ರಂಗಶಿಕ್ಷಣ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ರಾಜ್ಯ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 15 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಈ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ರಂಗ ಶಿಕ್ಷಣ ತರಬೇತಿಗೆ ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರುವ, ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರುವ ಹಾಗೂ 18 ವರ್ಷ […]

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ: ಡಾ.ಧನಂಜಯ ಸರ್ಜಿಗೆ ಭರ್ಜರಿ ಗೆಲುವು

ಮೈಸೂರು: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಭರ್ಜರಿ ಬಹುಮತದಿಂದ ಗೆಲುವು ಕಂಡಿದ್ದಾರೆ. ರೋಚಕ ಕದನದಲ್ಲಿ ಬಿಜೆಪಿಯ ಧನಂಜಯ ಸರ್ಜಿ , ಕಾಂಗ್ರೇಸ್‍ನ ಆಯನೂರು ಮಂಜುನಾಥ್ , ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿ ಇದ್ದರು. ದಾವಣಗೆರೆಯ ಹೊನ್ನಳ್ಳಿಯಿಂದ ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿಯ ವರೆಗೆ ಐದುವರೆ ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವಮೊಗ್ಗದ ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರು 37627 ಮತಗಳನ್ನು ಪಡೆಯುವ […]

ಮಣಿಪಾಲ: MSDCಯಲ್ಲಿ “CNC, 3D ಪ್ರಿಂಟಿಂಗ್ & ವುಡ್ ವರ್ಕಿಂಗ್ ಸ್ಕಿಲ್ಸ್” ಕ್ರಾಶ್ ಕೋರ್ಸ್ ಗಳು ಲಭ್ಯ.

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ CNC, 3D ಪ್ರಿಂಟಿಂಗ್ ಮತ್ತು ಮರಗೆಲಸ(ವುಡ್ ವರ್ಕಿಂಗ್) ಕೌಶಲ್ಯದ ಕುರಿತು ಕ್ರಾಶ್ ಕೋರ್ಸ್’ಗಳಿಗೆ ದಾಖಲಾತಿ ಆರಂಭಗೊಂಡಿದೆ. ಕೋರ್ಸ್’ಗಳು: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📍ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಮಿಲ್ಕ್ ಡೈರಿ ರಸ್ತೆ, ಮಣಿಪಾಲದೂರವಾಣಿ: 9148757193/8123163934 ವೆಬ್‌ಸೈಟ್: https://[email protected]

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗಣಕಯಂತ್ರ ವಿಷಯಗಳನ್ನು ಮನದಟ್ಟು ಮಾಡಲು ಸಮರ್ಥರಾಗಬೇಕು: ಶ್ರೀ ಮಾರುತಿ

ಉಡುಪಿ: “ಪ್ರಥಮ ಪಿಯುಸಿ ಗಣಕವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಬರುವ ಮೊದಲ ಹಂತ ಅಂದರೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು“ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿರವರು ತಿಳಿಸಿದರು. ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಯ, ಬಂಟಕಲ್‌ ಇಲ್ಲಿ ಜೂನ್‌ 5 ರಂದು ನಡೆದ ಒಂದು ದಿನದ ಕಾರ್ಯಗಾರವನ್ನು […]

ನಿರಂತರ ಕಲಿಕೆಯಿಂದ ಕೌಶಲ್ಯ ವೃದ್ಧಿ: ಡಾ. ಭಾಸ್ಕರ್ ಶೆಟ್ಟಿ

ಉಡುಪಿ: ರಂಗ ಅಭಿನಯ, ಅಭಿನಯ ಕಲೆ, ರಂಗ ಕೌಶಲ್ಯಗಳಿಗೆ ನಿಕಟವಾದ ಸಂಬಂಧವಿದ್ದು, ಜಾಗತೀಕರಣ ಮತ್ತು ಜಾಗತೀಕರಣೋತ್ತರ ಸಂದರ್ಭದ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಕಲಿಕೆ ನಿಂತ ನೀರಾಗಬಾರದು, ನಿರಂತರವಾಗಿದ್ದರೆ ಮಾತ್ರ ಕೌಶಲ್ಯವನ್ನು ಗಳಿಸಲು ಸಾಧ್ಯ ಎಂದು ಡಾ. ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ.ಎಸ್ ಹೇಳಿದರು. ಅವರು ಬುಧವಾರ ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. […]