ನಾಳೆಯು (ಜೂ.28) ದ.ಕ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ.

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ (ಜೂ.28) ಶುಕ್ರವಾರ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ರಜೆ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.

ಉಡುಪಿ: ನಿಲ್ಲಿಸಿದ್ದ ಬಸ್ ಗೆ ಹೊಚ್ಚ ಹೊಸ ಫಾರ್ಚೂನರ್ ಕಾರು ಡಿಕ್ಕಿ – ಶೋರೂಂಗೆ ಹೋಗುತ್ತಿದ್ದ ಫಾರ್ಚೂನರ್ ಕಾರು ಅಪಘಾತ.

ಉಡುಪಿ: ನಿಲ್ಲಿಸಿದ್ದ ಬಸ್ ಗೆ ಫಾರ್ಚೂನರ್ ಕಾರೊಂದು ಡಿಕ್ಕಿ ಹೊಡೆದ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಶೋರೂಂಗೆ ಹೋಗುತ್ತಿದ್ದ ಹೊಚ್ಚ ಹೊಸ ಫಾರ್ಚೂನರ್ ಕಾರು ಅಪಘಾತಕ್ಕೀಡಾಗಿದೆ. ಕುಂದಾಪುರ ಶೋರೂಂ ನಿಂದ ಮಂಗಳೂರು ಶೋರೂಂಗೆ ಹೊಸ ಕಾರನ್ನು ಚಾಲಕ ಕೊಂಡೊಯ್ಯುತ್ತಿದ್ದನು. ನಿಟ್ಟೂರಿಗೆ ತಲುಪುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಿಟಿ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಬಸ್ ನ ಹಿಂಬದಿಗೂ ಹಾನಿಯಾಗಿದೆ. ಕಾರು ಚಾಲಕನ […]

ತ್ರಿಶಾ ಕ್ಲಾಸಸ್: ದ್ವಿತೀಯ ಪಿ.ಯು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿ.ಎಸ್.ಇ.ಇ.ಟಿ ಪುನಶ್ಚೇತನ ಕಾರ್ಯಕ್ರಮ.

ಮಂಗಳೂರು: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ನೂತನ ಸಿ.ಎಸ್.ಇ.ಇ.ಟಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ತ್ರಿಶಾ ಕಾಲೇಜ್ ಆಫ್ ಕಾಮರ್ಸ್‌ ಅಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್‌ ಕಾಮತ್ ಎಮ್ ಅವರು ಸಿ. ಎಸ್. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಿ. ಎಸ್. ಇ.ಇ.ಟಿ ಕೋರ್ಸಿನ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ […]

ಬಂಟಕಲ್ ಕಾಲೇಜಿಗೆ ಐಎಸ್ ಟಿಇ ಘಟಕದ “ಅತ್ಯುತ್ತಮ ಐಎಸ್ ಟಿಇ ಫ್ಯಾಕಲ್ಟಿ ಚಾಪ್ಟರ್ ಪ್ರಶಸ್ತಿ”

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್ ಟಿಇ ಬೋಧಕ ಘಟಕಕ್ಕೆ ಪ್ರತಿಷ್ಠಿತ “ಕರ್ನಾಟಕ ರಾಜ್ಯ ವಿಭಾಗದ ಉತ್ತಮ ಐಎಸ್ ಟಿಇ ಫ್ಯಾಕಲ್ಟಿ ಚಾಪ್ಟರ್ ಘಟಕ ಪ್ರಶಸ್ತಿ”ಯು ಲಭಿಸಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು 22 ಶನಿವಾರ 2024ರಂದು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್, ಭುವನೇಶ್ವರಮ್ ಇಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ನಡೆದ 53ನೇ ಐಎಸ್ ಟಿಇ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿಯನ್ನು ಕಾಲೇಜಿಗೆ ನೀಡಿ ಗೌರವಿಸಲಾಯಿತು. ಕಾಲೇಜಿನ ಐಎಸ್ ಟಿಇ ಅಧ್ಯಾಪಕರ ಘಟಕವು ಅಧ್ಯಾಪಕರ […]

ಹಾಲಾಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು.

ಶಂಕರನಾರಾಯಣ: ಹಾಲಾಡಿ ಗ್ರಾಮದಲ್ಲಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.25ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಹಾಲಾಡಿ ಗ್ರಾಮದ ಶೇಖರ(74) ಎಂದು ಗುರುತಿಸಲಾಗಿದೆ. ಇವರು ಮನೆಯ ಹಿಂಬದಿಯ ಅಡಿಕೆ ತೋಟದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.