ಡಾ ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿಯ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಹಾಗೂ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ಸಹೃದಯ ಸಾಹಿತ್ಯ ಪ್ರತಿಷ್ಠಾನ ಸವದತ್ತಿ ನೀಡುವ ‘ಸಹೃದಯ ಕಾವ್ಯ ಪ್ರಶಸ್ತಿ-2024 ‘ನ್ನು ಜೂನ್ 16 ರಂದು ಸವದತ್ತಿಯಲ್ಲಿ ಕನ್ನಡದ ಹಿರಿಯ ವಿಮರ್ಶಕ ಎಚ್.ಎಸ್. ಸತ್ಯನಾರಾಯಣ ಅವರು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಹಿರಿಯ ಕಥೆಗಾರ ಚೆನ್ನಪ್ಪ ಅಂಗಡಿ, ಸವದತ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ವೈ ಎಂ ಯಾಕೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕುಮಾರಿ ಶಿವಪ್ರಿಯ ಕಡೇಚೂರ ಮತ್ತಿತರರು […]

ಕಾಪು: ಮಾನಸಿಕ ಅಸ್ವಸ್ಥ ವ್ಯಕ್ತಿ ನಾಪತ್ತೆ.

ಉಡುಪಿ, ಜೂನ್ 18: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಕಾಪು ಮೂಲದ ನಿವಾಸಿ ಪ್ರೀತಮ್ ಅಮೀನ್ (38) ಎಂಬ ವ್ಯಕ್ತಿಯು ಜೂನ್ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: […]

ಕಾಸರಗೋಡು: ನೀರುಪಾಲಾದ ಇಬ್ಬರು ಅವಳಿ ಮಕ್ಕಳು.

ಕಾಸರಗೋಡು: ಕಾಸರಗೋಡಿನ ಚೀಮೇನಿ ಕನಿಯಾಂದಲದಲ್ಲಿ ಅವಳಿ ಸಹೋದರರು ಕಲ್ಲಿನ ಕ್ವಾರಿಯಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಚೀಮೇನಿ ಕನಿಯಾಂದಲದಲ್ಲಿ ರಾಧಾಕೃಷ್ಣ ಅವರ ಮಕ್ಕಳಾದ ಸುದೇವ್‌(10) ಹಾಗೂ ಶ್ರೀದೇವಿ(10) ಮೃತರು. ಚೀಮೇನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು. ಮಧ್ಯಾಹ್ನ ಇಬ್ಬರು ಕೂಡ ಆಟವಾಡುವುದಕ್ಕೆಂದು ಸೈಕಲ್‌ನಲ್ಲಿ ತೆರಳಿದ್ದು, ಸಂಜೆಯಾದರೂ ಮನೆಗೆ ಆಗಮಿಸದ ಹಿನ್ನಲೆಯಲ್ಲಿ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕ್ವಾರಿ ಬಳಿ ಸೈಕಲ್‌ ಪತ್ತೆಯಾಗಿದೆ. ಸಂಶಯಗೊಂಡು ತೀವ್ರವಾಗಿ ಶೋಧಾ ಕಾರ್ಯ […]

ಮಣಿಪಾಲ ಆರೋಗ್ಯ ಕಾರ್ಡ್ 2024ರ ನೊಂದಣಿ ಪ್ರಕ್ರಿಯೆ ಪ್ರಾರಂಭ;ಇಡೀ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ವಿಶ್ವಾಸಾರ್ಹ ಸೇವೆ

ಮಣಿಪಾಲ, ಜೂ.18: ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ಇಂದಿನಿಂದ ಮಣಿಪಾಲ ಆರೋಗ್ಯ ಕಾರ್ಡ್ 2024 ನೋಂದಣಿಯನ್ನು ಪ್ರಾರಂಭವಾಗುತ್ತಿದೆ ಎಂದು ಘೋಷಿಸಿದರು. ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ದಾರ್ಶನಿಕ ಎಂದು ಗುರುತಿಸಲ್ಪಡುವ ದಿವಂಗತ ಡಾ. ಟಿ.ಎಂ.ಎ. ಪೈ ಅವರ ಪರಿವರ್ತನಾ ಪ್ರಭಾವವನ್ನು ಪ್ರತಿಬಿಂಬಿಸುತ್ತ, ಡಾ. ಬಲ್ಲಾಳ್ ಅವರು ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡುವ ಕಾರ್ಡ್‌ನ ಧ್ಯೇಯವನ್ನು ಎತ್ತಿ ತೋರಿಸಿದರು. “ಡಾ. ಪೈ ಅವರು ಸಮಾಜಕ್ಕೆ ನೀಡಿದ ಸಮರ್ಪಣೆ ಮತ್ತು ಸೇವೆ ಅಪರೂಪ. ಈ ವರ್ಷದ […]

ಉಡುಪಿ: ತಲವಾರಿನಿಂದ ಯುವಕನ ಕೊಲೆ ಯತ್ನ ಪ್ರಕರಣ: ಚಾರ್ಜ್ ಶೀಟ್ ತಯಾರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ – ಎಸ್‌ಪಿ ಡಾ. ಅರುಣ್ ಕೆ

ಉಡುಪಿ: ಉಡುಪಿ ಪುತ್ತೂರಿನಲ್ಲಿ ಸೆಲೂನ್ ಯುವಕನ ಮೇಲೆ ಗ್ಯಾಂಗ್ ವೊಂದು ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗನೆ ಚಾರ್ಜ್ ಶೀಟ್ ಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚರಣ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಜೂನ್ 16ರಂದು ದೂರು ನೀಡಿದ್ದಾರೆ. ಈ ದೂರಿನಲ್ಲಿ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ತಮ್ಮ ಅವರ ಪರಿಚಯದ ಸ್ನೇಹಿತರು […]