ಮಂಗಳೂರು: ತನಿಷ್ಕ್’ನ 100% ಚಿನ್ನದ ವಿನಿಮಯ ಕಾರ್ಯಕ್ರಮದೊಂದಿಗೆ ಚಿನ್ನದ ಮೌಲ್ಯ ಹೆಚ್ಚಳ.
ಮಂಗಳೂರು: ಮೇ 2024 – ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನೆಲೆಯಲ್ಲಿ, ಟಾಟಾ ಉದ್ಯಮ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ತನಿಷ್ಕ್ ತನ್ನ ‘ಗೋಲ್ಡ್ ಎಕ್ಸ್ಚೇಂಜ್ ಪಾಲಿಸಿ’ಯನ್ನು ಅಸ್ಥಿರವಾದ ಚಿನ್ನದ ದರಗಳ ನಡುವೆ ತನ್ನ ಗ್ರಾಹಕರ ವಿಕಾಸದ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಪಡಿಸುತ್ತಿದೆ. ಶೂನ್ಯ ಕಡಿತದ ಮೂಲಕ ಗ್ರಾಹಕರಿಗೆ ತಮ್ಮ ಚಿನ್ನಕ್ಕೆ ಉತ್ತಮ ಮೌಲ್ಯವನ್ನು ನೀಡಲು, ಈ ವಿನಿಮಯ ನೀತಿಯು ತನಿಷ್ಕ್ ನೀಡುವ ಹೊಸ ಮತ್ತು ಇತ್ತೀಚಿನ ವಿನ್ಯಾಸಗಳೊಂದಿಗೆ ಹಳೆಯ ಚಿನ್ನವನ್ನು ನವೀಕರಿಸಲು […]
ಎಸ್.ಎಸ್.ಎಲ್.ಸಿ ಪರೀಕ್ಷೆ-2: ನಿಷೇಧಾಜ್ಞೆ ಜಾರಿ
ಉಡುಪಿ: 2024 ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಯು ಜಿಲ್ಲೆಯ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 14 ರಿಂದ 22 ರ ವರೆಗೆ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗಧಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 (1) ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿ […]
ಉಡುಪಿ: ಜೂನ್ 15ರಂದು ಮಿಶನ್ ಆಸ್ಪತ್ರೆಯಲ್ಲಿ ‘ಇನ್ಸ್ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಗೆ ಚಾಲನೆ
ಉಡುಪಿ: ಕಳೆದ ಒಂದು ಶತಮಾನದಿಂದ ಉಡುಪಿ ಪರಿಸರದ ಆರೋಗ್ಯ ರಕ್ಷಣೆಯ ಮೂಲಾಧಾರವಾಗಿದ್ದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಇದೀಗ ‘ಇನ್ಸ್ ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಯನ್ನು ಆರಂಭಿಸುವುದರೊಂದಿಗೆ ಹವಮಾನ ಬದಲಾವಣೆಯನ್ನು ನೀಗಿಸುವ ಪ್ರಕ್ರಿಯೆಗೆ ಮುಂದಾಗಿದೆ. ಇನ್ಸ್ ಪಾಯರ್ ಯೋಜನೆಗೆ ಇದೇ ಜೂನ್ 15ರಂದು ಬೆಳಿಗ್ಗೆ 11ಗಂಟೆಗೆ ಆಸ್ಪತ್ರೆ ಆವರಣದಲ್ಲಿ ನಡೆಯಲಿರುವ ಸಂಸ್ಥೆಯ 101 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಾಲನೆ ಸಿಗಲಿದೆ. ಈ ಕುರಿತು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ […]
ಎಂ.ಸಿ.ಸಿ. ಬ್ಯಾಂಕ್ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ.
ಮಂಗಳೂರು: ಬ್ಯಾಂಕಿನ 2023-24ನೇ ವರ್ಷದ ಸಿಬ್ಬಂದಿ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 8, 2024 ರಂದು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಸಮೀಕ್ಷೆಯು ಆಲ್ಡ್ರಿನ್ ಡಿಸೋಜ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಂಗಳೂರು ಧರ್ಮಪ್ರಾಂತ್ಯದ ಮಾಜಿ ಪ್ರೊಕ್ಯುರೇಟರ್ ರೆ| ಫಾ| ಜಾನ್ ವಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಾ| ಜಾನ್ ವಾಸ್ ಅವರು, ಕಳೆದ ದಶಕದಲ್ಲಿ ಬ್ಯಾಂಕ್ ಮಾಡಿರುವ […]
ಜೂ.14: ಮಂಗಳೂರಿನಲ್ಲಿ ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
ಸುಧಾಕರ್ ಶೆಟ್ಟಿ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಮ್ಯಾಕ್ಸ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಜೂ.14 ರಂದು 4.30 ಕ್ಕೆ ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಿರಣ್ ಶೆಟ್ಟಿ ಮಂಗಳೂರು, ಉಮನಾಥ್ ಕೋಟ್ಯಾನ್, ನಿಶಾ, ದೇವಿರಾಜ್ ಎಸ್. ಎನ್.ಡಿ. , ಸಿದ್ಧಾರ್ಥ್ ಸುವರ್ಣ, ಮರಿಯ, ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ, ಅಂಕಿತ, ವಿನು ಶೆಟ್ಟಿ ಮುಲ್ಕಿ ಮತ್ತು ದಾಕ್ಷಾಯಿಣಿ ವೀರೇಶ್ ರವರು ಪಾಲ್ಗೊಳ್ಳಲಿದ್ದಾರೆ.