ಕಾಸರಗೋಡು: ಖಾಸಗಿ ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು: ಬಾಲಕ ಅಪಾಯದಿಂದ ಪಾರು.
ಕಾಸರಗೋಡು: ಮಹಿಳೆಯೊಬ್ಬರು ಬಸ್ಸಿನಡಿಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಕಾಸರಗೋಡಿನ ಚೆರ್ವತ್ತೂರಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತಪಟ್ಟವರನ್ನು ಪಡನ್ನಕಾಡಿನ ಫೌಝಿಯಾ(53) ಎಂದು ಗುರುತಿಸಲಾಗಿದೆ. ಬಸ್ ಸ್ಟ್ಯಾಂಡ್ನಲ್ಲಿ ಪಯ್ಯನ್ನೂರಿಗೆ ತೆರಳುವ ಖಾಸಗಿ ಬಸ್ಸನ್ನು ರಿವರ್ಸ್ ತೆಗೆಯುವಾಗ, ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಫೌಝುಯಾ ಬಸ್ಸಿನಡಿಗೆ ಸಿಲುಕಿದ್ದು, ಜೊತೆಗಿದ್ದ ಎಂಟು ವರ್ಷದ ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಮಹಿಳೆಯು ಚಿಮೇನಿಯಲ್ಲಿರುವ ಪುತ್ರಿಯ ಮನೆಗೆ ತೆರಳಲು ಬಸ್ಸು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚೆರ್ವತ್ತೂರಿನ ಖಾಸಗಿ […]
ಕಾರ್ಕಳ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ.
ಕಾರ್ಕಳ: ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ನೇತೃತ್ವದಲ್ಲಿ ವಿನಾಯಕ ಫ್ರೆಂಡ್ಸ್ ಕಾರ್ಕಳ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜೂ.9 ರಂದು ನಡೆಯಿತು. ಈ ಸಂದರ್ಭದಲ್ಲಿ ವಿನಾಯಕ ಫ್ರೆಂಡ್ಸ್ ಕಾರ್ಕಳ ಇದರ ಮುಖ್ಯಸ್ಥರಾದಂತಹ ಪ್ರಮೋದ್ ಪಾಟಕ್, ಶ್ರೀನಿವಾಸ್, ಸಾಕ್ಷತ್ ಹಾಗೂ ಇನ್ನಿತರೂ ಉಪಸ್ಥಿತರಿದ್ದರು. ರಕ್ತದಾನ ಮಾಡಿದವರಿಗೆ ಗಿಡ ಕೊಟ್ಟು ಸ್ವಾಗತಿಸಿದರು. ಈ ಸಂದರ್ಭದಲ್ಲಿ ತುಳುನಾಡ ತುಡಾರ್ ಖ್ಯಾತಿಯ ಹಾಗೂ ನಮ್ಮ ತುಳುನಾಡು ಟ್ರಸ್ಟ್ (ರಿ) ನ ರಾಜ್ಯ ಸಂಚಾಲಕರಾದಂತಹ […]
ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ಸುಬ್ರಮಣ್ಯ ಸಹಸ್ರನಾಮ ಪಾಯಸಹೋಮ ಸಂಪನ್ನ.
ಉಡುಪಿ : ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿರುವ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಪ್ರತಿಷ್ಠ ವರ್ಧಂತಿ ಮಹೋತ್ಸವವೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಆನಂದ್ ಭಟ್ ಹೇರೂರು ನೇತೃತ್ವದಲ್ಲಿ ಭಕ್ತರ ಸಮಕ್ಷಮದಲ್ಲಿ ಸಂಪನ್ನಗೊಂಡಿತು. ಆ ಪ್ರಯುಕ್ತ ಧಾರ್ಮಿಕ ವಿಧಿಗಳಾಗಿ ಪಂಚವಂಶತೆ ಕಲಶ ಆರಾಧನೆ ಪ್ರಧಾನ ಹೋಮ ಶ್ರೀ ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮ ಪವಮಾನ ಸೂಕ್ತ ಹೋಮ ಕಲಶ […]
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾನವ ಎದೆಹಾಲು ನಿಧಿ (ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್) ಉದ್ಘಾಟನೆ
ಮಣಿಪಾಲ, ಜೂ.11: ಉಡುಪಿಯ ಮೊದಲ ಮಾನವ ಎದೆಹಾಲು ನಿಧಿ (ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್) “ಮಣಿಪಾಲ ಮಾತೃ-ಅಮೃತ್ ಮಿಲ್ಕ್ ಬ್ಯಾಂಕ್” ಅನ್ನು 2024 ರ ಜೂನ್ 11 ರಂದು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದ ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಶ್ರೀಮತಿ ಮಮತಾದೇವಿ ಜಿ ಎಸ್ ಅವರು ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಐ.ಪಿ.ಗಡಾದ್ ಅವರು ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದರು. ಕೆ ಎಂ ಸಿ ಮಣಿಪಾಲದ ಡೀನ್ […]
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕ್ರಿಕೆಟ್ ಆಟಗಾರ ಮಯಂಕ್ ಅಗರವಾಲ್ ಭೇಟಿ
ಮಂಗಳೂರು: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು. ಮಯಂಕ್ ಅಗರವಾಲ್ ಅವರು ಪತ್ನಿ ಅಶಿತಾ ಸೂದ್ ಜೊತೆ ಕಟೀಲು ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ, ಅರಶಿನ ಒಳಗೊಂಡ ಮಡಿಲಕ್ಕಿಯನ್ನು ದೇವಿಗೆ ಸಮರ್ಪಿಸಿದರು. ಅನುವಂಶಿಕ ಅರ್ಚಕರಾದ ಕುಮಾರ್ ಅಸ್ರಣ್ಣ ಅವರು ವಸ್ತ್ರ ಮತ್ತು ಪ್ರಸಾದ ನೀಡಿ ಮಯಂಕ್ಗೆ ಗೌರವ ಸಲ್ಲಿಸಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಟ್ರಸ್ಟಿ ವೆಂಕಟರಮಣ ಅಸ್ರಣ್ಣ ಇದ್ದರು. ಬಳಿಕ ಉಡುಪಿ ಜಿಲ್ಲೆ ಕುಂದಾಪುರದ […]