ನಾಯಕನೆಂದರೆ ಅಹಂ ಅಲ್ಲ, ಜವಾಬ್ದಾರಿ: ವಿವೇಕ್ ಆಳ್ವ

ವಿದ್ಯಾಗಿರಿ: ನಾಯಕನೆಂದರೆ ಜವಾಬ್ದಾರಿ, ಅಹಂ ತೊರೆದು ವಿಧೇಯತೆಯಿಂದ ಕಾರ್ಯ ನಿರ್ವಹಿಸುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಇಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣ (ಕೃಷಿ ಸಿರಿ ವೇದಿಕೆ) ದಲ್ಲಿ ಶನಿವಾರ ನಡೆದ ಪುತ್ತಿಗೆಯ ವಿವೇಕಾನಂದ ನಗರ ಆಳ್ವಾಸ್ ಕೇಂದ್ರೀಯ ಶಾಲೆಯ ‘ಸ್ವಾಗತ ದಿನ ಮತ್ತು ಇನ್ವೆಸ್ಟಿಚರ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ತಾನು ನಾಯಕನಾಗಬೇಕೆಂಬ ಹಂಬಲ ಇರಬೇಕು. ನಾಯಕನಾಗಲು ನಾನು ಅರ್ಹನಲ್ಲ ಎಂಬ ಹಿಂಜರಿಕೆ ಇರಬಾರದು. ಪ್ರತಿ ವಿದ್ಯಾರ್ಥಿಗಳು […]

ಉಡುಪಿ: ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಗರುಡ ಗ್ಯಾಂಗ್ ವಾರ್ ಆರೋಪಗಳಿಂದ ದಾಂಧಲೆ.

ಉಡುಪಿ: ಉಡುಪಿ ಕುಂಜಿಬೆಟ್ಟುವಿನಲ್ಲಿ ದಾಳಿ ನಡೆಸಿ ಬಂಧಿತರಾಗಿರುವ ಗರುಡ ಗ್ಯಾಂಗ್ ವಾರ್ ಆರೋಪಿಗಳು ಜೈಲಿನಲ್ಲಿ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಪಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ತಗಾದೆ ವಿಚಾರಣಾ ಕೈದಿ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೇನ್ ಜಿಲ್ಲಾ ಜೈಲ್ ಅಧೀಕ್ಷಕ, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕರೆ ಮಾಡಲು ತಡವಾಯಿತೆಂದು ಜೈಲರ್ ಎಸ್.ಎ.ಶಿರೋಳಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಿಲ್ಲಾ […]

ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಕಾಸ್ಮೆಟಾಲಜಿ ಬಗ್ಗೆ ಅಲ್ಪಾವಧಿ ಕೋರ್ಸುಗಳು ಲಭ್ಯ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಕಾಸ್ಮೆಟಾಲಜಿ ಬಗ್ಗೆ ವಿವಿಧ ಅಲ್ಪಾವಧಿ ಕೋರ್ಸುಗಳ ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ: 26/06/2024 ಮತ್ತು 27/06/2024 ಸಂಸ್ಥೆಗೆ ಭೇಟಿ ನೀಡಿ ಮತ್ತು ಪಡೆದುಕೊಳ್ಳಿ ಕೋರ್ಸ್ ಶುಲ್ಕದ ಮೇಲೆ ರಿಯಾಯಿತಿ. ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸ್ಥಳ: MSDC, ಓರೇನ್ ಇಂಟರ್‌ನ್ಯಾಶನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ ಮೊ: 8123165068, 8123163935 https://msdcskills.org/beauty-wellness/ manager.orane@msdcskills.org oranemsdc_manipal

ಪ್ರಾಧ್ಯಾಪಕಿ ವಾರಿಜ ಅವರಿಗೆ ಡಾಕ್ಟರೇಟ್ ಪದವಿ

ಉಡುಪಿ : ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಾರಿಜ ಅವರು ಮಂಡಿಸಿದ ಜಾಬ್ ಅಟ್ಟಿಟ್ಯೂಡ್ ಅಮಾಂಗ್ ಔಟ್ಸೈರ್ಸ್ಡ್ ಎಂಪ್ಲಾಯಿಸ್ ಇನ್ ಗವರ್ನಮೆಂಟ್ ಡಿಪಾರ್ಟ್ಮೆಂಟ್ – ಆ ಸ್ಟಡಿ ವಿಥ್ ರಿಫೆರೆನ್ಸ್ ಟು ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಂಗಳೂರು ವಿ. ವಿ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಮಂಗಳೂರು […]

ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ.

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 2 ರುಪಾಯಿ ಏರಿಕೆ ಮಾಡಲಾಗಿದ್ದು, ನಾಳೆಯಿಂದ ಒಂದು ಲೀಟರ್‌ ಹಾಲಿನ ದರ 44 ರೂ. ಆಗುತ್ತಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿಗೆ 2 ರೂ.ಏರಿಕೆ ಮಾಡಲಾಗಿದೆ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. […]