ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಬಂಧನ.

ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಮೂರನೇ ಕೇಸ್‌ ನಲ್ಲಿ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ 42 ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದರು. ಮೂರನೇ ಅತ್ಯಾಚಾರ ಪ್ರಕರಣದ ವಿಚಾರಣೆ ಇದಾಗಿದ್ದು, ಈ ಕೇಸ್‌ನಲ್ಲಿ […]

ಕನ್ನಡ ಮಾಧ್ಯಮದಲ್ಲಿ ಓದಿದವರು ಸರ್ವಾಂತರ್ಯಾಮಿಗಳಾಗಿದ್ದಾರೆ: ಡಾ.ಅಶೋಕ್

ಉಡುಪಿ: ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರು ಕನ್ನಡ ಮಾಧ್ಯಮದವರು ಎನ್ನಲು ಯಾವುದೇ ಅಳುಕು ಬೇಡ. ಕನ್ನಡ ಮಾಧ್ಯಮದಲ್ಲಿ ಓದಿದವರು ಇಂದು ಸರ್ವಾಂತರ್ಯಾಮಿಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಶೋಕ್ ರವರು ಹೇಳಿದರು. ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಯಶೋ ಮಾಧ್ಯಮ 2024 ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ರಾಜ್ಯದ, ದೇಶದ ಮಾತ್ರವಲ್ಲ ಹೊರ ದೇಶಗಳಲ್ಲಿಯೂ ಉನ್ನತ ಹುದ್ದೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಕೆಲಸ […]

ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಹೋಮ್ ಕೇರ್- ನೇತ್ರಶಾಸ್ತ್ರ ವಿಭಾಗಗಳ ಉದ್ಘಾಟನೆ.

ಉಡುಪಿ: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಲೊಂಬಾರ್ಡ್ ಹೋಮ್ ಕೇರ್(ಮನೆ ಆರೈಕೆ) ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವು ಇಂದು ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಂಡಿತು. ನೂತನ ಸೇವೆಗಳನ್ನು ಉದ್ಘಾಟಿಸಿದ ಸಿಎಸ್‌ಎ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂ.ಹೇಮಚಂದ್ರ ಕುಮಾರ್ ಆಶೀವರ್ಚನ ನೀಡಿ, ನಮಗೆ ದೊರೆತ ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆಯಾಗಿದೆ. ಅದನ್ನು ಸೇವೆಯ ಮೂಲಕ ಸಮಾಜಕ್ಕೆ ನೀಡುವ ಕಾರ್ಯ ಮಾಡಬೇಕು. ಈ ಮೂಲಕ ದೇವರನ್ನು ಸ್ಮರಿಸಬೇಕು […]

ಶಂಕರನಾರಾಯಣ: ವ್ಯಕ್ತಿ ನಾಪತ್ತೆ.

ಉಡುಪಿ, ಜೂನ್ 24: ಕುಂದಾಪುರ ತಾಲೂಕು ಹಾಲಾಡಿ ಗ್ರಾಮದ ಜಮದಗ್ನಿಯ ನಿವಾಸಿ ಸಂಜೀವ ಶೆಟ್ಟಿ (73) ಎಂಬ ವ್ಯಕ್ತಿಯು ಜೂನ್ 22 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಸಪೂರ ಸದೃಢಕಾಯ ಮೈಕಟ್ಟು, ಬಿಳಿಯ ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ದೂ.ಸಂಖ್ಯೆ: 08259- 280299, ಮೊ.ನಂ: 9480805456, 8277988963 ಅಥವಾ ಕುಂದಾಪುರ […]

ಮಾಂಟೆಸ್ಸರಿ / ನರ್ಸರಿ ಟೀಚರ್ಸ್‍ ಟ್ರೈನಿಂಗ್ ಕೋರ್ಸ್’ಗೆ ಪ್ರವೇಶಾರಂಭ

ಉಡುಪಿ/ಮಣಿಪಾಲ: ಕಳೆದ 12 ವರ್ಷಗಳಿಂದ ಕಾರ್ಯಚರಿಸುವ ‘ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ ಮಹಿಳೆಯರಿಗೆ ಒಂದು ವರ್ಷದ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ನಡೆಸುತ್ತಿದೆ. ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಸಂಸ್ಥೆಯಾದ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಕಳೆದ ಸಾಲಿನಲ್ಲಿ ತರಬೇತಿ ಹೊಂದಿದ ಈ ಸಂಸ್ಥೆಯ ಎಲ್ಲಾ ಪ್ರಶಿಕ್ಷಿತ ಶಿಕ್ಷಿಯರಿಗೆ ಉದ್ಯೋಗ ಲಭಿಸಿದೆ. […]