಬ್ಬರು ಡೆಂಗ್ಯೂ ಜ್ವರದಿಂದ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಶಂಭೂರು ಗರಡಿ ಮನೆ ನಿವಾಸಿ ಯತೀಶ್ (50). ಮೂಲತಃ ಬಂಟ್ವಾಳ ಶಂಭೂರು ನಿವಾಸಿ, ಪ್ರಸ್ತುತ ಪುತ್ತೂರಿನ ಕಬಕದಲ್ಲಿ ನೆಲೆಸಿದ್ದು, ಇವರಿಗೆ ಜು. 10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೆಲಸದ ಸ್ಥಳದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿದ್ದರು. ಅಲ್ಲಿ ಅವರನ್ನು ಪರೀಕ್ಷಿಸಿದಾಗ ಡೆಂಗ್ಯು ಪಾಸಿಟಿವ್ ಬಂದಿದ್ದು, ಪ್ಲೇಟ್ ಲೆಟ್ ಕೌಂಟ್ ತೀರಾ ಕಡಿಮೆ ಕಂಡುಬಂದಿತ್ತು. ಹೀಗಾಗಿ ಹೆಚ್ಚಿನ […]
ಮಣಿಪಾಲ: ಮನೆಗೆ ನುಗ್ಗಿ ಚಿನ್ನ, ದಾಖಲೆಪತ್ರ ಕಳವು.
ಮಣಿಪಾಲ: ಕಕ್ಕುಂಜೆಯ ಅದಯ್ಯ ಹಿರೇಮಠ ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ದಾಖಲೆಪತ್ರಗಳನ್ನು ಕಳವು ಮಾಡಿದ್ದಾರೆ. ಹಿಂಬಾಗಿಲಿನ ಚಿಲಕವನ್ನು ಬಲವಂತವಾಗಿ ತೆರೆದು ಒಳ ಪ್ರವೇಶಿಸಿದ ಕಳ್ಳರು ಬೀಗ ಹಾಕದಿದ್ದ ಕಪಾಟಿನಲ್ಲಿದ್ದ 16 ಗ್ರಾಂ ಚಿನ್ನ ಮತ್ತು ದಾಖಲೆಗಳನ್ನು ಕಳವುಗೈದಿದ್ದಾರೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.