ಕುಂದಾಪುರ: ಯುವಕ ಸಮುದ್ರಪಾಲು
ಕುಂದಾಪುರ : ಯುವಕನೊಬ್ಬ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಮುದ್ರಪಾಲಾದ ಘಟನೆ ಕೋಟೇಶ್ವರ ಸಮೀಪದ ಬೀಜಾಡಿ ಬೀಚ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಆತನ ಜತೆಗೆ ಬಂದು, ರಕ್ಷಣೆಗೆಂದು ಕಡಲಿಗಿಳಿದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.ಘಟನೆ ಹಿನ್ನೆಲೆ: ಸಮುದ್ರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು ಗುರುವಾರ ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ಮೇಹಿತನ ಆಮಂತ್ರಣದ ಮೇಲೆ ಬೀಜಾಡಿಗೆ ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಆತನ ಸ್ನೇಹಿತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇತ್ತೀಚಿನ […]
ಜೂ.21: ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಹೋಮ್ ಕೇರ್- ನೇತ್ರಶಾಸ್ತ್ರ ವಿಭಾಗಗಳ ಉದ್ಘಾಟನೆ
ಉಡುಪಿ, ಜೂ.21: ಉಡುಪಿಯ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಲೊಂಬಾರ್ಡ್ ಹೋಮ್ ಕೇರ್ (ಮನೆ ಆರೈಕೆ) ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವು ಜೂ.21ರಂದು ಪೂರ್ವಾಹ್ನ 11 ಗಂಟೆಗೆ ಚಿಟ್ಟಾಡಿಯ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ. ನೂತನ ಸೇವೆಗಳನ್ನು ಸಿಎಸ್ ಎ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ಅತಿ ವಂ.ಹೇಮಚಂದ್ರ ಕುಮಾರ್ ಉದ್ಘಾಟಿಸಲಿರುವರು. ಆಸ್ಪತ್ರೆಯ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಆಸ್ಪತ್ರೆಯ ನೇತ್ರತಜ್ಞ ಡಾ.ಆರ್ಥರ್ ರೋಡ್ರಿಗಸ್ ಮತ್ತು ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಗೌರವ […]
ಇಂದು (ಜೂ.21)ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಣಿಪಾಲ MSDC ಯಲ್ಲಿ “ಉಚಿತ ಯೋಗ ಸೆಶನ್”.
ಮಣಿಪಾಲ: ಮಣಿಪಾಲ MSDC (ಡಾ. ಟಿ ಎಂ ಎ ಪೈ ಫೌಂಡೇಶನ್ ನ ಒಂದು ಘಟಕ) ಯಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಇಂದು ಬೆಳಗ್ಗೆ 9:30 ರಿಂದ 10:30 ರ ವರೆಗೆ ಉಚಿತ ಯೋಗ ಸೆಶನ್ ಆಯೋಜಿಸಿದೆ. ಯೋಗ ಸೆಶನ್ ಅನ್ನು ದೃಷ್ಟಿ ಯೋಗ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ನಯನಾ ಶಾನಭೋಗ್ ಅವರು ನಡೆಸಲಿದ್ದಾರೆ, ಅವರು ಭಾರತ ಸರ್ಕಾರದ ಆಯುಷ್ ಸಚಿವಾಲಯವು ನಡೆಸಿದ ಯೋಗ ಬೋರ್ಡ್ ಪರೀಕ್ಷೆಯ ಹಂತ -1 ಅನ್ನು ಮಾಡಿದ್ದಾರೆ. ಆಸಕ್ತರು ದಯವಿಟ್ಟು […]
ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಡಿಲಿಗೆ ಶ್ರೀ ಮಿತ್ರ ವೈಭವ ಪ್ರಶಸ್ತಿ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ, ಪ್ರತಿಷ್ಠಿತ ಯಕ್ಷರಂಗ ಕಲಾ ಸಂಸ್ಥೆ, ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇ ಬೆಟ್ಟು, ಶ್ರೀಮಿತ್ರ ಕಲಾನಿಕೇತನ ಟ್ರಸ್ಟ್, ಸರಳೇ ಬೆಟ್ಟು, ಶ್ರೀ ಯಕ್ಷ ಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಮತ್ತು 41ನೇ ವಾರ್ಷಿಕೋತ್ಸವ ಸಮಾರಂಭವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ […]
ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ವತಿಯಿಂದ ನಡೆಯುತ್ತಿರುವ ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ ಜೂನ್19 ರಂದು ಸಂತೆಕಟ್ಟೆ ಕಲ್ಯಾಣಪುರ ವಾತ್ಸಲ್ಯ ಕ್ಲಿನಿಕ್ ನಲ್ಲಿ ನಡೆಯಿತು. ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮಿಯವರ ಆತಿಥ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪುಸ್ತಕ ನೀಡುವುದರ ಮೂಲಕ ಚಾಲನೆ ನೀಡಿದ ಖ್ಯಾತ ಕಲಾವಿದೆ, ನಿವೃತ್ತ ಶಿಕ್ಷಕಿ ಪ್ರತಿಭಾ ಎಲ್ ಸಾಮಗ ಮಾತನಾಡಿ, ಇತ್ತೀಚಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು […]