ಕಾರ್ಕಳ ಎಂ. ಪಿ. ಎಂ.ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ

ಕಾರ್ಕಳ : ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳೇ ಮೇಲು.ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ .ಜವಾಬ್ದಾರಿಯನ್ನು ಅರಿತವನಿಗೆ ಭಾಷೆ ಮುಖ್ಯ ಅಲ್ಲ ಎಂದು ಸೈಂಟ್ ಎಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಸ್ಯಶಾಸ್ತ್ರ ವಿಭಾಗ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ನಿರ್ದೇಶಕರಾದ ಪ್ರೊ.ಸುರೇಶನಾಥ್ ಎಮ್. ಎಲ್ ಅವರು ಹೇಳಿದ್ದಾರೆ. ಅವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ 2023-24ನೇ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ […]

ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ 17 ವಿದ್ಯಾರ್ಥಿಗಳು ಎನ್ ಎಂ ಎಂ ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ.

ಬೈಲೂರು: 2023- 24 ನೇ ಶೈಕ್ಷಣಿಕ ವರ್ಷದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರಮಟ್ಟದಲ್ಲಿ ನಡೆಯುವ, ಎನ್ಎಂಎಂಎಸ್ ಪ್ರತಿಭಾನ್ವಿತ ಪರೀಕ್ಷೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನ 17 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವುದರ ಮುಖಾಂತರ,ಉಡುಪಿ ಜಿಲ್ಲೆಯಲ್ಲಿ ಅತಿ ಗರಿಷ್ಠ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿನಿ ದಿಯಾ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದಿರುತ್ತಾಳೆ. ಈ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಎನ್ಎಂಎಂಎಸ್ ಪರೀಕ್ಷೆಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಪ್ರತಿ ವರ್ಷವೂ ಈ […]

ಡಿಪ್ಲೋಮಾ ತಂತ್ರಜ್ಞ, ತಂತ್ರಜ್ಞ ಮತ್ತು ಸಹಾಯಕ (ಸಿವಿಲ್) ಹುದ್ದೆಗೆ‌ ಅರ್ಜಿ ಆಹ್ವಾನ.

ಉಡುಪಿ, ಮೇ.31: ಏರ್‌ಕ್ರಾಪ್ಟ್ ರಿಸರ್ಚ್ & ಡಿಸೈನ್ ಸೆಂಟರ್‌ನಲ್ಲಿ, ಡಿಸೈನ್ ಕಾಂಪ್ಲೆಕ್ಸ್ ಯುಆರ್, ಒಬಿಸಿ, ಎಸ್ಸಿ, ಎಸ್ಟಿ ಹಾಗೂ ಇ ಡಬ್ಲ್ಯೂ ಎಸ್ ವರ್ಗಗಳಲ್ಲಿ ಡಿಪ್ಲೋಮಾ ತಂತ್ರಜ್ಞ, ತಂತ್ರಜ್ಞ ಮತ್ತು ಸಹಾಯಕ (ಸಿವಿಲ್) ಹುದ್ದೆಗೆ ಸಿಬ್ಬಂದಿಯನ್ನು ನಾಲ್ಕು ವರ್ಷ ಅವಧಿಗೆ ನೇಮಕ ಮಾಡುವ ಸಲುವಾಗಿ ಅರ್ಹರಿಂದ ವೆಬ್‌ಸೈಟ್ www.hal-india.co.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ. ಅಭ್ಯರ್ಥಿಗಳು 2024 ರ ಮೇ 31 ರ ಒಳಗಾಗಿ ಅಥವಾ ಮೊದಲು ಮಾನ್ಯತೆ ಪಡೆದ […]

ನೂರಾರು ವಿಶೇಷ ಚೇತನ ಮಕ್ಕಳ ಪಾಲಿಗೆ ಬೆಳಕಾದ ಡಾ.ಧನಂಜಯ ಸರ್ಜಿ.

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರ ಮಾನವೀಯ ಕಳಕಳಿಯಲ್ಲಿ ಅತೀ ಪ್ರಮುಖ ಸ್ಥಾನ ಪಡೆಯುವುದು ಸರ್ಜಿ ಫೌಂಡೇಶನ್ ನ ವಿಶೇಷಚೇತನ ಮಕ್ಕಳ ಶಾಲೆ. ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ ಅವರು 2016 ರಲ್ಲಿಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ಸರ್ಜಿ ಫೌಂಡೇಷನ್ ಅಡಿಯಲ್ಲಿ ಆ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವುದು ಸರ್ಜಿ ಅವರ ಮಾನವೀಯ ಮೌಲ್ಯಕ್ಕೆ ನಿದರ್ಶನವಾಗಿದೆ. […]

ಅತ್ಯಾಚಾರ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ ಎಸ್ಐಟಿ.

ರಾಜ್ಯದಲ್ಲಿ ಅಶ್ಲೀಲ ಪೆನ್ ಡ್ರೈವ್ ವಿಡಿಯೋ ಬಹಿರಂಗ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಇಂದು ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಆಗಮಿಸಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ 26ರಂದು ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಬಳಿಕ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಜರ್ಮನಿಗೆ ತೆರಳಿದ್ದರು. ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು […]