ಝೀರೋದಿಂದ 256 ಬೆಡ್ ನ ಮಕ್ಕಳ ಆಸ್ಪತ್ರೆ ಕಟ್ಟಿದ ಡಾ.ಧನಂಜಯ ಸರ್ಜಿ
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ ಸರ್ಜಿ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಡಾ.ಧನಂಜಯ ಸರ್ಜಿ ಸಣ್ಣ ಪ್ರಾಯದಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣ ಪಡೆದು ಬೆಳೆದು ಬಂದವರು. ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಸರ್ಜಿಯವರು ಇಂದು ಖ್ಯಾತ ಮಕ್ಕಳ ತಜ್ಞ. ಅವರ ಜೀವನ ಸಾಧನೆ ಅಪಾರವಾದದ್ದು. ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ಜೊತೆ ಸಮಾಜಮುಖಿ ಕಾರ್ಯ ವಿವರಣೆ ಇಲ್ಲಿದೆ. ಉತ್ಕೃಷ್ಟ ಗುಣಮಟ್ಟದ ಸೇವೆ, ಕೈಗೆಟುಕುವ ದರದಲ್ಲಿ ರೋಗಿಗಳಿಗೆ […]
ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ
ಉಡುಪಿ: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಸುಲಲಿತವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸಲು ಅಗತ್ಯ ಇರುವ ಎಲ್ಲ ರೀತಿಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯದ ಪೂರ್ವ ತಯಾರಿಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರದ […]
ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ಕೇವಲ ರೂ.2000 ಗೆ “ಮೆಹಂದಿ ಆರ್ಟ್” ಸಮ್ಮರ್ ಕ್ಯಾಂಪ್.
ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ಮೇ.29ರಿಂದ ಜೂ.11 ರ ವರೆಗೆ ಕೇವಲ ರೂ.2000 ಗೆ “ಮೆಹಂದಿ ಆರ್ಟ್” ಸಮ್ಮರ್ ಕ್ಯಾಂಪ್ ನಡೆಯಲಿದೆ. ಈ ಕೋರ್ಸ್ ಪರಿಣಿತ ಮೆಹಂದಿ ಕಲಾವಿದರಿಂದ ಮೆಹಂದಿ ಆರ್ಟ್ ಕಲಿಸಿಕೊಡಲಾಗುತ್ತಿದ್ದು, ಗುಣಮಟ್ಟದ ವಸ್ತುಗಳೊಂದಿಗೆ ಪ್ರಾಯೋಗಿಕ ಅಭ್ಯಾಸ ನೀಡಲಾಗುವುದು. ಹಾಗೂ ಪ್ರಮಾಣಪತ್ರ ನೀಡುವರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐ.ವಿ.ಎಫ್. ಮತ್ತು ಫರ್ಟಿಲಿಟಿ ಕೇಂದ್ರಗಳಲ್ಲಿ ಮನ್ನಣೆ
ಮಣಿಪಾಲ, ಮೇ 28: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐ ವಿ ಎಫ್ ಮತ್ತು ಫರ್ಟಿಲಿಟಿ ಫಲವತ್ತತೆ ಕೇಂದ್ರಗಳಲ್ಲಿ ಒಂದು ಎಂಬ ಮನ್ನಣೆ ದೊರೆತಿದೆ. ಈ ಮನ್ನಣೆಯು ಆಸ್ಪತ್ರೆಯ ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆಗಳು ಮತ್ತು ಆರೋಗ್ಯ ವಿತರಣೆಗೆ ಅದರ ಸಹಾನುಭೂತಿಯ ವಿಧಾನದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿದೆ. ಮಣಿಪಾಲ ಸಹಹಿತಾ ಪ್ರಜನನ ಕೇಂದ್ರ (MARC), ಸಂತಾನಹೀನ ದಂಪತಿಗಳಿಗೆ ಕಳೆದ 35 ವರ್ಷಗಳ […]
ನಡೆದುಕೊಂಡು ಹೋಗುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಓರ್ವ ಬಾಲಕಿ ಮೃತ್ಯು.
ಬೆಂಗಳೂರು: ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆ ಪ್ರದೇಶದಲ್ಲಿ ಶನಿವಾರ ನಡೆದಿದೆ.ಶನಿವಾರ ಸಂಜೆ ಘಟನೆ ನಡೆದಿದ್ದು, ಬಾಲಕಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ರಾತ್ರಿ 7.15 ರ ಸುಮಾರಿಗೆ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ಬಾಲಕಿಯನ್ನು ತಾವರೆಕೆರೆಯ ನಾಗನಹಳ್ಳಿ ನಿವಾಸಿ ಪಿ ಕುಶ್ಮಿತಾ (4) ಎಂದು ಗುರುತಿಸಲಾಗಿದೆ. […]