ಬಡಗಬೆಟ್ಟು ಕ್ರೆಡಿಟ್ ಕೋ-ಆ.ಸೊಸೈಟಿ: 12 ಲಕ್ಷ ರೂ.ಮೌಲ್ಯದ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವತಿಯಿಂದ ಸುಮಾರು 12ಲಕ್ಷ ರೂ. ಮೌಲ್ಯದ ಜಿಲ್ಲೆಯ ಸುಮಾರು 25 ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕಗಳ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಉಡುಪಿ ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಅವರು, ಮಕ್ಕಳು ಪಠ್ಯದೊಂದಿಗೆ ಇತರೆ ಪುಸ್ತಕಗಳು, ದಿನಪತ್ರಿಕೆ ಗಳನ್ನು ಕೂಡ ಓದುವ ಹವ್ಯಾಸ […]
ಬರೋಡಾ ಬ್ಯಾಂಕ್ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ.
ಮಂಗಳೂರು: ಬರೋಡಾ ಬ್ಯಾಂಕ್ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥರಾದ ಶ್ರೀ ರಾಜೇಶ್ ಖನ್ನಾ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಶ್ರೀಮತಿ ದೇವಿಕಾ ಪುರುಷೋತ್ತಮ್, ರಾಷ್ಟ್ರೀಯ ಮಟ್ಟದ ಯೋಗ ಶಿಕ್ಷಕಿ ಮತ್ತು ರೆಫ್ರಿ ಇವರು ಯೋಗ ಅಧಿವೇಶನವನ್ನು ಮುನ್ನಡೆಸಿದರು. ಶ್ರೀ ಅಶ್ವಿನಿ ಕುಮಾರ್, ಡಿಜಿಎಂ-ವ್ಯವಹಾರ ಅಭಿವೃದ್ಧಿ, ಶ್ರೀ ಸನಿಲ್ ಕುಮಾರ್, ಆರ್‌ಎಂ-ಮಂಗಳೂರು ನಗರ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ […]
ಉಡುಪಿ: ದೊಡ್ಡ ಸಾಮಗರ ನಾಲ್ಮೊಗ – ಗ್ರಂಥ ಲೋಕಾರ್ಪಣೆ
ಉಡುಪಿ: ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ, “ದೊಡ್ಡ ಸಾಮಗರ ನಾಲ್ಮೊಗ” ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗ್ರಹದಲ್ಲಿ ಜೂನ್ 29 ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಕಾಸರಗೋಡಿನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಪುಸ್ತಕವನ್ನು ಅನಾವರಣಗೊಳಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಮಾಹೆಯ ಸಹಕುಲಾಧಿಪತಿಗಳಾದ ಡಾ. ಹೆಚ್ ಎಸ್ ಬಲ್ಲಾಳರು ವಹಿಸಿಕೊಳ್ಳಲಿದ್ದು, […]
ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಜೂ.29ರ ವರೆಗೆ ಸುಪ್ರಜಾ ಬಂಜೆತನ ಚಿಕಿತ್ಸಾ ಶಿಬಿರ ವಂಶವಾಹಿನಿ ಕಲ್ಪ
ಮಣಿಪಾಲ: ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಬಂಜೆತನ ಜಾಗೃತಿ ಮಾಸವಾಗಿ ಜೂನ್ 24 ರಿಂದ 29 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಸುಪ್ರಜಾ ಬಂಜೆತನ ಚಿಕಿತ್ಸಾ ಶಿಬಿರ – ವಂಶವಾಹಿನಿ ಕಲ್ಪವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಭಾಷಣ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ ಬಂಜೆತನ (ಗರ್ಭಧಾರಣೆಗೆ ಅಸಮರ್ಥತೆ), ದ್ವಿತೀಯ ಬಂಜೆತನ, ದಂಪತಿ ಗರ್ಭದರಿಸಲು ಯೋಚಿಸುತ್ತಿದ್ದರೆ, ವಿಫಲವಾದ ಐವಿಎಫ್, ಐಯುಐ ರೋಗಿಗಳು, […]
ಉಡುಪಿ: ಕೃಷ್ಣಾನುಗ್ರಹ ಮಕ್ಕಳ ಕೇಂದ್ರದಲ್ಲಿ ವನಮಹೊತ್ಸವ.
ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಮಕ್ಕಳ ಕೇಂದ್ರ ಮಮತೆಯ ತೊಟ್ಟಿಲಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂನ್.23ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಉಮೇಶ್ ಪ್ರಭು, ಪರಿಸರವನ್ನು ಚೆನ್ನಾಗಿ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಗಿಡಗಳನ್ನು ನೆಟ್ಟು ಪಾಲನೆ ಮಾಡಬೇಕು ಈ ಸಂಸ್ಥೆಯಲ್ಲಿ ಈ ರೀತಿಯ ಕಾರ್ಯಕ್ರಮ […]