ತ್ರಿಶಾ ವಿದ್ಯಾ ಕಾಲೇಜು ವಾರ್ಷಿಕೋತ್ಸವ

ಕಟಪಾಡಿ : ಕರಾವಳಿಯ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್‌ ಅಂಡ್ ಮ್ಯಾನೇಜ್ಮೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ ಕಾಳಿಕಾಂಬ ವಿಶ್ವಕರ್ಮೇಶ್ವರ ಸಭಾಭವನ ಅಗ್ರಹಾರ ಕಟಪಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಯುಕೆ ಅಂಡ್ ಕೋ ಕಂಪನಿ ಇದರ ಸ್ಥಾಪಕರಾದ ಕೆ. ಉಲ್ಲಾಸ್‌ ಕಾಮತ್ ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿ ಸ್ವಂತ ಉದ್ಯೋಗವನ್ನು ನೀಡುವವರಾಗಬೇಕು. ಹೊಸ ಯೋಜನೆ […]

ಉಡುಪಿ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು: ನಾಲ್ವರಿಗೆ ಗಾಯ

ಉಡುಪಿ: ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಉಡುಪಿ‌ ಅಂಬಾಗಿಲಿನಲ್ಲಿ ಸಂಭವಿಸಿದೆ.ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತಿದ್ದ ಕಾರು ಅತೀ ವೇಗದಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ಕಾರಿನ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ. ಇನ್ನು, ಕಾರಿನ ಇಂಜಿನ್ ಬೇರ್ಪಟ್ಟು ಮಾರುದ್ದ ಹೋಗಿ ಬಿದ್ದಿದೆ. ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಡುಬಿದ್ರಿ: ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತ್ಯು.

ಪಡುಬಿದ್ರಿ: ಬುದವಾರ ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ತೀರಾ ಅಸ್ವಸ್ಥಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯುವಾಗಲೇ ಮೃತಪಟ್ಟಿರುವ ಘಟನೆ ಜೂ.13ರಂದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತಪಟ್ಟವರು ಇನ್ನಾ ಕೆರೆ ಸಮೀಪ ಮನೆಯಲ್ಲಿ ಅಕ್ಕನೊಂದಿಗೆ ಇದ್ದ ಕೂಲಿ ಕಾಯಕ ರವಿ(46) ಎಂಬವರು. ಜ್ವರದಿಂದ ಬಳಲುತ್ತಿದ್ದ ರವಿ ಅವರು ವೈದ್ಯರ ಔಷಧಿ ತೆಗೆದುಕೊಂಡ ಬಳಿಕ ಜ್ವರ ಕಡಿಮೆಯಾಗಿ ಮನೆಯಲ್ಲಿಯೇ ಇದ್ದರು. ನಿತ್ರಾಣದಿಂದ ಅವರಿಗೆ ಶೌಚಾಲಯಕ್ಕೆ ಹೋದಾಗ ಹೃದಯಾಘಾತವಾಗಿರಬಹುದು ಅಥವಾ ಇನ್ನಾವುದೋ ಆನಾರೋಗ್ಯದಿಂದ ಮೃತಪಟ್ಟಿರಬೇಕೆಂದು ಪೊಲೀಸರು ದೂರಿನಲ್ಲಿ […]

ಮಣಿಪಾಲ: ಅನಾರೋಗ್ಯದಿಂದ ಯುವತಿ ಮೃತ್ಯು

ಮಣಿಪಾಲ: ಮಣಿಪಾಲದ ಆಸರೆ ವಸತಿ ಮತ್ತು ಪುನರ್ವಸತಿ ಕೇಂದ್ರದಲ್ಲಿದ್ದ ಬೆಂಗಳೂರಿನ ಗೋಪಿನಾಥ ಹರಿಕೃಷ್ಣ ಎಂಬವರ ಮಗಳು ನಾಗಶ್ರೀ(25) ಎಂಬವರು ಅನಾರೋಗ್ಯದಿಂದ ಜೂ.12ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು – ರಿಕ್ಷಾ ನಡುವೆ ಅಪಘಾತ: ಓರ್ವ ಮಹಿಳೆ ಮೃತ್ಯು, ನಾಲ್ವರಿಗೆ ಗಾಯ

ಉಡುಪಿ: ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ಕಾರೊಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯ ಗೊಂಡ ಘಟನೆ ಜೂ.12ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬೆಳ್ಳೆ ಗ್ರಾಮದ ಆಗ್ನೇಸ್ ನೊರೊನ್ಹಾ(76) ಎಂದು ಗುರುತಿಸಲಾಗಿದೆ. ಅದೇ ರೀತಿ ಗಾಯಗೊಂಡ ರಿಕ್ಷಾ ಚಾಲಕ ಸುರೇಶ್, ಮೃತರ ಅಕ್ಕನ ಮಗಳು ಜೆಸಿಂತಾ ಮೆನೇಜಸ್(51), ಕಾರು ಚಾಲಕ ಮನೋಜ್ ಹಾಗೂ ಕಾರಿನಲ್ಲಿದ್ದ ದಾನಪ್ಪರಾಥೋಡ್ ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.