ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ವಿಶ್ವ ಯೋಗ ದಿನಾಚರಣೆ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ಜಗನ್ನಾಥ ಸಭಾಭವನದಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಲಿಸ್ ಯೋಗ ತರಬೇತಿ ಕೇಂದ್ರದ ತರಬೇತುದಾರರಾದ ಶ್ರೀಮತಿ ಸುಮನ ಶ್ರೀನಿವಾಸ್ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಯೋಗದಿಂದ ಅರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರತಿಮ ವಿ. ಎಸ್ ಇವರು ವಿವಿಧ ಬಗೆಯ ಯೋಗ ಪ್ರತ್ಯಕ್ಷತೆಯನ್ನು ನೀಡಿ […]
ರವಿರಾಜ್ ಎಚ್ ಪಿ ಇವರಿಗೆ “ಸಿಜಿಕೆ ರಂಗ ಪುರಸ್ಕಾರ-2024”
ಉಡುಪಿ: ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿಜಿಕೆ ರಂಗ ಪುರಸ್ಕಾರ’ -2024 ಕ್ಕೆ ಉಡುಪಿ ಜಿಲ್ಲೆಯಿಂದ ನಟ ನಿರ್ದೇಶಕ ಸಂಘಟಕ ರವಿರಾಜ್ ಎಚ್ ಪಿ ಆಯ್ಕೆಯಾಗಿರುತ್ತಾರೆ. ಇವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುತ್ತದೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ಹೀಗೊಂದು ರಂಗ […]
ತ್ರಿಶಾ ಕ್ಲಾಸಸ್ ಮಂಗಳೂರು : ಸಿಎ ಫೌಂಡೇಶನ್ ಮಾಹಿತಿ ಕಾರ್ಯಾಗಾರ
ಮಂಗಳೂರು : ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಜೂನ್ 20ರಂದು ಮಂಗಳೂರಿನ ರೋಟರಿ ಬಾಲಭವನ ಸಭಾಂಗಣದಲ್ಲಿ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳಿಗೆ ಸಿ ಎ ಕೋರ್ಸಿನ ಬಗ್ಗೆ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗೂ ಅತಿಥಿಯಾಗಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ ಕಾಯರ್ಕಟ್ಟೆ ಅವರು ಸಿ ಎ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ […]
ವಾಲಿ ಬಾಲ್ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅತ್ರಾಡಿ ಶಾಲಾ ಹಳೆ ವಿದ್ಯಾರ್ಥಿ ದೀಕ್ಷಿತ್.
ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿಯ ಹಳೆವಿದ್ಯಾರ್ಥಿ ದೀಕ್ಷಿತ್ ನಾಯಕ್ ಉಡುಪಿ ಜಿಲ್ಲೆಯ ವಾಲಿಬಾಲ್ ತಂಡದಲ್ಲಿ ಭಾಗವಹಿಸಿ, ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ರಾಜ್ಯಕ್ಕೆ ಆತ್ಯುತ್ತಮ ಆಟಗಾರನೆಂಬ ಹೆಸರು ಪಡೆದ ದೀಕ್ಷಿತ್ ಈಗ ಕರ್ನಾಟಕ ರಾಜ್ಯದ ಪರವಾಗಿ ರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಅತ್ರಾಡಿ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ದಿನೇಶ್ ನಾಯಕ್ ಕಬ್ಯಾಡಿ ಇವರ ಪುತ್ರ ನಾಗಿರುವ ದೀಕ್ಷಿತ್ ನಾಯಕ್ ಪ್ರಸ್ತುತ ಹಿರಿಯಡ್ಕ ಕೆಪಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಮುಂದಿನ ಕ್ರೀಡಾ ಮತ್ತು […]
ಕಾರ್ಕಳ: ಅಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು.
ಕಾರ್ಕಳ: ಕಾರ್ಕಳ ಶ್ರೀದೇವಿ ಕಾಲೋನಿ ಹತ್ತಿರ ಅಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ನಿವಾಸಿ ಶಂಕರ (50) ಎಂದು ಗುರುತಿಸಲಾಗಿದೆ.ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಜೂ.19ರಂದು ಲೋಹಿತ್ ಎಂಬವರ ಮನೆಯ ಬಳಿಯ ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಜೂ.21ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]