ಕುಂದಾಪುರ: ಬಸ್ಸು-ಬೈಕ್ ನಡುವೆ ಅಪಘಾತ: ಪುರಸಭೆ ಪೌರಕಾರ್ಮಿಕ ಮೃತ್ಯು.

ಕುಂದಾಪುರ: ಬಸ್- ಬೈಕ್ ನಡುವೆ ಅಪಘಾತ ನಡೆದ ಪರಿಣಾಮ ಪುರಸಭೆ ಪೌರಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ಹಂಗಳೂರು ಬಳಿ ಗುರುವಾರ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬಾರಕೂರಿನ ನಿವಾಸಿ, ಕುಂದಾಪುರ ಪುರಸಭೆಯಲ್ಲಿ ಪೌರಕಾರ್ಮಿಕ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಂದರ (39) ಎಂದು ಗುರುತಿಸಲಾಗಿದೆ. ಮೃತರು ತಂದೆ, ತಾಯಿಯನ್ನು ಅಗಲಿದ್ದಾರೆ. ಇವರು ಕೋಟೇಶ್ವರ ಕಡೆಯಿಂದ ಬೈಕ್ ನಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದಾಗ ಹೆದ್ದಾರಿಯಿಂದ ಖಾಸಗಿ ಬಸ್ ಡಿಪೋಗೆ ನುಗ್ಗುತ್ತಿದ್ದಾಗ ಢಿಕ್ಕಿಯಾಗಿದೆ. ಸ್ಥಳದಲ್ಲೇ ಸುಂದರ ಅವರು ಮೃತಪಟ್ಟಿದ್ದು ನೂರಾರು ಜನ […]
ಕನ್ನಡದ ಖ್ಯಾತ ನಿರೂಪಕಿ ಅಪರ್ಣ ನಿಧನ.

ಬೆಂಗಳೂರು, ಜು.11: ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅಪರ್ಣ ಅವರು 1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಇವರು 90 ರ ದಶಕದಲ್ಲಿ ಚಂದನ […]
ಮಣಿಪಾಲ MSDCಯಲ್ಲಿ ಯುವಕರಿಗೆ “ಕಾರ್ ವೀಲ್ ಅಲೈನ್ಮೆಂಟ್” & “ಕಾರ್ ಎಸಿ ಸರ್ವಿಸಿಂಗ್” ಕ್ರ್ಯಾಶ್ ಕೋರ್ಸ್.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ದಲ್ಲಿ ಯುವಕರಿಗೆ ಕಾರ್ ವೀಲ್ ಅಲೈನ್ಮೆಂಟ್ ಮತ್ತು ಕಾರ್ ಎಸಿ ಸರ್ವಿಸಿಂಗ್ ಕ್ರ್ಯಾಶ್ ಕೋರ್ಸ್’ನ ಅರ್ಜಿಯನ್ನು ಆಹ್ವಾನಿಸಿದೆ. ಕೋರ್ಸ್’ನ ಬಗ್ಗೆ: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಮಿಲ್ಕ್ ಡೈರಿ ರಸ್ತೆ, ಮಣಿಪಾಲ. 📞 ದೂರವಾಣಿ 9148757193/ 8123163934 🌐 ವೆಬ್‌ಸೈಟ್: https://msdcskills.org
ಉಡುಪಿ: ಬಸ್ಸುಗಳು ಪರವಾನಿಗೆಯಲ್ಲಿ ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ.

ಉಡುಪಿ: ಸಂತೆಕಟ್ಟೆಯಿಂದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ಎನ್.ಎಚ್ 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು-ಕರಾವಳಿ ಬೈಪಾಸ್-ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ಹಳೇ ತಾಲೂಕು ಕಚೇರಿ ಮೂಲಕ ಸಿಟಿ ಬಸ್ಸು ನಿಲ್ದಾಣ ತಲುಪಲು, ಸಂತೆಕಟ್ಟೆಯಿಂದ ಉಡುಪಿಗೆ ಬರುವ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು-ತಾಂಗದಗಡಿ- ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಸಂಚರಿಸಿ ಸಿಟಿ ಬಸ್ಸು ನಿಲ್ದಾಣ ತಲುಪಲು ಮತ್ತು ಬಾರ್ಕೂರು ಬ್ರಹ್ಮಾವರ- ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ ನಿಲ್ದಾಣ […]
ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಜನರಿಗೆ ಸೇವೆ ಸಲ್ಲಿಸುವ ಅವಕಾಶ ಪ್ರತಿಯೊಬ್ಬರಿಗೂ ದೊರೆಯುವುದಿಲ್ಲ. ಸರ್ಕಾರಿ ಅಧಿಕಾರಿಗಳು ತಮಗೆ ದೊರೆತಿರುವ ಅವಕಾಶವನ್ನು ಬಳಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪ್ರತಿಯೊಬ್ಬರ ಅಭಿವೃದ್ಧಿಯಲ್ಲಿ ಶ್ರಮಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಇಂದು ಕಾಪು ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪುರಸಭೆ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಪು ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಸ್ಪಂದನ […]