ಮಣಿಪಾಲ MSDC ಓರೆನ್ ಇಂಟರ್ನ್ಯಾಷನಲ್ ನಲ್ಲಿ “ಸ್ಕೂಲ್ ಆಫ್ ಐಟಿ ಸ್ಕಿಲ್ಸ್” ಅಲ್ಪಾವಧಿ ಕೋರ್ಸ್ ಗಳು ಲಭ್ಯ.
ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ) ಓರೆನ್ ಇಂಟರ್ನ್ಯಾಷನಲ್ ನಲ್ಲಿ “ಸ್ಕೂಲ್ ಆಫ್ ಐಟಿ ಸ್ಕಿಲ್ಸ್” (ಮಾಹಿತಿ ತಂತ್ರಜ್ಞಾನ ಕೌಶಲ್ಯ) ಕುರಿತು ಅಲ್ಪಾವಧಿ ಕೋರ್ಸ್’ಗಳ ಅರ್ಜಿ ಆಹ್ವಾನಿಸಲಾಗಿದೆ. 🔹ಪವರ್ ಬಿಐ ಬಳಸಿಕೊಂಡು ಡೇಟಾ ದೃಶ್ಯೀಕರಣ.🔹 ಪೂರ್ಣ ಸ್ಟಾಕ್ ಅಪ್ಲಿಕೇಶನ್ ಅಭಿವೃದ್ಧಿ.🔹 ಮ್ಯಾಕ್ರೋ VBA ಪ್ರೋಗ್ರಾಮಿಂಗ್ನೊಂದಿಗೆ ಸುಧಾರಿತ ಎಕ್ಸೆಲ್.🔹AI ಪರಿಕರಗಳೊಂದಿಗೆ ಆಫೀಸ್ ಆಟೊಮೇಷನ್, ಚಾಟ್ಜಿಪಿಟಿ.🔹 ಪೈಥಾನ್ ಪ್ರೋಗ್ರಾಮಿಂಗ್. ಕಾರ್ಯಕ್ರಮ ಶುಲ್ಕ ರೂ.2,500 ರಿಂದ ಪ್ರಾರಂಭವಾಗಲ್ಲಿದ್ದು, ಹೊಸ ಬ್ಯಾಚ್ ಜೂನ್ ನಿಂದ ಆರಂಭಗೊಳ್ಳಲಿದೆ.ಹೆಚ್ಚಿನ […]
ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ
ಉಡುಪಿ:ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀ ಮಹಾ ಚಂಡಿಕಾಯಾಗ, ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು. ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹದ ಸಮಕ್ಷಮದಲ್ಲಿ ಕೊಲಕಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರು ಚಂಡಿಕಾಯಾಗ ನೆರವೇರಿಸಿದರು.ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ, ಕನ್ನಿಕರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಬ್ರಹ್ಮಚಾರಿ ಆರಾಧನೆಗಳು, […]
ಮಣಿಪಾಲ: ಸಿಟಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು.
ಉಡುಪಿ: ಸಿಟಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.ಮೃತರನ್ನು ಈಶ್ವರ ನಗರದ ನಿವಾಸಿ ಮಹಾಬಲ ಶೆಟ್ಟಿಗಾರ್ (78) ಎಂದು ಗುರುತಿಸಲಾಗಿದೆ. ಮಣಿಪಾಲದಿಂದ ಪರ್ಕಳದತ್ತ ತೆರಳುತ್ತಿದ್ದ ಶ್ರೀ ಗಣೇಶ್ ಮೋಟಾರ್ಸ್ ಸಿಟಿ ಬಸ್ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ಸಂದರ್ಭದಲ್ಲಿ ಸಂಪೂರ್ಣ ಟ್ರಾಫಿಕ್ ದಟ್ಟನೆ ಉಂಟಾಯಿತು.
ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ರಿಜಿಸ್ಟ್ರಾರ್ ಮ್ಯಾರೇಜ್..!
ಕಾಸರಗೋಡು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಸರಗೋಡು ಶಾಲೆಯ ಹಿಂದೂ ಶಿಕ್ಷಕಿಯೊಬ್ಬರು ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು, ಇದು ಲವ್ ಜಿಹಾದ್ ಎಂಬ ಆರೋಪ ಕೇಳಿ ಬಂದಿದೆ. ಮೇ.23 ರಂದು ಮನೆಯಿಂದ ಹೊರಟಿದ್ದ ಶಿಕ್ಷಕಿ ಯುವತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ಯುವತಿಯ ತಂದೆ ದೂರು ದಾಖಲಿಸಿದ್ದರು. ಇದೀಗ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು, ಇಬ್ಬರೂ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ. ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರ ಭಾವಚಿತ್ರವಿರುವ ನೋಟಿಸ್ ಪತ್ತೆಯಾಗಿದ್ದು, ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿ ಮೇ.27 […]
ಮತ ಎಣಿಕೆ: ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ-2024 ರ ಮತ ಎಣಿಕಾ ಕಾರ್ಯವು ಜೂನ್ 4 ರಂದು ಉಡುಪಿಯ ಅಜ್ಜರಕಾಡು ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಹಿನ್ನೆಲೆ, ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ವರೆಗೆ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಗಿನಂತೆ ಮಾರ್ಪಾಡುಗಳನ್ನು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ. ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್ನಿಂದ ನಾಯಕ್ ಕ್ಯಾಂಟೀನ್ ವರೆಗಿನ ಮತ್ತು ಅಜ್ಜರಕಾಡು […]