ಮೂಡುಬಿದಿರೆ: ‘ಸಮೃದ್ಧಿ’ ಮಹಾಮೇಳ ಸಂಪನ್ನ.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ)ವೇದಿಕೆಯಲ್ಲಿ ಆಯೋಜನೆಗೊಂಡ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಭಾನುವಾರ ಸಂಪನ್ನಗೊಂಡಿತು. ಮಹಾಮೇಳದ ಮೂರನೇ ಹಾಗೂ ಕೊನೆಯ ದಿನದಂದು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸ್ವಚ್ಛತಾ ಸೇನಾನಿಗಳ ಸೇವೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆಳ್ವಾಸ್ […]

ಉಡುಪಿ: ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ ವತಿಯಿಂದ ಭಜನಾ ತರಬೇತಿ ಉದ್ಘಾಟನೆ.

ಉಡುಪಿ: ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ)ಪಿತ್ರೋಡಿ, ಉದ್ಯಾವರ ವತಿಯಿಂದ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಜನಾ ಗುರುಗಳಾದ ಮಾಯ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸವಿತಾ ಶೆಟ್ಟಿ ಉಪಸ್ಥಿತರಿದ್ದರು. ಮಾತೃ ಮಂಡಳಿ ಸೇವಾ ಟ್ರಸ್ಟ್ ನ ಟ್ರಸ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ನಯನಾ ಗಣೇಶ್ ಪ್ರಸ್ತಾವನೆ ಗೈದರು. ಟ್ರಸ್ಟಿಗಳಾದ ಸುಮತಿ ಯು. ಮೈಂದನ್, ಆಶಾ ಮೈಂದನ್, ಚಂದ್ರಾ ಭಾಸ್ಕರ್,ಸರಸ್ವತಿ ಮೆಂಡನ್, ಜ್ಯೋತಿ ಕುಮಾರ್, ಕುಸುಮ ವಿಶ್ವನಾಥ್, ಮಮತಾ ಖಗಾಧರ್ ಹಾಗೂ ಸಂಗೀತಾ, ನೇತ್ರಾವತಿ, […]

ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ.

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ ಗುಡುಗು-ಗಾಳಿ ಸಾಥ್ ನೀಡಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳ, ಯಾದಗಿರಿ, ವಿಜಯಪುರ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ. […]

ಮಣಿಪಾಲ: ಗಾಂಜಾ ಸೇವನೆ – ಐವರು ಪೊಲೀಸರ ವಶಕ್ಕೆ

ಮಣಿಪಾಲ: ಹಯಗ್ರೀವ ನಗರ 5 ನೇ ಕ್ರಾಸ್ ಬಳಿ ಜೂ.10ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಐವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲದ ವಿದ್ಯಾರ್ಥಿಗಳಾದ ಅಶೀಲ (20), ರೆನಜೋ ಎಸ್. ಚಂದ್ರಗಿರಿ(20), ಅಭಿನವ ಸುರೇಶ್(20), ಶ್ರೀಹರಿ(19), ಅಭಿಜಿತ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಪು: ಕುಸಿದು ಬಿದ್ದು ಮೃತ್ಯು.

ಕಾಪು: ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿ ಒಬ್ಬರು ಮೃತ ಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮೃತ ಪಟ್ಟವರು ಸದಾನಂದ ಶೀನ (64). ಸದಾನಂದ ಶೀನ ಅವರು ನಿವೃತ್ತ ಇನ್‌ ಕಮ್ ಟ್ಯಾಕ್ಸ್ ನ ಉದ್ಯೋಗಿಯಾಗಿದ್ದ ಅವರು ಕಾಪು ಎಸ್‌ಬಿಐ ಹಣ ಡ್ರಾ ಮಾಡಲು ಬಂದಿದ್ದು ಅಲ್ಲಿ ಎಟಿಎಂ ಬಳಿ ನಿಂತಿದ್ದಾಗ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.