ಜುಲೈ10 ರಂದು “ಅವತಾರ ಸಿಲ್ಕ್”ನ 3ನೇ ಮಳಿಗೆ ಹೊನ್ನಾವರದಲ್ಲಿ ಶುಭಾರಂಭ.

ಉತ್ತರ ಕನ್ನಡ ಜೆಲ್ಲೆಯ ಕಾರವಾರ, ಕುಮಟದ ಅತೀ ದೊಡ್ಡ ಮದುವೆ ಸೀರೆಗಳ ಸಂಗ್ರಹ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾದ “ಅವತಾರ ಸಿಲ್ಕ್” ನ 3ನೇ ಮಳಿಗೆಯು ಇದೇ ಬರುವ ಜುಲೈ 10 ರಂದು ಹೊನ್ನಾವರ ಶರಾವತಿ ಸರ್ಕಲ್ ಬಳಿ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ಮಹಿಳೆಯರ ಉಡುಪುಗಳ ಬೃಹತ್ ಸಂಗ್ರಹವಿದೆ. ನುರಿತ ಗ್ರಾಹಕ ಸೇವಾ ಸಿಬ್ಬಂದಿಗಳು, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಉತ್ತಮ ಸೇವೆ ಹಾಗೂ ಉತ್ತಮ ಗುಣ ಮಟ್ಟದ ಬಟ್ಟೆಗಳು ಲಭ್ಯವಿದೆ. ಮಳಿಗೆಯಲ್ಲಿ ಆರಂಭಿಕ ಕೊಡುಗೆ ಮಹಿಳೆಯರ […]
ಮಣಿಪಾಲ ಜ್ಞಾನಸುಧಾ: ನೀಟ್ ಮತ್ತು ಜೆಇಇ ಫೌಂಡೇಶನ್ ತರಗತಿಗಳು ಪ್ರಾರಂಭ

ಮಣಿಪಾಲ: 9 ಮತ್ತು 10ನೇ ತರಗತಿಯಲ್ಲಿ(ಸಿ.ಬಿ.ಎಸ್.ಇ./ಸ್ಟೇಟ್/ಐ.ಸಿ.ಎಸ್.ಇ.) ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ನೀಟ್ ಮತ್ತು ಜೆಇಇ ಫೌಂಡೇಶನ್ ತರಗತಿಗಳು ಮಣಿಪಾಲ್ ಜ್ಞಾನಸುಧಾದಲ್ಲಿ ಜೂನ್ 24ರಿಂದ ಪ್ರಾರಂಭಗೊಳ್ಳಲಿದೆ.ಆಸಕ್ತ ವಿದ್ಯಾಥಿಗಳು ಮಾಹಿತಿ ಮತ್ತು ನೋಂದಣಿಗಾಗಿ 8217336497, 8762295555, 8686190505 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ರಾಜ್ಯದ ಕರಾವಳಿ ಭಾಗಗಳಲ್ಲಿ ಜೂ.24ರ ವರೆಗೆ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ.

ಇದರೊಂದಿಗೆ ಜೂ.22ರಿಂದ 24ರ ನಡುವಿನ ಅವಧಿಯಲ್ಲಿ ಸಾಧಾರಣ ದಿಂದ (64.5ಮಿ.ಮೀ-115.5ಮಿ.ಮೀ.)ದಿಂದ ಭಾರೀ ಮಳೆ (115.5 ರಿಂದ 204.4ಮಿ.ಮೀ) ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ 204.4ಮಿ.ಮೀ.ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇದ್ದು ರಾಜ್ಯ ಕರಾವಳಿಯಲ್ಲಿ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ ಎಂದು ಹಮಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಇಂದು ಸಂಜೆಯಿಂದ ಜೂ.21ರ ಮಧ್ಯರಾತ್ರಿ11:30ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರಿನವರೆಗೆ, ಉಡುಪಿ ಜಿಲ್ಲೆಯ ಬೈಂದೂರಿನಿಂದ ಕಾಪುವಿನವರೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮಜಲಿವರೆಗಿನ ಕಡಲಿನಲ್ಲಿ 2.0ಮೀ.ನಿಂದ 2.7ಮೀ.ವರೆಗಿನ ಎತ್ತರದ […]
ಉಡುಪಿ: ಡೆಂಗ್ಯೂ, ಮಲೇರಿಯಾ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿ.

ಉಡುಪಿ: ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗೂಡಂಗಡಿ ಮಾಲೀಕರು ತಮ್ಮಲ್ಲಿರುವ ಎಳನೀರು ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಬೇಕು. ಚರಂಡಿಗೆ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯಬಾರದು. ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಶೇಖರಣೆ ಮಾಡುವಂತಹ ಪಾತ್ರೆಗಳಲ್ಲಿ ನಿತ್ಯ ನೀರು ಬದಲಾವಣೆ ಮಾಡಬೇಕು ಹಾಗೂ ಸುತ್ತಮುತ್ತ ನಿಂತ ನೀರು ಕಂಡು ಬಂದರೆ ಅವುಗಳನ್ನು […]
ಆಪ್ತ ಸಮಾಲೋಚಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಗೌರವಧನ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಎಮ್.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿದ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 02 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಬನ್ನಂಜೆ, ಉಡುಪಿ ದೂ.ಸಂಖ್ಯೆ: 0820-2526394 ಅಥವಾ ಇ-ಮೇಲ್[email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.