ಕರ್ನಾಟಕ ಪ್ರೆಸ್ ಕ್ಲಬ್ ಉಡುಪಿ ವತಿಯಿಂದ ಪತ್ರಿಕಾ ದಿನಾಚರಣೆ

ಉಡುಪಿ, ಜು.1: ಕರ್ನಾಟಕ ಪ್ರೆಸ್ ಕ್ಲಬ್ ಉಡುಪಿ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹೋಟೆಲ್ ಮಥುರಾ ಛಥುರಾ ಸಭಾಂಗಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಚಿತ್ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭಗೊಂಡ ದಿನವನ್ನು ಪತ್ರಿಕಾ ದಿನವನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ರೆವರೆಂಡ್ ಹರ್ಮನ್ ಮೊಗ್ಲಿoಗ್ ಅವರು 1843 ಜುಲೈ 1 ರಂದು ಮಂಗಳೂರು ಸಮಾಚಾರ ಪತ್ರಿಕೆಯನ್ನು […]

“ವೈದ್ಯೋ ನಾರಾಯಾಣ ಹರಿ”: ಇಂದು ರಾಷ್ಟ್ರೀಯ ವೈದ್ಯರ ದಿನದ ಆಚರಣೆ.

ವರ್ಷಂಪ್ರತೀ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು. ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಇದು ಅಷ್ಟೇ ಸತ್ಯವೂ ಕೂಡ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೊಲಿಸಲಾಗುತ್ತದೆ. ಈ ಪದ್ಧತಿಯೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅನಾರೋಗ್ಯಕ್ಕೆ ತುತ್ತಾದ […]

ಚೇರ್ಕಾಡಿ ದೊಡ್ಡಮನೆ ಸಿ.ವಿಜಯ ಹೆಗ್ಡೆ ಶ್ರದ್ಧಾಂಜಲಿ ಸಭೆ

ಉಡುಪಿಯ ಹಿರಿಯ ನ್ಯಾಯವಾದಿ, ರಾಜಕೀಯ-ಶೈಕ್ಷಣಿಕ-ಸಾಮಾಜಿಕ ಮುಖಂಡ ಚೇರ್ಕಾಡಿ ದೊಡ್ಡಮನೆ ಸಿ.ವಿಜಯ ಹೆಗ್ಡೆಯವರ ಶ್ರದ್ಧಾಂಜಲಿ ಸಭೆಯು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಇಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚೇರ್ಕಾಡಿ ದೊಡ್ಡಮನೆ ಕುಟುಂಬದ ಪರವಾಗಿ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿಯವರು ದಿವಂಗತ ವಿಜಯ ಹೆಗ್ಡೆಯವರ ವ್ಯಕ್ತಿತ್ವದ ಪರಿಚಯವನ್ನು ಮಾಡಿ ಕುಟುಂಬಸ್ಥರ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಮಾಜಿ ಸಂಸದರು ಹಾಗೂ ಸಚಿವರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ವಿಶ್ವಜಿತ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ […]

ತ್ರಿಶಾ ವಿದ್ಯಾ ಕಾಲೇಜು : ಪುಸ್ತಕ ಬಿಡುಗಡೆ

ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಬಿ.ಕಾಂ ಪಠ್ಯ ಆಧಾರಿತ ” ಇ- ಕಾಮರ್ಸ್ ” ಪಠ್ಯಪುಸ್ತಕ ಹಾಗೂ ಬಿಸಿಎ‌‌ ಪಠ್ಯ ಆಧಾರಿತ “ಆನ್ಸರ್ಸ್ ಟು ಜಾವಾ ಪ್ರಶ್ನೆಗಳು” ಶೀರ್ಷಿಕೆಯ ಪಠ್ಯ ಪುಸ್ತಕಗಳನ್ನು ಮಾಹೆ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕರಾದ ಡಾ.ಕರುಣಾಕರ್ ಎ ಕೋಟೆಗಾರ್ ಬಿಡುಗಡೆಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಆಲಿಸುವುದರ ಮಹತ್ವ ಹಾಗೂ ಆ ಆಲಿಕೆಯ ವಿಷಯಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ತ್ರಿಶಾ ಸಂಸ್ಥೆಯ […]

ಕ್ರಿಯೇಟಿವ್‌ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರ

ಕಾರ್ಕಳ: ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ ಫೌಂಡೇಶನ್, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಜೂ.20, ಜೂ28 ರಂದು ಹಮ್ಮಿಕೊಳ್ಳಲಾಗಿತ್ತು. ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ CA. ಪ್ರದೀಪ್ ಜೋಗಿ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್‌ ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ […]