ಉಡುಪಿಯ ಪ್ರತಿಷ್ಠಿತ ಬ್ರೌನ್ ವುಡ್ ಫರ್ನಿಚರ್’ನಲ್ಲಿ ವಿವಿಧ ಹುದ್ದೆ.

ಉಡುಪಿ: ಉಡುಪಿಯ ಬ್ರಹ್ಮಗಿರಿ ಹತ್ತಿರ ಇರುವ ಪ್ರತಿಷ್ಠಿತ ಬ್ರೌನ್ ವುಡ್ ಫರ್ನಿಚರ್’ನಲ್ಲಿ ವಿವಿಧ ಹುದ್ದೆಗೆ ಎಕ್ಸಿಕ್ಯೂಟಿವ್ಸ್ ಬೇಕಾಗಿದ್ದಾರೆ. PF & ESI ಸೌಲಭ್ಯವಿದ್ದು, ನಿಮ್ಮ ರೆಸ್ಯೂಮ್ ಅನ್ನು ಕೂಡಲೇ ಕಳುಹಿಸಿ.+91 8660957710

ಉಡುಪಿ: ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ: ಗೀತಾಂಜಲಿ ಸುವರ್ಣ ಹೆಸರು ಮುಂಚೂಣಿಗೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಕೋಟ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಉದ್ಭವ ವಾಗುತ್ತಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು, ಜಾತಿ ಲೆಕ್ಕಾಚಾರ, ಪಕ್ಷದಲ್ಲಿನ ಹಿರಿತನ ಎಲ್ಲವೂ ಗಣನೆಗೆ ತೆಗೆದುಕೊಂಡು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಈ ನಡುವೆ ಸಾರ್ವಜನಿಕ ವಲಯದಲ್ಲಿ ಸದಾ ಸಮಾಜ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುವ ಬಿಲ್ಲವ ಸಮುದಾಯದ ಶ್ರೀಮತಿ ಗೀತಾಂಜಲಿ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇವರು ರಾಜಕೀಯವಾಗಿ 2 ಬಾರಿ ಪಡುಬಿದ್ರಿ ಮತ್ತು ಕುರ್ಕಾಲುವಿನ ಜಿಲ್ಲಾ […]

ಮುಖ್ಯ ರಸ್ತೆ ಕಾಮಗಾರಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪರಿಶೀಲನೆ.

ಹಿರಿಯಡಕ: ಉಡುಪಿ, ಮಣಿಪಾಲ, ಆತ್ರಾಡಿ, ಪರ್ಕಳ, ಹಿರಿಯಡಕ ಹಾಗೂ ಪೆರ್ಡೂರು ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ 160 A) ಕಾಮಗಾರಿ ಪ್ರಗತಿಯಲ್ಲಿದ್ದು, ಜೂ.12ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಿರಿಯಡಕ, ಪೆರ್ಡೂರು, ಆತ್ರಾಡಿ ಭಾಗದ ವಿವಿಧ ಕಡೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ನಿರಂತರ ಮಳೆಯಾಗುತ್ತಿರುವುದರಿಂದ ಮಳೆ ನೀರು ಹಾದು ಹೋಗಲು ಸಮರ್ಪಕವಾದ ಚರಂಡಿ ನಿರ್ಮಿಸಿ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪೆರ್ಡೂರು ಗ್ರಾಮ ಪಂಚಾಯತ್ […]

ಮಂಗಳೂರಿನ ಜನರ ಮನಗೆದ್ದ “ಅ ಫ್ರೆಂಡ್ ಬಿಯೊಂಡ್ ದಿ ಫೆನ್ಸ್”

ಮಂಗಳೂರು, ಜೂ.13: ಶತಮಾನಗಳ ಹಿಂದೆ ಕನ್ನಡ ರಂಗಭೂಮಿ ಕಂಪನಿ ನಾಟಕಗಳಲ್ಲಿ ನೈಜ ಒಂಟೆ ಮತ್ತು ಆನೆಗಳನ್ನು ಬಳಸಿ ಮನರಂಜನೆ ನೀಡುವಷ್ಟು ಶ್ರೀಮಂತವಾಗಿತ್ತು. ಇಂದು, ಸರಳ ತಂತ್ರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ನಾಟಕಗಳನ್ನು ಹೊಂದಿಸಲಾಗಿದೆ. ಆದರೆ ಈಗ, ಕಲಾಭಿ(ರಿ )ಸಂಸ್ಥೆ ಹಳೆಯ ಸಂಪ್ರದಾಯವನ್ನು ಪ್ರೇಕ್ಷಕರಿಗೆ ನೆನಪಿಸುವಲ್ಲಿ ಯಶಸ್ವೀಯಾಗಿದ್ದಾರೆ. ಮಂಗಳೂರಿನಲ್ಲಿ ನಿಜವಾದ ಆನೆಗಳನ್ನು ವೇದಿಕೆಗೆ ತರುವಲ್ಲಿ ಕಲಾಭಿ ತಂಡ ಮತ್ತೆ ಯಶಸ್ಸು ಕಂಡಿದೆ. ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಕಲಾಭಿ ರಂಗೋತ್ಸವದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಶ್ರವಣ್ ಹೆಗ್ಗೋಡು […]

ವಿಶೇಷ ಶಿಕ್ಷಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಸಮಗ್ರ ಶಿಕ್ಷಣ ಯೋಜನೆಯಡಿ ಸಮನ್ವಯ ಶಿಕ್ಷಣ ಮಧ್ಯವರ್ತನ ಚಟುವಟಿಕೆಯನ್ನು ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ವಿಶೇಷ ಶಿಕ್ಷಕರ ಸೇವೆಯನ್ನು ಪಡೆಯುವ ಸಲುವಾಗಿ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಖಾಲಿ ಇರುವ ವಿಶೇಷ ಶಿಕ್ಷಕರ ಹುದ್ದೆಗೆ ನೇರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 18 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪಯೋಜನಾ ಸಮನ್ವಯಾಧಿಕಾರಿ, ಉಪನಿರ್ದೇಶಕರ […]