ಬೈಂದೂರು: ಜನ ಸಾಮಾನ್ಯರು ಜನಸ್ಪಂದನ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಿ – ಗುರುರಾಜ್ ಗಂಟಿಹೊಳೆ

ಬೈಂದೂರು: ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನ ಸಾಮಾನ್ಯರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ವರ್ಷಗಳಿಂದ ಕಚೇರಿ […]
ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ ಪೂಜಾರಿ ಹೃದಯಾಘಾತದಿಂದ ನಿಧನ

ಉಡುಪಿ: ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಆಡಳಿತ ಪಾಲುದಾರ, ಖ್ಯಾತ ಇ.ಎನ್.ಟಿ. ತಜ್ಞ ಡಾ.ಸತೀಶ ಪೂಜಾರಿ ಸಾಸ್ತಾನ ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಕೋಟ ಮಣೂರು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 52 ವಯಸ್ಸಾಗಿತ್ತು. ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಹವ್ಯಾಸಿ ಗಾಯಕರಾಗಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಬಿಲ್ಲವ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಡಾ. ಎಸ್. […]
ಉಡುಪಿ: ಪ್ರಿಯದರ್ಶಿನಿ ಪಿ. ಅವರ “ಕೀಕಾ” ಕೃತಿ ಲೋಕಾರ್ಪಣೆಯ ಸಮಾರಂಭ

ಉಡುಪಿ: ವೃತ್ತಿಯಲ್ಲಿ ಓರ್ವ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಪ್ರವೃತ್ತಿಯಲ್ಲಿ ಓದುವ, ಬರೆಯುವ ಹವ್ಯಾಸವನ್ನು ನೆಚ್ಚಿಕೊಂಡಿರುವ ಪ್ರಿಯದರ್ಶಿನಿ ಅವರ “ಕೀಕಾ” ಕೃತಿಯ ಬಿಡುಗಡೆ ಸಮಾರಂಭವು ಜು.12 ಶುಕ್ರವಾರ ಬೆಳಿಗ್ಗೆ ಗಂಟೆ 11ಕ್ಕೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಾಸ್ಯ ಕವಿ, ಲೇಖಕ ಶಾಂತರಾಜ ಐತಾಳ್, ಅತಿಥಿಗಳಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ರವಿರಾಜ […]
ಉಡುಪಿ: ಶ್ರೀಮತಿ ಪಿ. ವೈದೇಹಿ ನಯನ್‍ತಾರ ಅವರಿಗೆ ಪಿಎಚ್‍ಡಿ ಪದವಿ ಪ್ರಧಾನ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಪಿ. ವೈದೇಹಿ ನಯನ್‍ತಾರ ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಮಣಿಪಾಲ್ ಇನ್ಸಿಟಿಟ್ಯೂಟ್ ಆಫ್ ಇನ್‍ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಸುರೇಖಾ ಕಾಮತ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕಂಪ್ಯೂಟರ್ ಯೈಡೆಡ್ ಡಯಾಗ್ನಾಸಿಸ್ ಸಿಸ್ಟಮ್ ಫಾರ್ ಡಿಟೆಕ್ಸ್‍ನ್ ಆ್ಯಂಡ್ ಕ್ಲಾಸಿಫಿಕೇಶನ್ ಆಫ್ ಲಿವರ್ ಟ್ಯೂಮರ್ ಯೂಸಿಂಗ್ ಕಂಪ್ಯೂಟೆಡ್ ಟೊಮೋಗ್ರಫಿ ಇಮೇಜ್” ಎಂಬ ಸಂಶೋಧನಾ ಪ್ರಬಂಧಕ್ಕೆ […]