ಶಿರಿಯಾರ: ಅಪ್ರಾಯ ನಾಯಕ್ ನಿಧನ.

ಕೋಟ: ಶಿರಿಯಾರ ನಿವಾಸಿ, ಸ್ಥಳೀಯ ಜನರಲ್ ಸ್ಟೋರ್ ಮಾಲಕ ಅಪ್ರಾಯ ನಾಯಕ್ (87) ಅವರು ಜು.2 ರಂದು ಸ್ವ‌‌‌‌‌‍‍ಗ್ರಹ ದಲ್ಲಿ ನಿಧನ ಹೊಂದಿದರು. ಮ್ರತರು ಪತ್ನಿ ,ಪುತ್ರ ಮತ್ತು ಆರು ಮಂದಿ ಪುತ್ರಿ ಯರನ್ನು ಅಗಲಿದ್ದಾರೆ. ಹಲವಾರು ದಶಕದಿಂದ ಜನರಲ್ ಸ್ಟೋರ್ ನಡೆಸುತ್ತಿದ್ದ ಇವರು ಸ್ಥಳೀಯ ರಾಮ ಮಂದಿರ ಟ್ರಸ್ಟ್ ಸದಸ್ಯ ಹಾಗೂ ಜಿ.ಎಸ್.ಬಿ. ಸಂಘದ ಸದಸ್ಯರಾಗಿದ್ದರು.

ಹಿರಿಯಡಕ: ಡಾ.ಸುಧಾ ಕಾಮತ್ ಅವರಿಗೆ ಬಿ.ಸಿ. ರಾಯ್ ಪುರಸ್ಕಾರ

ಹಿರಿಯಡಕ: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯ ಡಾ.ಸುಧಾ ಕಾಮತ್ ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಡಾ.ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.

ಬೈಂದೂರು: ಇಂದು (ಜುಲೈ 4) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ.

ಉಡುಪಿ: ಭಾರೀ ಗಾಳಿಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.4ರ ಗುರುವಾರ ರಜೆ ಘೋಷಿಸಲಾಗಿದೆ. ಗಾಳಿ-ಮಳೆ ಹೆಚ್ಚಿರುವ ಕಾರಣ ಮುಂಜಾಗೃತ ಕ್ರಮವಾಗಿ, ಜಿಲ್ಲಾಧಿಕಾರಿಗಳು ಸೂಚನೆಯಂತೆ ರಜೆ ನೀಡಲಾಗಿದೆ ಎಂದು ಬೈಂದೂರು ಬಿಇಒ ತಿಳಿಸಿದ್ದಾರೆ.ಉಡುಪಿಯ ಇತರ ವಿಭಾಗಗಳಲ್ಲಿ ಎಂದಿನಂತೆ ತರಗತಿ ನಡೆಯಲಿವೆ.

ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು: ವೈದ್ಯರ ದಿನಾಚರಣೆ

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ `ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕೆನಡಾದ ಖ್ಯಾತ ಹೋಮಿಯೋಪತಿ ವೈದ್ಯರು ಹಾಗೂ ಕೆಐಐಎ ಮತ್ತು ಕೆಎಐಎ ಸಂಸ್ಥೆಗಳ ಸಂಸ್ಥಾಪಕರಾದ ಡಾ| ವಲರ್ಮತಿ ರೇಚೆಲ್ ಫೆರ್ನಾಂಡಿಸ್ ಮಾತನಾಡಿ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇತರ ಕ್ಷೇತ್ರಗಳ ಉನ್ನತ ಸಾಧನೆಗಳನ್ನು ಶ್ಲಾಘಿಸಿದರು. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹಾಗೂ ವೈದ್ಯಕೀಯ ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಇನ್ನೋರ್ವ ಅತಿಥಿಯ ಎಇನ ಪ್ರಖ್ಯಾತ ಹೋಮಿಯೋಪತಿ […]