ಕಾರ್ಕಳ: ವ್ಯಕ್ತಿ ಕುಸಿದು ಬಿದ್ದು ಮೃತ್ಯು.

ಕಾರ್ಕಳ: ತಾಲೂಕಿನ ಬೆಳ್ಮಣ್ ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಗದ್ದೆಯಲ್ಲಿ ಟ್ಯಾಕ್ಟರ್‌ನಿಂದ ಉಳಿಮೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಜೂ.30ರಂದು ನಡೆದಿದೆ. ಮೃತಪಟ್ಟವರನ್ನು ಬೆಳ್ಮಣ್ ನಿವಾಸಿ ಸಂಜೀವ(40) ಎಂದು ಗುರುತಿಸಲಾಗಿದೆ. ಇವರು ಪ್ರಕಾಶ್ ಎಂಬವರ ಗದ್ದೆಯಲ್ಲಿ ಟ್ಯಾಕ್ಟರ್‌ ನಿಂದ ಉಳಿಮೆ ಕೃಷಿ ಕೆಲಸ ಮಾಡುತ್ತಿದ್ದು, ಈ ವೇಳೆ ಎದೆನೋವು ಕಾಣಿಸಿಕೊಂಡು ಅಸ್ವಸ್ತಗೊಂಡರೆನ್ನ ಲಾಗಿದೆ. ಇವರನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷೀಸಿದ ವೈದ್ಯರು ಸಂಜೀವ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ […]

ಉಡುಪಿ: ಸತ್ಯಬೋಧ ಜೋಶಿಗೆ ಕಸಾಪ ಪುರಸ್ಕಾರ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಖ್ಯಾತ ಪತ್ರಕರ್ತ ಎಂಐಸಿ ಮಣಿಪಾಲದ ಪ್ರಾಧ್ಯಾಪಕರಾಗಿರುವ ಸತ್ಯಬೋಧ ಜೋಶಿ ಅವರನ್ನು ಪತ್ರಿಕಾ ದಿನಾಚರಣೆಯ ಅಂಗವಾಗಿ ಅಭಿನಂದಿಸಿ ಗೌರವಿಸಲಾಯಿತು. ಕೀಲಿಮಣೆ ತಜ್ಞ, ವಿದ್ವಾಂಸ ನಾಡೋಜ ಕೆಪಿ ರಾವ್ ರವರು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾಯ೯ದಶಿ೯ಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, […]

ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯಿಂದ 316 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಮಂಗಳೂರು: ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯು ಜೂ.29 ರಂದು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಶತಮಾನದ ಸಭಾಂಗಣದಲ್ಲಿ ಗಮನಾರ್ಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ 316 ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನಗಳನ್ನು ವಿತರಿಸಿದೆ. ಈ ವಿಶೇಷ ಸಂದರ್ಭದಲ್ಲಿ ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪೌಲ್ ಸಲ್ಡಾನ ಅವರು ಮತ್ತು ಖ್ಯಾತ ಉದ್ಯಮಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ಅ| ವಂ| ಡಾ| ಪೀಟರ್ […]

ರಾಹುಲ್ ಗಾಂಧಿ ಮಾತು ತನ್ನ ಅಪ್ರಬುದ್ಧತೆಯನ್ನ ತೋರಿಸುತ್ತದೆ: ಶ್ರೀನಿಧಿ ಹೆಗ್ಡೆ.

ಭಾರತ ಖಂಡದ ಮೂಲ ಅಸ್ಮಿತೆಯೇ ಸನಾತನ ಸಂಸ್ಕೃತಿ, ಹಿಂದೂ ಆಚರಣೆ ಆಗಿದೆ. ಹಿಂದೂ ಭಾರತದ ಮೂಲ ತತ್ವ, ಹಿಂದೂ ಎಂದರೆ ಸಹಿಷ್ಣುತೆ, ಉದಾರತೆ ಆಗಿದೆ. ಅನ್ಯ ಧರ್ಮದ ತುಷ್ಟೀಕರಣ ಮಾಡಲು ತಮ್ಮ ಒಟ್ ಬ್ಯಾಂಕ್ ಅನ್ನು ತೃಪ್ತಿ ಪಡಿಸಲು ಹಿಂದೂಗಳನ್ನು ಅವಹೇಳನ ಮಾಡಿ ತಾನೊಬ್ಬ ವಿರೋಧ ಪಕ್ಷದ ನಾಯಕ ಎಂಬ ಜವಾಬ್ದಾರಿಯನ್ನು ಮರೆತು ಲೋಕಸಭೆಯಲ್ಲಿ ತನ್ನ ಮೊದಲ ಭಾಷಣದಲ್ಲೇ ಹಿಂದೂಗಳು ಎಂದರೆ “ಹಿಂಸಾಚಾರ, ಅಸತ್ಯ ಮತ್ತು ದ್ವೇಷದಲ್ಲಿ” ಮುಳುಗಿರುವವರು ಎಂದು ಹೇಳಿದ್ದಾರೆ. ಈ ರೀತಿ ರಾಹುಲ್ ಗಾಂಧಿ […]

ಮಾಹೆ ಮಣಿಪಾಲದ ಸಿಓಓ ಆಗಿ ಡಾ.ರವಿರಾಜ ಎನ್. ಎಸ್. ನೇಮಕ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ(ಮಾಹೆ) ನೂತನ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಓಓ) ಡಾ. ರವಿರಾಜ ಎನ್. ಎಸ್. ನೇಮಕಗೊಂಡಿದ್ದಾರೆ. ಅವರು ಇದುವರೆಗೆ ಮಾಹೆಯ ಯೋಜನೆ ಮತ್ತು ಮಾನಿಟರಿಂಗ್ ವಿಭಾಗದ ನಿರ್ದೇಶಕರಾಗಿದ್ದರು. ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್‌ಗಳು ಮತ್ತು ಕ್ಯಾಂಪಸ್ ಸುರಕ್ಷತೆ ಇವುಗಳ ನಿರ್ವಹಣೆಯನ್ನು ಡಾ.ರವಿರಾಜ್ ನೋಡಿಕೊಳ್ಳಲಿದ್ದಾರೆ. ಡಾ.ರವಿರಾಜ ಅವರು […]