ತ್ರಿಶಾ ಕ್ಲಾಸಸ್ : ಸಿಎಸ್ಇಇಟಿ ಮಾಹಿತಿ ಕಾರ್ಯಾಗಾರ

ಕಟಪಾಡಿ : ತ್ರಿಶಾ ಕ್ಲಾಸಸ್ ವತಿಯಿಂದ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಿಎಸ್ಇಇಟಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಜೂನ್ 25 ರಂದು ನಡೆಸಲಾಯಿತು. ಮುಖ್ಯ ಅತಿಥಿಯಾಗಿದ್ದ ತ್ರಿಶಾ ಕ್ಲಾಸಸ್ ಅನುಭವಿ ಭೋದಕರಾದ ಪ್ರೊಫೆಸರ್ ರಾಜ್ ಗಣೇಶ್ ಕಾಮತ್ ಅವರು ವಿದ್ಯಾರ್ಥಿಗಳಿಗೆ ಸಿಎಸ್ ಕೋರ್ಸ್ ಹಾಗೂ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಬಿ , […]

ಉಡುಪಿ: ನಿಯೋ ಯುನಿಸೆಕ್ಸ್ ಸಲೂನ್’ಗೆ ಬ್ಯೂಟಿಷಿಯನ್ ಬೇಕಾಗಿದ್ದಾರೆ

ಉಡುಪಿ: ನಿಯೋ ಯುನಿಸೆಕ್ಸ್ ಸಲೂನ್ ಗೆ ಬ್ಯೂಟಿಶನ್ ಬೇಕಾಗಿದ್ದಾರೆ. ಅನುಭವಕ್ಕೆ ಅನುಗುಣವಾಗಿ ಸಂಬಳ ನೀಡಲಾಗುವುದು. ನಿಮ್ಮ CVಯನ್ನು ಕೆಳಗಿನ ನಂಬರ್ ಗೆ ಕಳುಹಿಸಿ.+91 9380248044ಗ್ರಾಸ್ ಲ್ಯಾಂಡ್ ಕಮರ್ಷಿಯಲ್, 2ನೇ ಮಹಡಿ, ಸೇವಾ ಬಸ್ ನಿಲ್ದಾಣದ ಹತ್ತಿರ ಮೂಡನಿದಂಬೂರು ಗ್ರಾಮ, ಶಿರಿಬೀಡು, ಉಡುಪಿ – 576101

ಹೆಬ್ರಿ: ಬೈಕ್ – ಕಾರ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು.

ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಕೆಲಕಿಲ ಸೇತುವೆಯ ಬಳಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಪಳ್ಳಿ ಗ್ರಾಮದ ವಿಶ್ವನಾಥ್ ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಹೆಬ್ರಿಯಿಂದ ಅಜೆಕಾರ್ ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು ಬೈಕ್ ಸವಾರರಿಗೆ ಡಿಕ್ಕಿಯಾಗಿದ್ದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು, ತೀವ್ರ ಸ್ವರೂಪದ ಗಾಯವಾಗಿದ್ದ ವಿಶ್ವನಾಥ್ ಎಂಬವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನ ಸಾಮಾನ್ಯರ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ: ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿರುವ ಅಹವಾಲುಗಳನ್ನು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಶೀಘ್ರದಲ್ಲಿಯೇ ಸ್ಪಂದಿಸಿ, ಸಮಸ್ಯೆಗಳನ್ನು ನಿಯಮಾನುಸಾರ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಮಂಗಳವಾರ ಕುಂದಾಪುರ ಶಾಸ್ರೀ ಸರ್ಕಲ್ ಬಳಿಯ ಆರ್.ಎನ್.ಶೆಟ್ಟಿ ಸಭಾಭವನ (ಬಂಟರ ಯಾನೆ ನಾಡವರ ಸಂಕೀರ್ಣ) ದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜನಸ್ಪಂದನ ಕಾರ್ಯಕ್ರಮವನ್ನು ಕಳೆದ ವರ್ಷದಿಂದಲೇ ಆರಂಭಿಸಲಾಗಿದ್ದು, ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ […]

ಐಐಎಸ್ಇಆರ್: ಎಕ್ಸಪರ್ಟ್ ನ ಮಿಹಿರ್ ಗಿರೀಶ್ ಕಾಮತ್‍ ಗೆ 16ನೇ ರ್ಯಾಂಕ್

ಮಂಗಳೂರು : ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆಂಡ್ ರಿಸರ್ಚ್ (ಐಐಎಸ್ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಹಿರ್ ಗಿರೀಶ್ ಕಾಮತ್ ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ 16ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರಕಾರವು ಬೆಹಾರ್ಂಪುರ, ಭೋಪಾಲ್, ಕೋಲ್ಕತ್ತಾ, ಮೊಹಾಲಿ, ಪುಣೆ, ತಿರುವನಂತಪುರಂ ಮತ್ತು ತಿರುಪತಿಗಳಲ್ಲಿ ಐಐಎಸ್‍ಇಆರ್ […]