ಕಾರ್ಕಳ: ವ್ಯಕ್ತಿ ನಾಪತ್ತೆ

ಕಾರ್ಕಳ: ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಜಲಕೋಡಿ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಳ್ಲಾರಿ ಜಿಲ್ಲೆಯ ಸಂಡೂರು ತಾಲೂಕು ನುಡುಗುರ್ತಿ ನಾಯಕರ ಬೀದಿಯ ನಿವಾಸಿ ಸಿದ್ದಪ್ಪ (37) ಎಂಬ ವ್ಯಕ್ತಿಯು ಮೇ.14 ರಂದು ಊರಿಗೆ ಹೋಗುವುದಾಗಿ ಹೇಳಿ ಹೋದವರು ಊರಿಗೂ ಹೋಗದೇ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ […]

ಉಡುಪಿ: ಲೋಕೋಪಯೋಗಿ ಇಲಾಖೆಯ ಸಂಜಯ ಅವರಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಲೋಕೋಪಯೋಗಿ ಇಲಾಖೆ, ಉಪ ವಿಭಾಗ ಉಡುಪಿ ಸುಮಾರು 31 ವರ್ಷಗಳ ಕಾಲ ದಸ್ತುಮೇಜು ಬರಹಗರಾಗಿ ಸೇವೆ ಸಲ್ಲಿಸಿದ ವಯೋ ನಿವೃತ್ತಿ ಹೊದ್ದಿದ್ದ ಸಂಜಯರವರ ಬೀಳ್ಕೊಡುಗೆ ಸಮಾರಂಭ ಬನ್ನಂಜೆ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಜರಗಿತು.ಮುಖ್ಯ ಅತಿಥಿಯಾದ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದಿನೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಾಯಕ ಪೂಜಾರಿ ಜೊತೆಗೂಡಿ ಸಂಜಯ ರವರಿಗೆ ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ಜೊತೆಗೆ ಬಂಗಾರದ ಉಂಗುರ ತೊಡಿಸಿ ಗೌರವಿಸಿದರು.ನಗರಸಭಾ ಸದಸ್ಯರಾದ ಶ್ರೀಶ ಭಟ್, ಇಂಜಿನಿಯರ ಉದಯ ಕುಮಾರ್ ಶೆಟ್ಟಿ, […]

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಂದ ವಿಭಿನ್ನ ವಿಧಾನದಿಂದ ಮಧುಮೇಹ ಪತ್ತೆ, ನಿಯಂತ್ರಿಸುವ ವೈಬ್ ಸೈಟ್ ಅಭಿವೃದ್ಧಿ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆರೋನ್ ಶರೋನ್ ಡಿಸೋಜಾ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು ಮುನೀರ್ ಮತ್ತು ಪೀಟರ್ ಕೇಟಾನೋ ಜೋವೋ ಇವರು ವಿಭಾಗದ ಪ್ರಾಧ್ಯಾಪಕಿಯಾದ ಶ್ರೀಮತಿ ಚೈತ್ರಾ ಇವರ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಧಾನವನ್ನು ಬಳಸಿಕೊಂಡು ಮಧುಮೇಹವನ್ನು ಪೂರ್ವಾಭಾವಿಯಾಗಿ ಪತ್ತೆ ಹಚ್ಚುವುದು ಮತ್ತು ಅದನ್ನು ನಿಯಂತ್ರಿಸುವ ವೈಬ್ ಸೈಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ವೈಬ್ ಸೈಟ್‍ನಲ್ಲಿ ಎರಡೂ ವಿಧಾನಗಳಲ್ಲಿ ಮಧುಮೇಹವನ್ನು ಪತ್ತೆಹಚ್ಚಬಹುದು. ಒಂದು ಉಪವಾಸ ಮತ್ತು […]

ತ್ರಿಶಾ ಕಾಲೇಜ್ ವಾರ್ಷಿಕೋತ್ಸವ ಸಮಾರಂಭ: ಯುವ ಜನತೆ ವರ್ತಮಾನವನ್ನು ಮರೆಯಬಾರದು – ವಾಲ್ಟರ್ ನಂದಳಿಕೆ

ಮಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಹಾಗೂ ತ್ರಿಶಾ ಸಂಜೆ ಕಾಲೇಜಿನ 2023-24 ನೇ ಸಾಲಿನ ವಾರ್ಷಿಕೋತ್ಸವವು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ದೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟರ್ ಡಿ`ಸೋಜಾ ನಂದಳಿಕೆಯವರು ಭಾಗವಹಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ”ಯುವ ಜನತೆ ತಮ್ಮ ಭೂತಕಾಲ ಮತ್ತು ಭವಿಷ್ಯದ ಚಿಂತೆಯಲ್ಲಿ […]