ಆಗಸ್ಟ್ 9ರಂದು ಬಹರೈನ್ ನಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮ

ಉಡುಪಿ: ತುಳುಕೂಟ ಬಹರೈನ್ ಸಂಸ್ಥೆಯ ಆಶ್ರಯದಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಬಹರೈನ್ ನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕ ರಾಜ್ ಕುಮಾರ್ ತಿಳಿಸಿದರು.ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟಿ ತಿಂಗಳಿನ ವಿಶೇಷತೆಗಳನ್ನು ಬಹರೈನ್ ನಲ್ಲಿ ನೆಲೆಸಿರುವ ತುಳುವರಿಗೆ, ವಿಶೇಷವಾಗಿ ಅಲ್ಲಿ ಬೆಳೆಯುತ್ತಿರುವ ತುಳುನಾಡಿನ ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಹಾಗೂ ತುಳುವರೆಲ್ಲಾ ಬೆರೆತು ಖುಷಿ ಪಡುವ ಒಂದು ಕಾರ್ಯಕ್ರಮ ಇದಾಗಿದೆ. ಸುಮಾರು ಒಂದೂವರೆ ಸಾವಿರ ತುಳುವರು ಈ […]

ಜುಲೈ 15ರಂದು ಸಾಲ್ಮರದಲ್ಲಿ ಕೃಷ್ಣವೇಣಿ ಆಶ್ರಯಧಾಮ, ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ

ಉಡುಪಿ: ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಾಪು ತಾಲೂಕಿನ ಶಂಕರಪುರದ ಸಾಲ್ಮರದಲ್ಲಿ ನಿರ್ಮಿಸಿರುವ ನೂತನ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ ಇದೇ ಜುಲೈ 15ರಂದು ಸಂಜೆ 4ಗಂಟೆಗೆ ನಡೆಯಲಿದೆ ಎಂದು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ್ ಭಟ್ ಹೇಳಿದರು.ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಉಡುಪಿ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ ನೂತನ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು […]

ಉಡುಪಿ: ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಗ್ಯೂ ನಿರ್ಮೂಲನೆ ಸಾಧ್ಯ – ಡಾ. ಪ್ರಶಾಂತ್ ಭಟ್

ಉಡುಪಿ: ಡೆಂಗ್ಯೂ ಜ್ವರ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ಈ ರೋಗ ಸೊಳ್ಳೆಗಳಿಂದಹರಡುವಂಥದ್ದಾಗಿದ್ದು, ಸಾಮಾನ್ಯವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ನೀರಿನಲ್ಲಿ ಮೊಟ್ಟೆಗಳನ್ನಿಡುವ ಮೂಲಕ ಆಗುತ್ತದೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು.ಶುಕ್ರವಾರ ನಗರದ ಪತ್ರಿಕಾ ಭವನದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ವತಿಯಿಂದ ಆಯೋಜಿಸಲಾದ ಡೆಂಗ್ಯೂ […]

ಉಡುಪಿ: ಟೀಮ್ ನೇಷನ್ ಫಸ್ಟ್(ರಿ) ತಂಡದ ವತಿಯಿಂದ “ಚಿಣ್ಣರ ನಟ್ಟಿ” ಕಾರ್ಯಕ್ರಮ

ಉಡುಪಿ: ಟೀಮ್ ನೇಷನ್ ಫಸ್ಟ್(ರಿ) ತಂಡವು ಪ್ರತಿ ವರ್ಷದಂತೆ ಈ ವರ್ಷವೂ “ಚಿಣ್ಣರ ನಟ್ಟಿ” ಕಾರ್ಯಕ್ರಮವನ್ನು ಜು.14 ರಂದು ಕಿದಿಯೂರಿನ ಹೊಸ ವಾಟರ್ ಟ್ಯಾಂಕ್ ನ ಬಳಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಸೂರಜ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 200-250 ವಿದ್ಯಾರ್ಥಿಗಳು ಪಾಲುಗೊಳ್ಳರಿದ್ದಾರೆ. ಬೆಳಿಗ್ಗೆ 7:30ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರ ಪಾಲುಗೊಳ್ಳುವಿಕೆಗೂ ಅವಕಾಶ ಇದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಚಿಣ್ಣರ ನಟ್ಟಿ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ವೃಕ್ಷಮಾತೆ […]

ರೋಟರಿ ಉಡುಪಿಯಿಂದ ಕಡಿಯಾಳಿ ಶಾಲೆ ವಿದ್ಯಾರ್ಥಿಗಳ ದತ್ತು ಸ್ವೀಕಾರ

ಉಡುಪಿ: ರೋಟರಿ ಉಡುಪಿ ಯಿಂದ ಪ್ರತಿ ವರ್ಷದಂತೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ 21 ವಿದ್ಯಾರ್ಥಿ ಗಳನ್ನು ದತ್ತು ಸ್ವೀಕರಿಸಿ ಅವರ ಸಂಪೂರ್ಣ ಶೈಕ್ಷಣಿಕ ಖರ್ಚ ನ್ನು ನೀಡುವ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಮಾಜಿ ಅಸಿಸ್ಟೆಂಟ್ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾಡುತ್ತಾ ರೋಟರಿ ಉಡುಪಿಯ ಈ ಕಾರ್ಯಕ್ರಮಕ್ಕಾಗಿ ಅವರನ್ನು ಅಭಿನಂದಿಸಿ, ಈ ಸಹಾಯವು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮುಂದುವರಿಸಲು ತುಂಬಾ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ತೊರಿಸಬೇಕೆಂದು ಕರೆನೀಡಿದರು. […]