ಉಡುಪಿ: ಮಿಲಾಗ್ರಿಸ್ ಕಾಥೆದ್ರಲ್’ನ ರೆಕ್ಟರ್ ವo.ಫಾ.ವಲೇರಿಯನ್ ಮೆಂಡೊನ್ಸ ಹೃದಯಾಘಾತದಿಂದ ನಿಧನ.

ಉಡುಪಿ, ಜು.3: ಉಡುಪಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾಗಿದ್ದ ಕಲ್ಯಾಣಪುರ ಮಿಲಾಗ್ರಿಸ್ ಕಾಥೆದ್ರಲ್’ನ ರೆಕ್ಟರ್ ವo. ಫಾ. ವಲೇರಿಯನ್ ಮೆಂಡೊನ್ಸ (75) ನಿಧನ ಹೃದಯಾಘಾತದಿಂದ ಇಂದು ಸಂಜೆ ನಿಧನ ಹೊಂದಿದ್ದಾರೆ.75ರ ವಯಸ್ಸಿನ ಇವರು ಅತ್ಯಂತ ಉತ್ಸಾಹಿ ಧರ್ಮ ಗುರುಗಳಾಗಿದ್ದರು. ಸದಾ ಹಸನ್ಮುಖಿಯಾಗಿದ್ದ ಇವರು ಕೇವಲ ಕ್ರೈಸ್ತರ ಮಾತ್ರವಲ್ಲದೆ ಎಲ್ಲಾ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಉಡುಪಿಯ ಶಿರ್ವದಲ್ಲಿ ಜನಿಸಿದ ಇವರು ಉಡುಪಿ, ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಧರ್ಮ ಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಸಂಗೀತ ಪ್ರೇಮಿ ಆಗಿದ್ದ […]

ಉಡುಪಿ: 10ನೇ ತರಗತಿಯ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು.

ಉಡುಪಿ: 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಪಳ್ಳಿ ದಾದಬೆಟ್ಟು ಎಂಬಲ್ಲಿ ಬುಧವಾರ ಸಂಭವಿಸಿದೆ.ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾ ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತೆಂದು […]

ಉಡುಪಿ: ತೆಂಕನಿಡಿಯೂರು ಗ್ರಾ.ಪಂ. ಬಿಜೆಪಿ ಬೆಂಬಲಿತ ಅಧ್ಯಕ್ಷೆ ಕಾಂಗ್ರೆಸ್ ಸೇರ್ಪಡೆ.

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಶೋಭಾ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಶೋಭಾ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡುವುದರ ಮೂಲಕ ಪಕ್ಷಕ್ಕೆ ಅಧಿಕೃತವಾಗಿ ಸ್ವಾಗತಿಸಿದರು. 26 ಸದಸ್ಯ ಬಲದ ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತ 14 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 12 ಮಂದಿ ಸದಸ್ಯರು ಆಯ್ಕೆಯಾಗಿದ್ದು, ಎಸ್ ಟಿ ಮೀಸಲಾತಿಯಲ್ಲಿ ಶೋಭಾ ಅವರು […]

ಬೆಳ್ತಂಗಡಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗ್ರಾಮಲೋಕ

ಬೆಳ್ತಂಗಡಿ: ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಮತ್ತು ಮಂಗ್ಳುರ್ಚಿ ಮೊತಿಯಾಂ ಸಾಂಸ್ಕೃತಿಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಪ್ರಧಾನ ರಸ್ತೆಯ ಲೋಬೊ ಮೋಟಾರ್ಸ್ ಆವರಣದಲ್ಲಿ ಗ್ರಾಮಲೋಕ ಕಾರ್ಯಕ್ರಮ ಜೂ.30 ಭಾನುವಾರ ಸಂಜೆ 4.30 ಕ್ಕೆ ನಡೆಯಿತು. ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಸಂದೇಶದಲ್ಲಿ ಫಾ| ಡಿ’ಮೆಲ್ಲೊ “ಕೊಂಕಣಿ ಭಾಷೆ ವೈವಿಧ್ಯತೆಗಳಿಂದ ಕೂಡಿದ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಭಾಷೆ. ವೈಶಿಷ್ಠ್ಯಪೂರ್ಣ ಜಾನಪದ ಮತ್ತು ಗುಣಮಟ್ಟದ ಸಾಹಿತ್ಯ ಪರಂಪರೆ […]

ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2574892, ಅಥವಾ ಉಡುಪಿ ದೂ.ಸಂಖ್ಯೆ: 0820-2528884, ಕುಂದಾಪುರ ದೂ.ಸಂಖ್ಯೆ: 08254-230609/298089 ಹಾಗೂ ಕಾರ್ಕಳ ದೂ.ಸಂಖ್ಯೆ: 08258-232133/298134 ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ […]