ಇಂದು ರಾಜ್ಯದ 13 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ: ಹಳದಿ ಅಲರ್ಟ್ ಘೋಷಣೆ.

ರಾಜ್ಯದ 13 ಜಿಲ್ಲೆಗಳಲ್ಲಿ ಇಂದು ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಜೂ.7ರ ವರೆಗೆ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಹಾಸನ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಜೂ.7ರ ವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಸರ್ಕ್ಯೂಲೇಶನ್ 4.5 ಮತ್ತು 5.8 ಕಿ.ಮೀ ಎತ್ತರದಲ್ಲಿ […]
‘2024ನೇ ಸಾಲಿನ ಇಂಟರ್’ನ್ಯಾಶನಲ್ ಐಕಾನಿಕ್ ಅನಿಮಲ್ ರೆಸ್ಕ್ಯೂ ಹೀರೋ’ ಪುರಸ್ಕಾರ ಪಡೆದ ತೌಸೀಫ್ ಅಹಮದ್

ಮಂಗಳೂರು: ಮಂಗಳೂರು ಮೂಲದ ಎಂ.ಬಿ.ಎ. ಪದವೀಧರರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಿಯಾಗಿರುವ ತೌಸೀಫ್ ಅಹಮದ್ ಇವರು ಅವರು ಪ್ರಾಣಿಪ್ರಿಯರಾಗಿದ್ದು, ಕಳೆದ 14 ವರ್ಷಗಳಿಂದ ಮಂಗಳೂರು ನಗರದಲ್ಲಿ ಬೀದಿಯ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಮೇ 28ರಂದು ಮುಂಬೈನಲ್ಲಿ ನಡೆದ ಇಂಟರ್’ನ್ಯಾಶನಲ್ ಐಕಾನಿಕ್ ಅವಾರ್ಡ್ಸ್ ಸೀಸನ್ 10 ನಲ್ಲಿ ‘2024ನೇ ಸಾಲಿನ ಇಂಟರ್’ನ್ಯಾಶನಲ್ ಐಕಾನಿಕ್ ಅನಿಮಲ್ ರೆಸ್ಕ್ಯೂ ಹೀರೋ’ ಎಂಬ ಪುರಸ್ಕಾರಕ್ಕೆ ಭಾಜನರಾದರು. ಪ್ಯಾರವೆಟ್ ತರಬೇತಿ ಪಡೆದ ತೌಸೀಫ್, ತಮ್ಮ ಜೀವನದ ಉದ್ದೇಶವೇ ಪ್ರಾಣಿರಕ್ಷಣೆ ಎಂದು ನಂಬಿದ್ದು, ಇದುವರೆಗೆ 18,000ಕ್ಕೂ ಹೆಚ್ಚು […]