ಕುಂದಾಪುರ: ಬಸ್ಸಿನಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು.
ಕುಂದಾಪುರ: ವ್ಯಕ್ತಿಯೊಬ್ಬರು ಕಡಬ ಸಮೀಪ ಬಸ್ಸಿನಲ್ಲಿ ಸಂಚರಿಸುವಾಗ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜೂ.9ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತಪಟ್ಟವರು ನಾಡ ಗ್ರಾಮದ ಪಡುಕೋಣೆಯ ನಿವಾಸಿ ನಾಗೇಶ ಮಡಿವಾಳ (40). ಇವರು ಜೂ. 9ರಂದು ಕುಟುಂಬದವರೊಡನೆ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ, ಮರಳಿ ಬರುವ ವೇಳೆ ಕಡಬ ಸಮೀಪ ಸಂಚರಿಸುವಾಗ ಬಸ್ಸಿನಲ್ಲಿಯೇ ಕುಸಿದು ಬಿದ್ದಿದ್ದಾರೆ. ನಾಗೇಶ ಅವರನ್ನು ಕೂಡಲೇ ಕಡಬ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರೊಳಗೆ ಮೃತಪಟ್ಟಿದ್ದರು. […]