ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್: ವಾರ್ಷಿಕೋತ್ಸವ, ಬಹುಮಾನ ವಿತರಣೆ.
ಬ್ರಹ್ಮಾವರ : ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಡತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಹಾಗೂ ಬಿ.ಡಿ ಶೆಟ್ಟಿ ಕಾಲೇಜ್ ಮಾಬುಕಳ ಇದರ ವಾರ್ಷಿಕೊತ್ಸವ ಜೂ, 2ರಂದು ನಿವೃತ್ತ ಪ್ರಾಂಶುಪಾಲ ಡಾ| ಬಿ. ಜಗದೀಶ್ ಶೆಟ್ಟಿ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶ ತತ್ತ್ವ ಹಾಗೂ ಮೌಲ್ಯ ಅಳವಡಿಸಿ ಕೊಂಡು ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಯಬೇಕು ಎಂದರು. ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ದೈವಿಕ್ […]
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ ಎತ್ತರ ಜಿಗಿತದಲ್ಲಿ ಚಿನ್ನದ ಪದಕ.
ಕುಂದಾಪುರ: ಜೂನ್ 7ರಂದು ಕರ್ನಾಟಕ ರಾಜ್ಯ ಅಸೋಸಿಯೇಷನ್ ನವರು ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರಕಾಡಿನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಸೀನಿಯರ್ ಮತ್ತು 18 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ಸಿನನ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಬಂಟ್ವಾಳ: ಬಸ್ ಢಿಕ್ಕಿಯಾಗಿ ವೃದ್ದ ಮೃತ್ಯು.
ಬಂಟ್ವಾಳ: ಸಮೀಪ ರಸ್ತೆ ದಾಟುತ್ತಿದ್ದ ವೃದ್ದರೋರ್ವರಿಗೆ ಬಸ್ ಢಿಕ್ಕಿಯಾಗಿ ಮೃತಪಟ್ಟ ಘಟನೆ ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತುಂಬೆಯಲ್ಲಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ತುಂಬೆ ಸಮೀಪದ ಮುದಲ್ಮೆಪಡ್ಪು ನಿವಾಸಿ ಸೇಸಪ್ಪ ಪೂಜಾರಿ (89) ಎಂದು ತಿಳಿಯಲಾಗಿದೆ. ಮನೆಗೆ ಸಾಮಾಗ್ರಿಗಳನ್ನು ತರುವ ಉದ್ದೇಶದಿಂದ ತುಂಬೆ ಪೇಟೆಗೆ ಹೋಗುತ್ತಿದ್ದ ಸೇಸಪ್ಪ ಅವರು ವೈಶಾಲಿ ಹೋಟೆಲ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ತಲೆ ಹಾಗೂ ಮುಖಕ್ಕೆ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಐದು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್ಡ್ ನಲ್ಲಿ ಅರ್ಹತೆ
ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸುಜಿತ್ ಡಿ. ಕೆ, ಕೆ ಧ್ರುವ ಬಂಡಾರ್ಕರ್, ಅರ್ಜುನ್ ಇ ನಾಯಕ್, ಕಾರ್ತಿಕ್ ಎ. ಎಸ್, ಶಮಿತ್ ಎನ್ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಸುಜಿತ್ ಡಿ ಕೆ 3648, ಅರ್ಜುನ್ ಇ ನಾಯಕ್ 3298, ಕೆ ಧ್ರುವ ಬಂಡಾರ್ಕರ್ 4260ನೇ […]
ಮಣಿಪಾಲದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕರಿಸುವ ನೇರ ಪ್ರಸಾರ ಕಾರ್ಯಕ್ರಮ.
ಮಣಿಪಾಲ: ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಮಣಿಪಾಲ ವಾರ್ಡ್ ನಗರಸಭಾ ಸದಸ್ಯೆ ಶ್ರೀಮತಿ ಕಲ್ಪನಾ ಸುಧಾಮ ಹಾಗೂ ಮಣಿಪಾಲ ವಾರ್ಡಿನ ಕಾರ್ಯಕರ್ತರ ನೇತೃತ್ವದಲ್ಲಿ ಟೈಗರ್ ಸರ್ಕಲ್, ಬಸ್ ನಿಲ್ದಾಣ ಬಳಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕರಿಸುವ ಸಂಪೂರ್ಣ ನೇರ ಪ್ರಸಾರ ಎಲ್ಇಡಿ ಪರದೆಯ ಮೂಲಕ ನೇರಪ್ರಸಾರ ಮತ್ತು ಸಿಹಿ ತಿಂಡಿ, ಪಟಾಕಿ ಸಿಡುಮದ್ದು ಪ್ರದರ್ಶನ, ಹಾಗೂ ಮೋದಿ ಚಹಾ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹೆರ್ಗ […]