Modi 3.0: ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಸದಸ್ಯರು ಪ್ರಮಾಣವಚನ ಸ್ವೀಕಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರಾಗಿ ಕರ್ನಾಟಕದ ನಾಲ್ವರು ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಕೇಂದ್ರ ಸಚಿವರಾಗಿ ಹೆಚ್ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲಿಗೆ ದೇವರ ಹೆಸರಲ್ಲಿ ಹೆಚ್ಡಿಕೆ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು ಎರಡನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ. ಜೊತೆಗೆ ವಿ ಸೋಮಣ್ಣ ಅವರು ಕೂಡ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಹೆಬ್ರಿ: ಅಡಿಕೆ ಮರ ಬಿದ್ದು ವ್ಯಕ್ತಿ ಮೃತ್ಯು.
ಹೆಬ್ರಿ: ತಾಲೂಕಿನ ವರಂಗ ಗ್ರಾಮದ ಮುನಿಯಾಲು ಮಾತಿಬೆಟ್ಟು ಎಂಬಲ್ಲಿ ಜೂ.8ರಂದು ಅಡಿಕೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಶಂಕರ (62) ಎಂದು ಗುರುತಿಸಲಾಗಿದೆ. ಶಂಕರ ಮಾತಿಬೆಟ್ಟು ಅರುಣ್ ಎಂಬವರ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗದ್ದೆಯ ಬದಿಯಲ್ಲಿದ್ದ ಒಣಗಿದ ಅಡಿಕೆ ಮರ ಆಕಸ್ಮಿಕವಾಗಿ ತುಂಡಾಗಿ ಮೈ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3ನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ.
ನವದೆಹಲಿ: ಇಂದು ಭಾನುವಾರ ಎನ್ ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿದ್ದು, ಸತತ ಮೂರನೇ ಅವಧಿಗೆ ದೇಶದ ಪ್ರಧಾನವಾಗಿ ನರೇಂದ್ರ ದಾಮೋದರ ದಾಸ್ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿಯವರಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿಗಳುು ಪ್ರಮಾಣವಚನ ಬೋಧಿಸಿದಿರು. ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು […]
ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”
ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್, ಉಡುಪಿ ಇಲ್ಲಿನ ಅಂತಿಮ ವರ್ಷದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಯಾದ ಪ್ರಸನ್ನ ಜಿ ಶೇಟ್ ಇವರು ಐಎಸ್ಟಿಇ ಕರ್ನಾಟಕ ರಾಜ್ಯ ವಿಭಾಗದ 2023 – 2024ನೇ ಸಾಲಿನ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯು 2023-2024ರಲ್ಲಿ ಕಾಲೇಜಿನ ಐಎಸ್ಟಿಇ ವಿದ್ಯಾರ್ಥಿ ಘಟಕದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಕರ್ನಾಟಕ ಐಎಸ್ಟಿಇ ವತಿಯಿಂದ ನೀಡಲಾಗಿದೆ. ಮಂಡ್ಯದ ಪಿ ಇ ಎಸ್ […]
ಮಣಿಪಾಲ: ಮನೆಗೆ ನುಗ್ಗಿ ಚಿನ್ನಾಭರಣ ಕಳವು.
ಮಣಿಪಾಲ: ಉಡುಪಿ ಕುಂಜಿಬೆಟ್ಟುವಿನಲ್ಲಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. ಜೂ.5ರಂದು ಆರೋಪಿಗಳಾದ ವಾರಿಜಾ, ಗುಣಲಕ್ಷ್ಮೀ, ಮಮತಾ ಹಾಗೂ ರಿಕ್ಷಾ ಚಾಲಕರೊಬ್ಬರು ಕುಂಜಿಬೆಟ್ಟುವಿನ ಶಾಂತಾ ಅವರ ಮನೆಯ ಹಿಂದಿನ ಬದಿಯ ಹಂಚನ್ನು ಸರಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿ ಬಟ್ಟೆ ಬರೆ, ಸೂಟ್ ಕೇಸ್, 2 ಗ್ರಾಂ ತೂಕದ ಉಂಗುರ ಹಾಗೂ 1 ಗ್ರಾಂ ತೂಕದ ಬಂಗಾರದ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.