ಜೂ.14: ಮಣಿಪಾಲ MSDCಯಲ್ಲಿ ಕೇವಲ ರೂ.250 ಗೆ ಕಲಿಯಿರಿ “ಗಾರ್ಮೆಂಟ್ ಸ್ಟಿಚಿಂಗ್ ಟೆಕ್ನಿಕ್ಸ್”

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ ಜೂ.14 ರಂದು ಬೆಳಿಗ್ಗೆ 10 ರಿಂದ 4ರವರೆಗೆ “ಗಾರ್ಮೆಂಟ್ ಸ್ಟಿಚಿಂಗ್ ಟೆಕ್ನಿಕ್ಸ್” ಕೌಶಲ್ಯದ ಕುರಿತು ಕಾರ್ಯಗಾರ ನಡೆಯಲಿದೆ. ಯುವತಿಯರಿಗೆ ಇದೊಂದು ಉಪಯುಕ್ತವಾದ ಕಾರ್ಯಗಾರವಾಗಿದ್ದು, ಗಾರ್ಮೆಂಟ್ ಸ್ಟಿಚಿಂಗ್ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಗುವುದು. ಈ ಕಾರ್ಯಗಾರದ ಶುಲ್ಕ ಕೇವಲ ರೂ.250 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:14 ಜೂನ್ 2024🕓 10:00 AM-4:00 PMCADD ಸೆಂಟರ್CADD ಸೆಂಟರ್, MSDC ಕಟ್ಟಡ, 2ನೇ […]

ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ “ಇನ್ಸಪಾಯಿರ್” ಬಿಡುಗಡೆ

ಬ್ರಹ್ಮಾವರ:ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜೂ.10ರಂದು ಕಾಲೇಜಿನ ವಾರ್ಷಿಕ ಸಂಚಿಕೆ “ಇನ್ಸಪಾಯಿರ್” ಬಿಡುಗಡೆ ಮಾಡಲಾಯಿತು. ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಒ ಎಸ್ ಸಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೆ.ಫಾ.ಎಮ್.ಸಿ ಮಥಾಯಿ ಅವರು ವಹಿಸಿ, ಅಧ್ಯಕ್ಷಿಯ ಭಾಷಣದಲ್ಲಿ ಈ ಸಂಚಿಕೆ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರವಾಗುತ್ತದೆ ಎಂದರು. ಬ್ರಹ್ಮಾವರದ ಉದ್ಯಮಿ ಹಾಗೂ ಬ್ರಹ್ಮಾವರ ತಾಲ್ಲೂಕು ಅತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್ ಶೆಟ್ಟಿಯವರು ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ […]

ಕಾರ್ಕಳ: ಭಾರತೀಯ ಸೇನೆಗೆ ದುರ್ಗಾಪ್ರಸಾದ್ ಆಯ್ಕೆ.

ಕಾರ್ಕಳ: ಪಳ್ಳಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದುರ್ಗಾಪ್ರಸಾದ್ ಭಾರತೀಯ ಸೇನೆಯಲ್ಲಿ ಅಗ್ನಿಪಥ್‌ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ. ಇವರು ಪಳ್ಳಿ ಬೊಬ್ಬರ ಪಲ್ಕೆ ನಿವಾಸಿ ದಿ.ಜಯರಾಂ ಕುಲಾಲ್ ಮತ್ತು ಶೋಭಾ ಕುಲಾಲ್ ದಂಪತಿ ಪುತ್ರ. ಕಳೆದ ಏಳು ತಿಂಗಳಿನಿಂದ ಬೆಂಗಳೂರಿನ ಎಂಇಜಿ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದು, ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿ ಕರ್ತವ್ಯ ನಿಭಾಯಿಸಲು ಜೂ. 16ರಂದು ತೆರಳಲಿದ್ದಾರೆ.

ತ್ರಿಶಾ ವಿದ್ಯಾ ಪಿಯು ಕಾಲೇಜು : ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವು ಜೂನ್ 9ರಂದು ಎಸ್ ವಿ ಎಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಬಿ ಎಮ್ ಹೆಗ್ಡೆ ,ಶಿಕ್ಷಣ ಅಂದರೆ ಬರೀ ಅಂಕಗಳನ್ನು ಗಳಿಸುವುದು ಮಾತ್ರ ಅಲ್ಲ ಜೊತೆಗೆ ವ್ಯಕ್ತಿತ್ವ ವಿಕಸನವನ್ನೂ ಬೆಳೆಸಿಕೊಳ್ಳಬೇಕು. ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ದಿನ ನಿತ್ಯದ ಪಾಠವನ್ನು ಅಂದೇ ಓದಬೇಕು. ಜೊತೆಗೆ ತಮ್ಮ ಜೀವನದಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ […]

ಉಳ್ಳಾಲ ಬೀಚ್’ನಲ್ಲಿ ಮಹಿಳೆಯರ ರಕ್ಷಣೆ- ಓರ್ವ ಮಹಿಳೆ ಮೃತ್ಯು.

ಉಳ್ಳಾಲ: ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯರು ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದು, ಒಬ್ಬಾಕೆ ಸಮುದ್ರಪಾಲಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ‌. ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್ ಪ್ರಸನ್ನ ಎಂಬವರ ಪತ್ನಿ ಪರಿಮೀ ರತ್ನ ಕುಮಾರಿ (57) ಸಾವನ್ನಪ್ಪಿದವರು. ಉಳ್ಳಾಲ ಬೀಚ್ ಸಮುದ್ರದಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು. ಸ್ಥಳೀಯರು ತಕ್ಷಣ ನಾಲ್ವರನ್ನು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಈ ಪೈಕಿ ಪರಿಮೀ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ […]