ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಮಂಗಳೂರು : ತ್ರಿಶಾ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಮಾಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವು ಜೂನ್ 10 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ್ ಕಾಯರ್ ಕಟ್ಟೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಶಿಕ್ಷಣ ಅಂದರೆ ಬರೀ ಅಂಕಗಳನ್ನು ಗಳಿಸುವುದು ಮಾತ್ರ ಅಲ್ಲ ಅದರ ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ […]
ಹೆಬ್ರಿ: ವ್ಯಕ್ತಿ ನಾಪತ್ತೆ.
ಹೆಬ್ರಿ: ವ್ಯಕ್ತಿ ಒಬ್ಬರು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾದ ಘಟನೆ ಚಾರ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಚಾರ ಗ್ರಾಮದ ನಿವಾಸಿ ಆನಂದ (55) ಎಂದು ಗುರುತಿಸಲಾಗಿದೆ. ಆನಂದ ಹೊಟೇಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು, ಜೂ. 7ರಂದು ಸಂಜೆ 4 ಗಂಟೆಗೆ ಹೊಟೇಲ್ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಕೆಲಸಕ್ಕೂ ಹೋಗದೆ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ವ್ಯಕ್ತಿ ನಾಪತ್ತೆ.
ಅಜೆಕಾರು: ತಾಲೂಕು ಹೆರ್ಮುಂಡೆ ಗ್ರಾಮದ ನಾಲ್ನೋಡಿ ನಿವಾಸಿ ಸಾಧು ಪೂಜಾರಿ ( 74) ಎಂಬವರು ಜೂ.10 ರಂದು ಸಂಜೆ ಮನೆಯಿಂದ ಹೊರಗಡೆ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಪ್ಪು ಬಣ್ಣದ ಟೀಶರ್ಟ್ ಮತ್ತು ಬರ್ಮುಡಾ ಚಡ್ಡಿ ಧರಿಸಿದ್ದು, ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಅಜೆಕಾರು ಪೋಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಸಂಪರ್ಕ ಸಂಖ್ಯೆ: ಪಿ.ಎಸ್.ಐ: 9480805470
ಸ್ನೇಹಲ್ ಸಾಮಂತ್ ಅವರಿಗೆ ಪಿ.ಎಚ್.ಡಿ
ಉಡುಪಿ: ಮಣಿಪಾಲ ತಾಂತ್ರಿಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸ್ನೇಹಲ್ ಸಾಮಂತ್ ಅವರು ಮಂಡಿಸಿದ “ಡಿಸೈನ್ ಆ್ಯಂಡ್ ಇಂಪ್ಲಿಮೆಂಟೇಶನ್ ಆಫ್ ಲೈಟ್ ವೆಯ್ಟ್ ಕ್ರಿಪ್ಟೋಗ್ರಾಫಿಕ್ ಟೆಕ್ನಿಕ್ಸ್ ಫಾರ್ ಸೆಕ್ಯೂರ್ ಡ್ರೋನ್ ಕಮ್ಯುನಿಕೇಶನ್” ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಾಹೆ ವಿ.ವಿ. ಪಿ.ಎಚ್.ಡಿ ನೀಡಿದೆ.ಎಂ. ಐ. ಟಿ ಬೆಂಗಳೂರು ಸಿ. ಎಸ್. ಇ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಪ್ರೇಮಾ ಕೆ. ವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಎಂ. ಐ. ಟಿ […]
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಗೌಡ ಸೇರಿದಂತೆ 13 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಗೆ.
ಬೆಂಗಳೂರು: ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ 13 ಮಂದಿ ಆರೋಪಿಗಳಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.ರೇಣುಕಾಸ್ವಾಮಿ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ಬಂಧಿತ 13 ಆರೋಪಿಗಳಿಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಮೂರ್ತಿ […]