ಕೋಸ್ಟಲ್ ಸೌಂದರ್ಯ ಸ್ಪರ್ಧೆ – 2024 ನಾಗರಿಕ ಸಮಾಜ ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಕೊಡುವ ಗೌರವ ಅಂತರಿಕ ಸೌಂದರ್ಯಕ್ಕೆ ಕೊಡುವಂತಾಗಬೇಕು:- ಡಾ! ನಿಕೇತನ

ಉಡುಪಿ ಜೂ 15 : ಟಿ.ಎಸ್.ಆರ್ ಮೋಡೆಲ್ ಮ್ಯಾನೇಜ್ಮೆಂಟ್ ಗ್ರೂಪ್ ನ ವತಿಯಿಂದ ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್ ಹಾಗೂ ಆಭರಣ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಟೀನ್ / ಮಿಸ್ / ಮಿಸಸ್ ಕೋಸ್ಟಲ್ – 2024 ಸೌಂದರ್ಯ ಸ್ಪರ್ಧೆ ಉಡುಪಿಯ ಎಸ್ಸೆನ್ಸಿಯ ಮಣಿಪಾಲ್ ಇನ್ ನ ಗ್ರಾಂಡ್ ಮಿಲಿಯಮ್ ಸಭಾಂಗಣದಲ್ಲಿ ಜರುಗಿತು.ಅಂಬಲಪಾಡಿಯ ಜಿ.ಎಸ್ ಶ್ಯಾಮಿಲಿ ಇನ್ಪ್ರಾದ ನಿರ್ದೇಶಕಿ ಶ್ಯಾಮಿಲಿ ಜಿ.ಶಂಕರ್ ಉದ್ಘಾಟಿಸಿ, “ಕರಾವಳಿಯ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು ಟಿ.ಆರ್.ಎಸ್ ಮೋಡೆಲ್ ಮ್ಯಾನೇಜ್ಮೆಂಟ್ ಕಾರ್ಯ ಶ್ಲಾಘನೀಯ. ಭವಿಷ್ಯದಲ್ಲಿ […]
ಉಡುಪಿಯ ಪ್ಲೇಸ್ ಮೆಂಟ್ ಆಫೀಸಿನಲ್ಲಿ ಟೆಲಿಕಾಲರ್ ಮತ್ತು ಆಫೀಸ್ ಸ್ಟಾಫ್ ಹುದ್ದೆಗೆ ಬೇಕಾಗಿದ್ದಾರೆ

ಮಣಿಪಾಲ MSDCಯಲ್ಲಿ “ಇಂಟರ್ ನೆಟ್ ತಂತ್ರಜ್ಞಾನ”ದ ಕುರಿತು ಒಂದು ತಿಂಗಳ ಅಲ್ಪಾವಧಿ ಕೋರ್ಸ್.

ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ವಾಗಿದ್ದು ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ. Embedded Systems and loT: 🔹IoT Architecture and life cycle 🔹 Platforms for IoT 🔹 Real time […]
ಮಂಗಳೂರು: ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

ಮಂಗಳೂರು: ಸುಧಾಕರ್ ಶೆಟ್ಟಿ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಮ್ಯಾಕ್ಸ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಜೂ.14 ರಂದು ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿರಣ್ ಶೆಟ್ಟಿ ಮಂಗಳೂರು, ಉಮನಾಥ್ ಕೋಟ್ಯಾನ್, ನಿಶಾ, ದೇವಿರಾಜ್ ಎಸ್. ಎನ್.ಡಿ. , ಸಿದ್ಧಾರ್ಥ್ ಸುವರ್ಣ, ಮರಿಯ, ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ, ಸುರೇಶ್ ಕುಲಾಲ್ ಅಂಕಿತ, ವಿನು ಶೆಟ್ಟಿ ಮುಲ್ಕಿ ಮತ್ತು ದಾಕ್ಷಾಯಿಣಿ ವೀರೇಶ್ ರವರು ಪಾಲ್ಗೊಂಡಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ, ನರರೋಗ ತಜ್ಞ ಡಾ.ರಾಜಾ ನಿಧನ

ಉಡುಪಿ: ಹಿರಿಯ ವೈದ್ಯ, ನರರೋಗ ತಜ್ಞರಾದ ಡಾ.ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಇಂದು ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದರು. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ